ಬೆಳ್ಳುಳ್ಳಿಯನ್ನು ದೀರ್ಘ ಕಾಲ ಸಂರಕ್ಷಿಸಿಡಲು ಸುಲಭ ಉಪಾಯ ಇಲ್ಲಿದೆ
ಬೆಳ್ಳುಳ್ಳಿಯನ್ನು ಮಲಗುವ ಮುನ್ನ ಅಥವಾ ಬೆಳಿಗ್ಗೆ ಹೊಟ್ಟೆಯಲ್ಲಿ ಸೇವಿಸಬೇಕು. ಬ್ಯಾಕ್ಟೀರಿಯಾಗಳು ಹೆಚ್ಚು ದುರ್ಬಲವಾಗುವ ಈ ಸಮಯದಲ್ಲಿ ಬೆಳ್ಳುಳ್ಳಿ ತಿನ್ನುವುದು ಪ್ರಯೋಜನಕಾರಿ. ಬೆಳ್ಳುಳ್ಳಿ ಬೇಗ ಕೊಳೆತು ಹಾಳಾಗುವುದನ್ನು ತಡೆಯಲು ಕೆಲವು ಉಪಾಯಗಳು ಇಲ್ಲಿವೆ.
Updated on: Oct 09, 2023 | 8:15 PM

ಬೆಳ್ಳುಳ್ಳಿ ಅಡುಗೆಗೆ ಹೊಸ ರುಚಿ ನೀಡುತ್ತದೆ, ಆರೋಗ್ಯವನ್ನೂ ಕಾಪಾಡುತ್ತದೆ. ಬೆಳ್ಳುಳ್ಳಿ ವಿವಿಧ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಬೆಳ್ಳುಳ್ಳಿ ವಿಟಮಿನ್ ಸಿ, ಕೆ, ಫೋಲೇಟ್, ನಿಯಾಸಿನ್ ಮತ್ತು ಥಯಾಮಿನ್‌ನ ಉತ್ತಮ ಮೂಲವಾಗಿದೆ.

ಬೊಜ್ಜನ್ನು ಕಡಿಮೆ ಮಾಡಲು ಬೆಳ್ಳುಳ್ಳಿ ಸೇವನೆ ಸಹಕಾರಿಯಾಗಿದೆ. ಬೆಳ್ಳುಳ್ಳಿಯ ನಿಯಮಿತ ಬಳಕೆಯೊಂದಿಗೆ ದೇಹದ ತೂಕ ಇಳಿಕೆಯಾಗುತ್ತದೆ.

ರುಬ್ಬಿದ ಬೆಳ್ಳುಳ್ಳಿಯ ಪೇಸ್ಟ್ ಅನ್ನು ಫ್ರಿಡ್ಜ್ನಲ್ಲಿಡಿ. ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡುವಾಗ ಅದರ ಜೊತೆಗೆ ನೀವು ತಾಜಾ ಗಿಡಮೂಲಿಕೆಗಳನ್ನು ಸಹ ಬಳಸಬಹುದು.

ಬೆಳ್ಳುಳ್ಳಿಯನ್ನು ಮಲಗುವ ಮುನ್ನ ಅಥವಾ ಬೆಳಿಗ್ಗೆ ಹೊಟ್ಟೆಯಲ್ಲಿ ಸೇವಿಸಬೇಕು. ಬ್ಯಾಕ್ಟೀರಿಯಾಗಳು ಹೆಚ್ಚು ದುರ್ಬಲವಾದ ಈ ಸಮಯದಲ್ಲಿ ಬೆಳ್ಳುಳ್ಳಿ ತಿನ್ನುವುದು ಪ್ರಯೋಜನಕಾರಿ.

ಬೆಳ್ಳುಳ್ಳಿ ದೇಹದ ಅನೇಕ ಭಾಗಗಳಿಗೂ ಪ್ರಯೋಜನವನ್ನು ನೀಡುತ್ತದೆ. ಬೆಳ್ಳುಳ್ಳಿ ವಿಟಮಿನ್ ಬಿ1, ಬಿ6, ಕ್ಯಾಲ್ಸಿಯಂ, ತಾಮ್ರ, ಸೆಲೆನಿಯಮ್ ಮತ್ತು ಮ್ಯಾಂಗನೀಸ್ ಅನ್ನು ಹೊಂದಿದೆ.

ಬೆಳ್ಳುಳ್ಳಿ ಬೇಗ ಒಣಗಿ, ಕೊಳೆತು ಹಾಳಾಗುವುದನ್ನು ತಡೆಯಲು ಉಪಾಯ ಇಲ್ಲಿವೆ.

ಬೆಳ್ಳುಳ್ಳಿಯನ್ನು ಹೆಚ್ಚು ಕಾಲ ಸಂಗ್ರಹಿಸಿಡಲು ಬೆಳ್ಳುಳ್ಳಿಯ ಎಸಳನ್ನು ಅದರ ಸಿಪ್ಪೆ ಸುಲಿದು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಆದರೆ, ಅದಕ್ಕೆ ನೀರು ಸೇರಿಸಬೇಡಿ.









