- Kannada News Photo gallery How to Make Your iPhone and Android phone Battery Last Longer here is the tech tips
Tech Tips: ನಿಮ್ಮ ಸ್ಮಾರ್ಟ್ಫೋನ್ ಬ್ಯಾಟರಿ ಹೆಚ್ಚು ಸಮಯ ಬಾಳಿಕೆ ಬರಬೇಕೇ?: ಇಲ್ಲಿದೆ ಟಿಪ್ಸ್
Smartphone Battery Tips: ಈಗ ಬಿಡುಗಡೆ ಆಗುವ ಹೆಚ್ಚಿನ ಸ್ಮಾರ್ಟ್ಫೋನ್ಗಳು ಫಾಸ್ಟ್ ಚಾರ್ಜರ್ ಟೆಕ್ನಾಲಜಿ ಹೊಂದಿರುತ್ತದೆ. ಇದರಿಂದ ಕೆಲವೇ ನಿಮಿಷಗಳಲ್ಲಿ ಬ್ಯಾಟರಿ ಫುಲ್ ಆಗುತ್ತದೆ. ಆದರೆ, ಇದನ್ನು ಸರಿಯಾಗಿ ಉಪಚರಿಸಿಲ್ಲ ಎಂದಾದರೆ ಅಷ್ಟೇ ವೇಗವಾಗಿ ಬ್ಯಾಟರಿ ಕೆಟ್ಟ ಹೋಗುತ್ತದೆ.
Updated on: Dec 31, 2023 | 6:55 AM

ಇಂದು 5000mAh ನಿಂದ ಹಿಡಿದು 7000mAh ವರೆಗಿನ ಬ್ಯಾಟರಿಯ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿದೆ. ಇವು ದೀರ್ಘ ಸಮಯ ಚಾರ್ಜ್ ಬರುತ್ತದೆ. ಆದರೆ, ಈ ಬ್ಯಾಟರಿಯನ್ನು ಜೋಪಾನವಾಗಿ ಕಾಪಾಡಿಕೊಳ್ಳದಿದ್ದರೆ ಕೆಲವೇ ತಿಂಗಳುಗಳಲ್ಲಿ ಹಾಳಾಗುವ ಸಾಧ್ಯತೆ ಇರುತ್ತದೆ.

ಈಗ ಬಿಡುಗಡೆ ಆಗುವ ಹೆಚ್ಚಿನ ಸ್ಮಾರ್ಟ್ಫೋನ್ಗಳು ಫಾಸ್ಟ್ ಚಾರ್ಜರ್ ಟೆಕ್ನಾಲಜಿ ಹೊಂದಿರುತ್ತದೆ. ಇದರಿಂದ ಕೆಲವೇ ನಿಮಿಷಗಳಲ್ಲಿ ಬ್ಯಾಟರಿ ಫುಲ್ ಆಗುತ್ತದೆ ನಿಜ. ಆದರೆ, ಇದನ್ನು ಸರಿಯಾಗಿ ಉಪಚರಿಸಿಲ್ಲ ಎಂದಾದರೆ ಅಷ್ಟೇ ವೇಗವಾಗಿ ಬ್ಯಾಟರಿ ಕೆಟ್ಟ ಹೋಗುತ್ತದೆ. ಹಾಗಾದರೆ ಸ್ಮಾರ್ಟ್ಫೋನ್ ಬ್ಯಾಟರಿ ದೀರ್ಘ ಕಾಲದವರೆಗೆ ಬಾಳಿಕೆ ಬರಲು ಏನು ಮಾಡಬೇಕು?.

ನಿಮ್ಮ ಮೊಬೈಲ್ನೊಂದಿಗೆ ನೀಡಿರುವ ಚಾರ್ಜರ್ ನಿಂದಲೇ ಫೋನ್ ಅನ್ನು ಚಾರ್ಜ್ ಮಾಡಿರಿ. ಸದ್ಯ ಎಲ್ಲ ಮೊಬೈಲ್ಗಳು ಯುಎಸ್‌ಬಿ ಕೇಬಲ್ ನಿಂದಲೇ ಚಾರ್ಜ್ ಆಗಲಿದೆ. ಹಾಗೆಂದು ಅದನ್ನು ಕಂಪ್ಯೂಟರ್ಗೆ ಹಾಕಿ ಇಲ್ಲವೇ ಬೇರೆ ಕಂಪನಿಗಳ ಚಾರ್ಜರ್ ಬಳಸಿ ಚಾರ್ಜ್ ಮಾಡಿದರೆ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಕಂಪನಿ ನೀಡಿರುವ ಚಾರ್ಜರ್ ನಿಂದಲೇ ಚಾರ್ಜ್ ಮಾಡಿ. ಆಗ ಬ್ಯಾಟರಿ ಕೂಡ ದೀರ್ಘ ಕಾಲದ ವರೆಗೆ ಬಾಳಿಕೆ ಬರುತ್ತದೆ.

