Updated on:Jul 13, 2022 | 3:28 PM
ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಪಡೆದು 3 ಆಟಗಾರರನ್ನು ಹಿಂದಿಕ್ಕಿ ಬುಮ್ರಾ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದಿದ್ದಾರೆ. ಓವಲ್ ODI ಗಿಂತ ಮೊದಲು ಬುಮ್ರಾ ನಾಲ್ಕನೇ ಸ್ಥಾನದಲ್ಲಿದ್ದರು ಆದರೆ ಅದ್ಭುತ ಬೌಲಿಂಗ್ ನಂತರ ಅವರು ಈಗ ನಂಬರ್ ಒನ್ ಆಗಿದ್ದಾರೆ.
ಜಸ್ಪ್ರೀತ್ ಬುಮ್ರಾ, ಕ್ರಿಸ್ ವೋಕ್ಸ್, ಶಾಹೀನ್ ಅಫ್ರಿದಿ ಮತ್ತು ಟ್ರೆಂಟ್ ಬೌಲ್ಟ್ ಅವರನ್ನು ಹಿಂದಿಕ್ಕಿ ಈ ದಾಖಲೆ ಮಾಡಿದ್ದಾರೆ. ಓವಲ್ ODI ಮೊದಲು ಟ್ರೆಂಟ್ ಬೌಲ್ಟ್ ನಂಬರ್ 1 ಬೌಲರ್ ಆಗಿದ್ದರು ಆದರೆ ಬುಮ್ರಾ ಕೇವಲ 19 ರನ್‌ಗಳಿಗೆ 6 ವಿಕೆಟ್ ಪಡೆಯುವ ಮೂಲಕ ಕಿವೀಸ್ ಬೌಲರ್‌ನಿಂದ ಅವರ ಕುರ್ಚಿಯನ್ನು ಕಸಿದುಕೊಂಡರು.
ಓವಲ್ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದ ಬುಮ್ರಾ, ಟೀಂ ಇಂಡಿಯಾಗೆ 10 ವಿಕೆಟ್‌ಗಳ ದೊಡ್ಡ ಗೆಲುವು ತಂದುಕೊಟ್ಟರು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಕೇವಲ 110 ರನ್‌ಗಳಿಗೆ ಆಲೌಟ್ ಆಯಿತು. ಆಂಗ್ಲರು ಕೇವಲ 25.2 ಓವರ್‌ಗಳನ್ನು ಮಾತ್ರ ವಿಕೆಟ್‌ನಲ್ಲಿ ಮುಂದೆ ನಿಲ್ಲಲು ಸಾಧ್ಯವಾಯಿತು.
ಇದಕ್ಕೆ ಉತ್ತರವಾಗಿ ಭಾರತದ ಆರಂಭಿಕರಾದ ರೋಹಿತ್ ಶರ್ಮಾ-ಶಿಖರ್ ಧವನ್ 18.4 ಓವರ್‌ಗಳಲ್ಲಿ 114 ರನ್ ಗಳಿಸಿ ಟೀಂ ಇಂಡಿಯಾಗೆ ಜಯ ತಂದುಕೊಟ್ಟರು. ರೋಹಿತ್ ಶರ್ಮಾ 58 ಎಸೆತಗಳಲ್ಲಿ 76 ರನ್ ಮತ್ತು ಶಿಖರ್ ಧವನ್ 54 ಎಸೆತಗಳಲ್ಲಿ 31 ರನ್ ಗಳಿಸಿದರು.
Published On - 3:27 pm, Wed, 13 July 22