
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಹೊಗೆನಕಲ್ ಜಲಪಾತ ಮೈದುಂಬಿ ಹರಿಯುತ್ತಿದೆ. ಇದನ್ನು ನೋಡಲು ಆಕರ್ಷಿತವಾಗಿದೆ.

ಭೋರ್ಗರೆವ ಹೊಗೇನಕಲ್ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬ. ಬಂಡೆಗಳ ನಡುವೆ ಧುಮ್ಮಿಕ್ಕಿ ಹರಿಯುವ ನೀರು ಮನಸ್ಸಿಗೆ ಉಲ್ಲಾಸ ನೀಡುತ್ತದೆ.

‘ಹೊಗೆ’ ಎಂದರೆ ಹೊಗೆ ಮತ್ತು ‘ಕಲ್ಲು’ ಎಂದರೆ ಕನ್ನಡದಲ್ಲಿ ಬಂಡೆ. ಹೊಗೆನಕ್ಕಲ್ ಎಂದರೆ ಬಂಡೆಗಳ ಮೇಲೆ ಹೊಗೆ ಎಂದರ್ಥ, ಕಾವೇರಿ ನದಿ ಕರ್ನಾಟಕದಿಂದ ತಮಿಳುನಾಡಿಗೆ ಪ್ರವೇಶಿಸುತ್ತಿದ್ದಂತೆ ಬಂಡೆಗಳ ಮೇಲೆ ಸಾಕಷ್ಟು ನೀರು ಬೀಳುವಾಗ ಅದು ಹೇಗೆ ಕಾಣುತ್ತದೆ. ಈ ಜಲಪಾತ ನೋಡುವುದೇ ವಿಸ್ಮಯ. ಒಮ್ಮೆಯಾದ್ರು ಹೊಗೆನಕ್ಕಲ್ ನೋಡಲೇ ಬೇಕು.

ಕಾವೇರಿ ನದಿಗೆ ಒಂದು ಲಕ್ಷ ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ಹೊಗೆನಕಲ್ ಜಲಪಾತ ಬೋರ್ಗರೆಯುತ್ತಿದೆ. ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಪ್ರವಾಸೋದ್ಯಮ ಚಟುವಟಿಕೆ ಬಂದ್ ಮಾಡಲಾಗಿದೆ. ತೆಪ್ಪ ವಿಹಾರ ಕೂಡ ಬಂದ್ ಮಾಡಲಾಗಿದೆ. ಸದ್ಯ ದೂರದಿಂದ ನಿಂತು ವೀಕ್ಷಣೆಗಷ್ಟೆ ಅವಕಾಶ.
Published On - 10:57 pm, Wed, 13 July 22