ಮೊಬೈಲ್ ಓವರ್ಹೀಟ್ ಮಾಡುವುದು ಕೂಡ ಬ್ಯಾಟರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ರ್ಯಾಮ್ ಕಡಿಮೆ ಇದ್ದಾಗ ಅತಿಯಾಗಿ ಗೇಮ್ ಆಡಿದರೆ ಮೊಬೈಲ್ ಹೀಟ್ ಆಗುತ್ತದೆ. ಕೂಡಲೇ ಗೇಮ್ ಆಡುವುದನ್ನು ನಿಲ್ಲಿಸಿ. ಮೊಬೈಲ್ ಕೂಲ್ ಆಗುವವರೆಗೂ ಬಳಕೆ ಮಾಡಬೇಡಿ.

ಕಾರು ಅಥವಾ ಬೈಕುಗಳಲ್ಲಿರುವ ಚಾರ್ಜರ್‌ಗಳ ಮೂಲಕವೂ ಫೋನ್ ಬ್ಯಾಟರಿ ರೀಚಾರ್ಜ್ ಮಾಡುವ ಅಭ್ಯಾಸವನ್ನು ಸಾಧ್ಯವಾದಷ್ಟು ತಪ್ಪಿಸಿ. ಯಾಕೆಂದರೆ, ಅದರಿಂದ ಬರುವ ಅಧಿಕ ಪ್ರಮಾಣದ ವಿದ್ಯುತ್ ಪ್ರವಾಹವು ಫೋನ್‌ನ ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ.

ಕೆಲವರು ಮೊಬೈಲ್ ಅನ್ನು ರಾತ್ರಿ ಇಡೀ ಚಾರ್ಜ್‌ಗೆ ಹಾಕಿ ಬಿಟ್ಟಿರುತ್ತಾರೆ. ಈ ರೀತಿ ಮಾಡುವುದು ಅಪಾಯಕಾರಿ. ಇದರಿಂದ ಬ್ಯಾಟರಿಯು ದೀರ್ಘಕಾಲ ಬಾಳಿಕೆ ಬರುವುದಿಲ್ಲ. ಅತಿಯಾಗಿ ಚಾರ್ಜ್ ಮಾಡುವುದೂ ಬೇಡ. ಶೇ 90 ರಷ್ಟು ಚಾರ್ಜ್ ಆದ ಕೂಡಲೇ ಚಾರ್ಜರ್ ಆಫ್ ಮಾಡಿ.

ಮಾರುಕಟ್ಟೆಯಲ್ಲಿ ವೈಫೈ, ಬ್ಲ್ಯೂಟೂತ್ ಮೂಲಕ ಚಾರ್ಜ್ ಮಾಡಿಕೊಳ್ಳುವ ವೈರ್ ಲೈಸ್ ಚಾರ್ಜರ್ ಲಭ್ಯವಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಇವುಗಳಿಂದ ದೂರವಿದ್ದರೆ ಮೊಬೈಲ್ ಬ್ಯಾಟರಿ ಆರೋಗ್ಯ ಚೆನ್ನಾಗಿರುತ್ತದೆ.

ಬ್ಯಾಟರಿ ಫುಲ್ ಚಾರ್ಜ್ ಮಾಡುವುದು ಎಷ್ಟು ತಪ್ಪೋ ಅದೇ ರೀತಿ ಬ್ಯಾಟರಿ ಲೋ ಆದಾಗಲೂ ಬ್ಯಾಟರಿ ಮೇಲೆ ಒತ್ತಡ ಬೀಳುತ್ತದೆ. ಹೀಗಾಗಿ ಮೊಬೈಲ್ 20 ಪ್ರತಿಶತ ಚಾರ್ಜ್‌ಗೆ ಬರುತ್ತಿದ್ದಂತೆಯೇ 80 ಪ್ರತಿಶತ ಚಾರ್ಜ್ ಆಗುವವರೆಗೆ ಚಾರ್ಜ್ ಮಾಡಿ. ಹೀಗೆ ಮಾಡಿದರೆ ಬ್ಯಾಟರಿ ದೀರ್ಘ ಕಾಲದವರೆಗೆ ಬಾಳಿಕೆ ಬರುತ್ತದೆ.



















