ಆರ್ಥಿಕ ಸಂಶೋಧನಾ ಸಂಸ್ಥೆ ಹುರುನ್ ಇಂಡಿಯಾ ಇತ್ತೀಚೆಗೆ ಭಾರತದ ಟಾಪ್-10 ಕುಬೇರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ವಿಶ್ವದ 3ನೇ ಅತೀ ದೊಡ್ಡ ಶ್ರೀಮಂತ ಕೂಡ ಇರುವುದು ವಿಶೇಷ. ಅಂದರೆ ವಿಶ್ವದ ಟಾಪ್ 3 ನಲ್ಲಿ ಭಾರತದ ನಂಬರ್ 1 ಶ್ರೀಮಂತ ಉದ್ಯಮಿ ಕೂಡ ಇದ್ದಾರೆ. ಹಾಗಿದ್ರೆ ಭಾರತದ ಟಾಪ್ 10 ಶ್ರೀಮಂತರು ಯಾರೆಲ್ಲಾ ಅವರ ಸಂಪತ್ತು ಎಷ್ಟು ಎಂದು ನೋಡೋಣ...
1- ಗೌತಮ್ ಅದಾನಿ ಮತ್ತು ಕುಟುಂಬ - 10,94,400 ಕೋಟಿ ರೂ.
2- ಮುಖೇಶ್ ಅಂಬಾನಿ ಮತ್ತು ಕುಟುಂಬ- 7,94,700 ಕೋಟಿ ರೂ.
3- ಸೈರಸ್ ಎಸ್ ಪೂನಾವಾಲ ಮತ್ತು ಕುಟುಂಬ- 2,05,400 ಕೋಟಿ ರೂ.
4- ಶಿವ ನಾಡಾರ್ ಮತ್ತು ಕುಟುಂಬ- 1,85,800 ಕೋಟಿ ರೂ.
5- ರಾಧಾಕಿಶನ್ ದಮಾನಿ ಮತ್ತು ಕುಟುಂಬ- 1,75,100 ಕೋಟಿ ರೂ.
6- ವಿನೋದ್ ಅದಾನಿ ಮತ್ತು ಕುಟುಂಬ- 1,69,000 ಕೋಟಿ ರೂ.
7- ಎಸ್ಪಿ ಹಿಂದುಜಾ ಮತ್ತು ಕುಟುಂಬ- 1,65,000 ಕೋಟಿ ರೂ.
8- ಲಕ್ಷ್ಮಿ ಮಿತ್ತಲ್ ಮತ್ತು ಕುಟುಂಬ- 1,51,800 ಕೋಟಿ ರೂ.
9- ದಿಲೀಪ್ ಶಾಂಘ್ವಿ- 1,33,500 ಕೋಟಿ ರೂ.
10- ಉದಯ್ ಕೋಟಕ್- 1,19,400 ಕೋಟಿ ರೂ.
2012 ರಲ್ಲಿ ಗೌತಮ್ ಅದಾನಿಯವರ ಸಂಪತ್ತು ಮುಖೇಶ್ ಅಂಬಾನಿ ಅವರ ಸಂಪತ್ತಿನ ಆರನೇ ಒಂದು ಭಾಗದಷ್ಟು ಮಾತ್ರ ಇತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಅವರು ಅಂಬಾನಿಯನ್ನು ಹಿಂದಿಕ್ಕಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿರುವುದು ವಿಶೇಷ.