- Kannada News Photo gallery Cricket photos Arun Lal plans his HONEYMOON destination with newly wed after resigning from bengal ranji trophy
66 ನೇ ವಯಸ್ಸಿನಲ್ಲಿ ಮದುವೆ: ಈಗ ಕೋಚ್ ಹುದ್ದೆಗೆ ರಾಜೀನಾಮೆ ನೀಡಿ ಹನಿಮೂನ್‌ಗೆ ಹಾರಿದ ಭಾರತದ ಮಾಜಿ ಕ್ರಿಕೆಟಿಗ
77 ದಿನಗಳ ಹಿಂದೆ ಅರುಣ್ ಲಾಲ್ ತನಗಿಂತ 28 ವರ್ಷ ಕಿರಿಯ ಬುಲ್ ಬುಲ್ ಎಂಬಾಕೆಯನ್ನು ಮದುವೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿತ್ತು. ಇದೀಗ ರಾಜೀನಾಮೆ ನೀಡಿದ ಬಳಿಕ ಹನಿಮೂನ್‌ಗೆ ತೆರಳಲು ಮುಂದಾಗಿದ್ದಾರೆ.
Updated on:Jul 13, 2022 | 10:43 PM

ಭಾರತದ ಮಾಜಿ ಕ್ರಿಕೆಟಿಗ ಅರುಣ್ ಲಾಲ್ ಅವರು ಬಂಗಾಳ ರಣಜಿ ತಂಡದ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅರುಣ್ ಲಾಲ್ ಈ ಸೀಸನ್ನ ರಣಜಿಯಲ್ಲಿ ಬೆಂಗಾಲ್ ತಂಡವನ್ನು ಸೆಮಿಫೈನಲ್‌ಗೆ ಮುನ್ನಡೆಸಿದ್ದರು. ತಂಡದೊಂದಿಗೆ ಬಹಳ ದಿನಗಳಿಂದ ಒಡನಾಟವಿದ್ದರೂ ಈಗ ವಯಸ್ಸಾಯಿತು, ಆಯಾಸದಿಂದ ರಾಜೀನಾಮೆ ನೀಡಿದ್ದೇನೆ ಎಂಬ ಮಾಹಿತಿ ನೀಡಿದ್ದಾರೆ.

ನಾನು ಸಂತೋಷದಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ಅತೃಪ್ತಿಯ ಪ್ರಶ್ನೆಯೇ ಇಲ್ಲ. ನಾನು ಹಳೇ ಬಂಗಾಳ ತಂಡ ಈಗ ಮೊದಲಿಗಿಂತ ಉತ್ತಮ ಫಾರ್ಮ್‌ನಲ್ಲಿದೆ. ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಬಂಗಾಳದ ಆಟಗಾರರು ಮೇಲುಗೈ ಸಾಧಿಸಲಿದ್ದಾರೆ.

ಈಗ ಕುಟುಂಬದೊಂದಿಗೆ ಸಮಯ ಕಳೆಯಲು ಬಯಸುತ್ತಿದ್ದೇನೆ ಎಂದು ಅರುಣ್ ಲಾಲ್ ಹೇಳಿದ್ದಾರೆ. 77 ದಿನಗಳ ಹಿಂದೆ ಅರುಣ್ ಲಾಲ್ ತನಗಿಂತ 28 ವರ್ಷ ಕಿರಿಯ ಬುಲ್ ಬುಲ್ ಎಂಬಾಕೆಯನ್ನು ಮದುವೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿತ್ತು. ಇದೀಗ ರಾಜೀನಾಮೆ ನೀಡಿದ ಬಳಿಕ ಹನಿಮೂನ್‌ಗೆ ತೆರಳಲು ಮುಂದಾಗಿದ್ದಾರೆ.

ಅರುಣ್ ಲಾಲ್ ತನ್ನ ನವ ವಧುವಿನ ಜೊತೆ ಟರ್ಕಿಗೆ ಹೋಗಲು ಯೋಜಿಸುತ್ತಿರುವುದಾಗಿ ಹೇಳಿದರು. ಆದಾಗ್ಯೂ, ಇದಕ್ಕೂ ಮುನ್ನ ಅವರು ಶೀಘ್ರದಲ್ಲೇ ಡಾರ್ಜಿಲಿಂಗ್ ಮತ್ತು ಕಾಲಿಂಪಾಂಗ್‌ಗೆ ಭೇಟಿ ನೀಡಲಿದ್ದಾರೆ. ಕ್ರಿಕೆಟ್‌ನಿಂದ ದೂರ ಉಳಿದು ಕುಟುಂಬಕ್ಕೆ ಪೂರ್ಣ ಸಮಯವನ್ನು ನೀಡಲು ಬಯಸಿದ್ದಾರೆ.

66 ವರ್ಷದ ಅರುಣ್ ಲಾಲ್ ಅವರು ಬುಲ್ಬುಲ್ ಸಹಾ ಅವರನ್ನು ಮೇ 2 ರಂದು ಕೋಲ್ಕತ್ತಾದಲ್ಲಿ ವಿವಾಹವಾದರು. ಈ ಮದುವೆಯು ಅವರ ಮೊದಲ ಹೆಂಡತಿಯ ಒಪ್ಪಿಗೆಯನ್ನು ಒಳಗೊಂಡಿತ್ತು. ಅರುಣ್ ಮತ್ತು ಬುಲ್ಬುಲ್ ಪರಸ್ಪರ ಬಹಳ ಹಿಂದಿನಿಂದಲೂ ಪರಿಚಿತರು. ಅವರ ಮದುವೆಯ ಫೋಟೋಗಳು ಸಾಕಷ್ಟು ವೈರಲ್ ಆಗಿದ್ದವು.
Published On - 7:40 pm, Wed, 13 July 22




