IAS Success Story: ಮೊದಲನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಉತ್ತೀರ್ಣ; 22ನೇ ವರ್ಷಕ್ಕೆ ಐಎಎಸ್ ಅಧಿಕಾರಿ
TV9 Web | Updated By: ganapathi bhat
Updated on:
Nov 16, 2021 | 10:42 PM
ಯುಪಿಎಸ್ಸಿ ಪರೀಕ್ಷೆಯನ್ನು ಅತಿ ಕಠಿಣ ಪರೀಕ್ಷೆಗಳಲ್ಲಿ ಒಂದು ಎಂದು ಕರೆಯಲಾಗುತ್ತದೆ. ಈ ಪರೀಕ್ಷೆಗೆ ಹಲವು ಮಂದಿ ಕೋಚಿಂಗ್ ಪಡೆದುಕೊಳ್ಳುತ್ತಾರೆ, ಕೆಲವೇ ಕೆಲವರು ಮಾತ್ರ ಸ್ವಯಂ ಕಲಿಕೆಯಿಂದ ಯುಪಿಎಸ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗುತ್ತಾರೆ,
1 / 6
ಪ್ರತಿ ವರ್ಷ ಲಕ್ಷಾಂತರ ಮಂದಿ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗುತ್ತಾರೆ. ಯುಪಿಎಸ್ಸಿ ಪರೀಕ್ಷೆಯನ್ನು ಅತಿ ಕಠಿಣ ಪರೀಕ್ಷೆಗಳಲ್ಲಿ ಒಂದು ಎಂದು ಕರೆಯಲಾಗುತ್ತದೆ. ಈ ಪರೀಕ್ಷೆಗೆ ಹಲವು ಮಂದಿ ಕೋಚಿಂಗ್ ಪಡೆದುಕೊಳ್ಳುತ್ತಾರೆ, ಕೆಲವೇ ಕೆಲವರು ಮಾತ್ರ ಸ್ವಯಂ ಕಲಿಕೆಯಿಂದ ಯುಪಿಎಸ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗುತ್ತಾರೆ, ಕೆಲವರಿಗೆ ಪರೀಕ್ಷೆ ಪಾಸ್ ಆಗಲು ವರ್ಷಗಳೇ ತಾಗುವುದು ಇದೆ.
2 / 6
ಕೆಲವೇ ಕೆಲವು ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯನ್ನು ಮೊದಲನೇ ಬಾರಿಗೆ ಪಾಸ್ ಆಗುತ್ತಾರೆ. ಇಂತಹದೇ ಸಾಧನೆ ಮಾಡಿದವರು ಅನನ್ಯಾ ಸಿಂಗ್. ಐಎಎಸ್ ಪರೀಕ್ಷೆಯಲ್ಲಿ ಮೊದಲನೇ ಬಾರಿಗೆ ತೇರ್ಗಡೆ ಹೊಂದಿರುವ 22 ವರ್ಷದ ಈಕೆಯ ಹೆಸರು ಅನನ್ಯಾ ಸಿಂಗ್. ಪ್ರಯಾಗ್ರಾಜ್ ನಿವಾಸಿ. ಯುಪಿಎಸ್ಸಿ ಪರೀಕ್ಷೆ ಬರೆಯಲು ಇಚ್ಛಿಸುವ ಅಭ್ಯರ್ಥಿಗಳಿಗೆ ಈಕೆ ಒಂದು ಉತ್ತಮ ಉದಾಹರಣೆ.
3 / 6
ಅನನ್ಯಾ ಹೇಳುವಂತೆ ಅವರು ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಗೆ ಬಹಳ ಯೋಜಿತವಾಗಿ ತಯಾರಾಗಿದ್ದಾರೆ. ಇದೇ ಕಾರಣದಿಂದ ಅವರು ಪರೀಕ್ಷೆಯನ್ನು ಎದುರಿಸಿದ ಮೊದಲನೇ ಸಲವೇ ಪಾಸ್ ಆಗಿದ್ದಾರೆ. ಅಷ್ಟೇ ಅಲ್ಲದೆ, ಭಾರತದಲ್ಲಿ 51ನೇ ರ್ಯಾಂಕ್ ಪಡೆದಿದ್ದಾರೆ. ಶ್ರದ್ಧೆ, ಕಠಿಣ ಪರಿಶ್ರಮದಿಂದ ಪರೀಕ್ಷೆಗೆ ತಯಾರಿ ಮಾಡುವುದರಿಂದ ಇಂತಹ ಪರೀಕ್ಷೆಯನ್ನು ಪಾಸ್ ಆಗಬಹುದು ಎನ್ನುತ್ತಾರೆ ಅನನ್ಯಾ.
4 / 6
ಅನನ್ಯಾ ಅವರಿಗೆ ಬಾಲ್ಯದಿಂದ ಐಎಎಸ್ ಅಧಿಕಾರಿ ಆಗಬೇಕು ಎಂಬ ಕನಸು ಇತ್ತಂತೆ. ಈ ಕಾರಣದಿಂದ ಅವರು ತಮ್ಮ ಪದವಿ ಶಿಕ್ಷಣ ಪೂರೈಸುತ್ತಿರುವಾಗಲೇ ನಾಗರಿಕ ಸೇವಾ ಪರೀಕ್ಷೆ ಎದುರಿಸಲು ತಯಾರಿ ಮಾಡಿಕೊಂಡರು. ಅನನ್ಯಾ ಸಿಂಗ್ 2019ರಲ್ಲಿ ಯುಪಿಎಸ್ಸಿ ಪರೀಕ್ಷೆ ನೀಡಿದವರಾಗಿದ್ದಾರೆ.
5 / 6
ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಅಥವಾ ಉತ್ತೀರ್ಣ ಆಗಲು ಯೋಜಿತವಾಗಿ ಕಲಿಕೆ ನಡೆಸುವುದು ಅನಿವಾರ್ಯ. ಸಮಯ ಪಟ್ಟಿಯನ್ನು ಹಾಕಿಕೊಂಡು ಅಧ್ಯಯನ ನಡೆಸಬೇಕು. ಪ್ರತಿ ಸಬ್ಜೆಕ್ಟ್ಗೆ ಕೂಡ ಸರಿಯಾಗಿ ಸಮಯ ಕೊಡಬೇಕು. ಇದೆಲ್ಲದರ ಜೊತೆಗೆ ನಿಮ್ಮ ಶಕ್ತಿ ಮತ್ತು ದೌರ್ಬಲ್ಯಗಳ ಬಗ್ಗೆ ಕೂಡ ಗಮನಹರಿಸಬೇಕು ಎಂದು ಹೇಳುತ್ತಾರೆ ಅನನ್ಯಾ.
6 / 6
ಯುಪಿಎಸ್ಸಿ ಪರೀಕ್ಷೆ ಎದುರಿಸಲು ಬಯಸುವ ಅಭ್ಯರ್ಥಿಗಳು ಹಳೆಯ ಯುಪಿಎಸ್ಸಿ ಪರೀಕ್ಷೆ ಪತ್ರಿಕೆಗಳನ್ನು ಕೂಡ ನೋಡಬೇಕು. ಯಾಕೆಂದರೆ ಕೆಲವು ಬಾರಿ ಪ್ರಶ್ನೆಗಳು ಪುನರಾವರ್ತನೆ ಆಗುತ್ತದೆ ಎಂಬುದು ಅನನ್ಯಾ ನೀಡುವ ಸಲಹೆ.