- Kannada News Photo gallery Cricket photos Virat Kohli's ex-teammate reveals story behind 'Chiru' nickname
Virat Kohli: ಮತ್ತೆ ಭೇಟಿಯಾದ ಚಿರು ಫ್ಯಾನ್ಸ್: ಬಾಲ್ಯದ ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡ ಗೆಳೆಯ
Virat Kohli: ಇಂಗ್ಲೆಂಡ್ ವಿರುದ್ದದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಗುರುವಾರ ನಡೆಯಲಿರುವ 2ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.
Updated on: Jul 13, 2022 | 1:54 PM

ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ತೊಡೆ ಸಂದು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕೊಹ್ಲಿ ಮಂಗಳವಾರ ವಿಶ್ರಾಂತಿ ಪಡೆದಿದ್ದರು. ವಿಶೇಷ ಎಂದರೆ ಈ ಬಿಡುವಿನ ಅವಧಿಯಲ್ಲಿ ಕೊಹ್ಲಿ ತಮ್ಮ ಬಾಲ್ಯದ ಗೆಳೆಯನನ್ನು ಭೇಟಿಯಾಗಿದ್ದರು.

ಹೌದು, ಮಂಗಳವಾರ ರಾತ್ರಿ ಕೊಹ್ಲಿ ತಮ್ಮ ಬಾಲ್ಯದ ಸಹ ಆಟಗಾರರಾದ ದ್ವಾರಕಾ ರವಿತೇಜ ಅವರನ್ನು ಭೇಟಿಯಾಗಿದ್ದರು. ಅಂಡರ್ 15 ತಂಡದಲ್ಲಿ ಜೊತೆಯಾಗಿ ಆಡಿದ್ದ ರವಿತೇಜ ಕೆರಿಯರ್ ದೇಶೀಯ ಕ್ರಿಕೆಟ್ನಲ್ಲೇ ಕಳೆದು ಹೋದರೆ, ಕೊಹ್ಲಿ ಭಾರತೀಯ ಕ್ರಿಕೆಟ್ನ ಕಿಂಗ್ ಆಗಿ ಮೆರೆದರು. ಇದೀಗ 6 ವರ್ಷಗಳ ಇಬ್ಬರು ಗೆಳೆಯರು ಲಂಡನ್ನಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ತಮ್ಮ ಆರಂಭಿಕ ದಿನಗಳನ್ನು ಸ್ಮರಿಸಿಕೊಂಡರು.

ಈ ಅಮೂಲ್ಯ ಕ್ಷಣಗಳನ್ನು ಹಾಗೂ ಕೆಲ ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ರವಿತೇಜ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂಡರ್ 15 ಆಡುವಾಗ ನಾವಿಬ್ಬರೂ ರೂಮ್ ಮೇಟ್ಸ್ ಆಗಿದ್ದೆವು. ಅಂದು ಇಬ್ಬರೂ ಮೆಗಾಸ್ಟಾರ್ ಚಿರಂಜೀವಿ ಹಾಡುಗಳನ್ನು ಹಾಕಿಕೊಂಡು ಡ್ಯಾನ್ಸ್ ಮಾಡುತ್ತಿದ್ದೆವು. ಬಾಲ್ಯದಲ್ಲಿ ಇಬ್ಬರಿಗೂ ಚಿರಂಜೀವಿ ಫೇವರೇಟ್ ಆ್ಯಕ್ಟರ್ ಆಗಿದ್ದರು. ಹೀಗಾಗಿ ಇಬ್ಬರೂ ಒಬ್ರನ್ನೊಬ್ಬರು ಚಿರು ಅಂತಲೇ ಕರೆಯುತ್ತಿದ್ದೆವು ಎಂದು ರವಿತೇಜ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.

ವಿಶೇಷ ಎಂದರೆ ಇಂದಿಗೂ ರವಿತೇಜ ಹಾಗೂ ಕೊಹ್ಲಿ ಚಿರು ಅಂತಲೇ ಕರೆಯುವುದಂತೆ. ಕೊಹ್ಲಿ ಚಿರು ಫ್ಯಾನ್ ಎನ್ನುವ ವಿಚಾರ ಬಹಿರಂಗವಾಗುತ್ತಿದ್ದಂತೆ ಇದೀಗ ಮೆಗಾಸ್ಟಾರ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅಂದಹಾಗೆ ವಿರಾಟ್ ಕೊಹ್ಲಿಯ ನಿಕ್ನೇಮ್ ಚೀಕು. ಆದರೆ ರವಿತೇಜ ಪಾಲಿಗೆ ಮಾತ್ರ ಅದು ಚಿರು ಎನ್ನುವ ವಿಚಾರ ಈಗ ಬಹಿಂಗವಾಗಿದೆ.

ಇನ್ನು ಆಂಧ್ರ ಪ್ರದೇಶ ಮೂಲದ ರವಿತೇಜ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದರೂ, ದೇಶೀಯ ಕ್ರಿಕೆಟ್ನಲ್ಲಿ ಆಂಧ್ರ ಪ್ರದೇಶ ಮತ್ತು ಮೇಘಾಲಯ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದುವರೆಗೆ 78 ಪ್ರಥಮ ದರ್ಜೆ ಮತ್ತು 86 ಲಿಸ್ಟ್ ಎ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಈ ವರ್ಷದ ರಣಜಿ ಟ್ರೋಫಿಯಲ್ಲಿ ಮೇಘಾಲಯ ಪರ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ರವಿತೇಜ ಗುಜರಾತ್ ವಿರುದ್ಧ ಶತಕ (133) ಬಾರಿಸಿ ಮಿಂಚಿದ್ದರು.

ಅಲ್ಲದೆ ಐಪಿಎಲ್ನಲ್ಲಿ ಡೆಕ್ಕನ್ ಚಾರ್ಜರ್ಸ್, ಸನ್ರೈಸರ್ಸ್ ಹೈದರಾಬಾದ್ ಪರ ಆಡಿರುವ ರವಿತೇಜ 32 ಪಂದ್ಯಗಳಲ್ಲಿ 375 ರನ್ ಮಾತ್ರ ಕಲೆಹಾಕಿದ್ದರು. ಹೀಗಾಗಿ 2013ರ ಬಳಿಕ ರವಿತೇಜಗೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚಾನ್ಸ್ ಸಿಕ್ಕಿರಲಿಲ್ಲ. ಇದೀಗ ವಿರಾಟ್ ಕೊಹ್ಲಿಯ ಬಾಲ್ಯದ ಗೆಳೆಯ ಎಂಬ ವಿಚಾರ ಬಹಿರಂಗವಾಗುತ್ತಿದ್ದಂತೆ ರವಿತೇಜ ಕೂಡ ಫುಲ್ ಫೇಮಸ್ ಆಗಿರುವುದು ವಿಶೇಷ.



















