- Kannada News Photo gallery Hyundai Ioniq 5 Launched in Auto Expo 2023 At Rs 44.95 Lakh, check out range, specs, features and images
Auto Expo 2023: ಪ್ರತಿ ಚಾರ್ಜ್ ಗೆ 631 ಕಿ.ಮೀ ಮೈಲೇಜ್ ನೀಡುವ ಹ್ಯುಂಡೈ ಐಯಾನಿಕ್ 5 ಬಿಡುಗಡೆ
ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾದರಿಗಳಿಗೆ ಭರ್ಜರಿ ಬೇಡಿಕೆ ಹರಿದುಬರುತ್ತಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಎರಡನೇ ಇವಿ ಕಾರು ಮಾದರಿಯಾದ ಐಯಾನಿಕ್ 5 ಕ್ರಾಸ್ ಎಸ್ ಯುವಿಯನ್ನು ದೆಹಲಿ ಆಟೋ ಎಕ್ಸ್ ಪೋದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಹೊಸ ಇವಿ ಕಾರು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಇದು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಅತಿ ಕಡಿಮೆ ಬೆಲೆಯೊಂದಿಗೆ ಹಲವಾರು ವಿಶೇಷತೆಗಳನ್ನ ಹೊಂದಿದೆ. ಹೊಸ ಕಾರು ಬಿಡುಗಡೆಯ ಸಂದರ್ಭದಲ್ಲಿ ಬ್ರಾಂಡ್ ಅಂಬಾಸಿಡರ್ ಬಾಲಿವುಡ್ ನಟ ಶಾರುಖ್ ಖಾನ್ ಭಾಗಿಯಾಗಿದ್ದು ವಿಶೇಷವಾಗಿತ್ತು.
Updated on:Jan 11, 2023 | 9:18 PM

ಭಾರತದಲ್ಲಿ ಎರಡನೇ ಇವಿ ಕಾರು ಮಾದರಿಯನ್ನ ಅಧಿಕೃತವಾಗಿ ಬಿಡುಗಡೆ ಮಾಡಿದೆ ಹ್ಯುಂಡೈ ಇಂಡಿಯಾ ಕಂಪನಿ

ಕೊನಾ ಇವಿ ನಂತರ ಐಯಾನಿಕ್ 5 ಎಲೆಕ್ಟ್ರಿಕ್ ಎಸ್ ಯುವಿ ಮಾರಾಟಕ್ಕೆ ಅಧಿಕೃತ ಚಾಲನೆ ನೀಡಿರುವ ಹ್ಯುಂಡೈ

ಹೊಸ ಕಾರಿನಲ್ಲಿ 72.6 ಕಿಲೋ ವ್ಯಾಟ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದ್ದು ಇದು ಪ್ರತಿ ಚಾರ್ಜ್‌ಗೆ 631 ಕಿ.ಮೀ ಮೈಲೇಜ್ ನೀಡಲಿದೆ.

ಮೊದಲ 500 ಯುನಿಟ್ ಗಳನ್ನು ಖರೀದಿಸುವ ಗ್ರಾಹಕರಿಗೆ ಮಾತ್ರ ರೂ. 44.95 ಲಕ್ಷ ಬೆಲೆ ಅನ್ವಯವಾಗಲಿದ್ದು, ತದನಂತರ ಕಾರು ಖರೀದಿಸುವ ಗ್ರಾಹಕರಿಗೆ ಹೊಸ ದರ ಅನ್ವಯವಾಗಲಿದೆ.

ಹೊಸ ಕಾರಿನಲ್ಲಿ 72.6 ಕಿಲೋ ವ್ಯಾಟ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದ್ದು ಇದು ಪ್ರತಿ ಚಾರ್ಜ್‌ಗೆ 631 ಕಿ.ಮೀ ಮೈಲೇಜ್ ನೀಡಲಿದೆ.

ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಕೇವಲ 18 ನಿಮಿಷಗಳಲ್ಲಿ ಸೊನ್ನೆಯಿಂದ ಶೇ. 80 ರಷ್ಟು ಚಾರ್ಜಿಂಗ್ ಮಾಡುವ ಸೌಲಭ್ಯವಿದೆ.

ರೆಟ್ರೋ ಫ್ಯೂಚರಿಸ್ಟಿಕ್ ವಿನ್ಯಾಸ ಭಾಷೆ ಹೊಂದಿರುವ ಹೊಸ ಇವಿ ಕಾರಿನಲ್ಲಿವೆ ಫಿಕ್ಸಲೆಟೆಡ್ ಲುಕ್ ಹೊಂದಿರುವ ಫ್ರಂಟ್ ಅಂಡ್ ರಿಯರ್ ಲೈಟ್ಸ್, 20 ಇಂಚಿನ ಏರೋ ಆಪ್ಟಿಮೈಜ್ಡ್ ಅಲಾಯ್ ವ್ಹೀಲ್ ಸೌಲಭ್ಯ

ಹೊಸ ಐಯಾನಿಕ್ 5 ಕಾರು ಮಾದರಿಯನ್ನು ಹಲವಾರು ಸುಧಾರಿತ ಸುರಕ್ಷಾ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳೊಂದಿಗೆ ಅಭಿವೃದ್ದಿಪಡಿಸಿರುವ ಹ್ಯುಂಡೈ

6 ಏರ್ ಬ್ಯಾಗ್ ಸೇರಿದಂತೆ ಲೆವೆಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯ ಹೊಂದಿದೆ ಹೊಸ ಇವಿ ಕಾರು

ಭಾರತದಲ್ಲಿಯೇ ಮರುಜೋಡಣೆಯಾಗಲಿರುವ ಹೊಸ ಕಾರು ಸಿಕೆಡಿ ಆಮದು ನೀತಿಯಡಿಯಲ್ಲಿ ಮಾರಾಟಗೊಳ್ಳಲಿದ್ದು, ಸಿಕೆಡಿ ಆಮದು ನೀತಿಯಡಿಯಿಂದಾಗಿ ಪ್ರತಿಸ್ಪರ್ಧಿ ಕಿಯಾ ಇವಿ6 ಕಾರಿಗಿಂತ ರೂ. 14 ಲಕ್ಷದಷ್ಟು ಕಡಿಮೆ ಬೆಲೆ ಹೊಂದಿದೆ.
Published On - 9:14 pm, Wed, 11 January 23




