ವಿದ್ಯುತ್ ಬಿಲ್ ಕಡಿಮೆ ಮಾಡುವುದು ಹೇಗೆ? ಕರೆಂಟ್ ಖರ್ಚು ಉಳಿಸಲು ಏನೆಲ್ಲಾ ಮಾಡಬಹುದು? ಇಲ್ಲಿದೆ ವಿವರ

Edited By:

Updated on: Sep 28, 2021 | 5:45 PM

How to Reduce Electricity Bill at Home: ಮನೆಯ ಸಮೀಪ ಮರ ಗಿಡಗಳು ಇರುವಂತೆ ನೋಡಿಕೊಳ್ಳಬೇಕು. ಅಲ್ಲದೆ, ಮನೆಯ ವಿದ್ಯುತ್ ಉಪಕರಣಗಳ ಬಗ್ಗೆ ಗಮನ ಹರಿಸುವುದು ಕೂಡ ಉತ್ತಮ.

1 / 6
ಕೊರೊನಾ ಹಾಗೂ ಲಾಕ್​ಡೌನ್ ಬಳಿಕ ಬೆಲೆ ಏರಿಕೆ, ಅಗತ್ಯ ವಸ್ತುಗಳು ಮತ್ತು ಇಂಧನ ದುಬಾರಿ ಆಗಿದೆ. ಇದರಿಂದ ಜನರು ಹಣ ಉಳಿತಾಯ ಮಾಡಲು ಕಷ್ಟಪಡುತ್ತಿದ್ದಾರೆ. ಮನೆಯ ಆಯವ್ಯಯ ನೋಡಿಕೊಳ್ಳುವುದು ಸವಾಲಾಗಿದೆ.

ಕೊರೊನಾ ಹಾಗೂ ಲಾಕ್​ಡೌನ್ ಬಳಿಕ ಬೆಲೆ ಏರಿಕೆ, ಅಗತ್ಯ ವಸ್ತುಗಳು ಮತ್ತು ಇಂಧನ ದುಬಾರಿ ಆಗಿದೆ. ಇದರಿಂದ ಜನರು ಹಣ ಉಳಿತಾಯ ಮಾಡಲು ಕಷ್ಟಪಡುತ್ತಿದ್ದಾರೆ. ಮನೆಯ ಆಯವ್ಯಯ ನೋಡಿಕೊಳ್ಳುವುದು ಸವಾಲಾಗಿದೆ.

2 / 6

ಮತ್ತೊಂದು ಕಡೆ ಕರೆಂಟ್ ಬಿಲ್ ಕೂಡ ಕಟ್ಟಬೇಕು. ಒಟ್ಟಾರೆ ಬೆಲೆ ಏರಿಕೆಯನ್ನು ಕಡಿಮೆ ಆಗುವಂತೆ ನಾವು ಮಾಡಲು ಆಗುವುದಿಲ್ಲ. ಆದರೆ, ಕೆಲವು ಖರ್ಚುಗಳನ್ನು ಉಳಿತಾಯ ಮಾಡಿ ಅದರ ಪರಿಣಾಮ ಕಡಿಮೆ ಮಾಡಿಕೊಳ್ಳಬಹುದು. ವಿದ್ಯುತ್ ಬಿಲ್ ಕಡಿಮೆ ಮಾಡುವುದು ಕೂಡ ಒಂದು ದಾರಿ.

3 / 6

ಮನೆಯಲ್ಲಿ ಸರಿಯಾದ ಜಾಗದಲ್ಲಿ ಕಿಟಕಿ ಹಾಗೂ ಬಾಗಿಲು ಇರುವುದು ಅತಿ ಅಗತ್ಯ. ಇದರಿಂದಾಗಿ ಬೆಳಗಿನ ಹೊತ್ತಿನಲ್ಲಿ ಕೂಡ ಮನೆಯ ಲೈಟ್ ಆನ್ ಮಾಡುವುದು ತಪ್ಪುತ್ತದೆ. ಈಗಿನ ದಿನಮಾನದಲ್ಲಿ ಮನೆಯ ಮಾಡಿಗೆ ಪಾರದರ್ಶಕ ಗ್ಲಾಸ್​ಗಳನ್ನು ಅಳವಡಿಸುವ ಕ್ರಮವೂ ಇದೆ. ಅದರಿಂದಲೂ ಬಹಳ ಬೆಳಕು ಮನೆಯೊಳಗೆ ಪ್ರವೇಶಿಸುತ್ತದೆ.

4 / 6

ಮನೆಯ ಮಾಡಿಗೆ ಸೋಲಾರ್ ಪ್ಯಾನೆಲ್​ಗಳನ್ನು ಅಳವಡಿಸುವುದು ಮತ್ತೊಂದು ಕ್ರಮ. ಹೀಗೆ ಮಾಡುವುದರಿಂದ ಬಹಳಷ್ಟು ಪ್ರಮಾಣದ ವಿದ್ಯುತ್ ಬಿಲ್ ಕಡಿತಗೊಳಿಸಬಹುದು. ಮನೆಯ ಲೈಟ್, ಫ್ಯಾನ್ ಇತ್ಯಾದಿಗಳನ್ನು ಕೂಡ ಸೋಲಾರ್ ಮೂಲಕ ನಡೆಸಬಹುದು. ಇದರಿಂದ ಕರೆಂಟ್ ಬಿಲ್ ಕಡಿತವಾಗುತ್ತದೆ.

5 / 6

ಮನೆಯ ಸಮೀಪ ಮರ ಗಿಡಗಳು ಇರುವಂತೆ ನೋಡಿಕೊಳ್ಳಬೇಕು. ಅಲ್ಲದೆ, ಮನೆಯ ವಿದ್ಯುತ್ ಉಪಕರಣಗಳ ಬಗ್ಗೆ ಗಮನ ಹರಿಸುವುದು ಕೂಡ ಉತ್ತಮ. ಉದಾಹರಣೆಗೆ, ಎಲೆಕ್ಟ್ರಿಕ್ ಬಲ್ಬ್ ಬದಲಾಗಿ, ಎಲ್​ಇಡಿ ಅಳವಡಿಸುವುದು ಒಳ್ಳೆಯದು. ಅದು ಕಡಿಮೆ ವಿದ್ಯುತ್ ಬಳಸುತ್ತದೆ. ಇತ್ತೀಚೆಗೆ ಸೆನ್ಸಾರ್ ಲೈಟ್​ಗಳು ಕೂಡ ಬಂದಿವೆ. ಅಂದರೆ, ನಿಗದಿತ ಪ್ರಮಾಣದ ಬೆಳಕು ಇದ್ದಾಗ ಅದು ತಾನಾಗಿಯೇ ಆಫ್ ಆಗುತ್ತದೆ.

6 / 6

ಮನೆ ಕಟ್ಟಲು ಬಳಸಿರುವ ವಸ್ತುಗಳು ಕೂಡ ಮುಖ್ಯವಾಗುತ್ತದೆ. ಸಾಧ್ಯವಾದಷ್ಟು ಪ್ರಾಕೃತಿಕವಾಗಿ ಲಭ್ಯವಿರುವ ಸೌಕರ್ಯ ಬಳಸಿ ಮನೆ ನಿರ್ಮಿಸುವುದು ಒಳ್ಳೆಯದು.

Loading...
Unable to load recommendations.
Follow Us