
ವಿಜಯಪುರ ನಗರದಲ್ಲಿ ರಸ್ತೆ ನಿಮಯ ಪಾಲನೆ ಸರಿಯಾಗಿ ಆಗುತ್ತಿಲ್ಲ. ಬೇಕಾಬಿಟ್ಟಿಯಾಗಿ ವಾಹನಗಳ ಚಾಲಾವಣೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ತಲೆನೋವಾಗಿ ಪರಿಣಮಿಸಿದೆ. ಹೇಗೆಂದರೆ ಹಾಗೆ ಬೈಕ್ ಹಾಗೂ ಇತರೆ ವಾಹನ ಚಲಾವಣೆ ಮಾಡುವುದು ಹಾಗೂ ಕಂಡ ಕಂಡಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆಗೆ ಇತಿಶ್ರೀ ಇಡಲು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಋಷಿಕೇಶ ಸೋವೆವಣೆ ಮುಂದಾಗಿದ್ದಾರೆ.

ನಗರದ ಮಾರುಕಟ್ಟೆ ಪ್ರದೇಶದಲ್ಲಿ ಆಲ್ಟರನೇಟ್ ಡೇ ಮಾದರಿಯಲ್ಲಿ ಎಡ ಬಲ ಬದಿ ಭಾಗದಲ್ಲಿ ವಾಹನಗಳ ಪಾರ್ಕಿಂಗ್ ಮಾಡುವುದನ್ನು ಜಾರಿ ಮಾಡಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಲು ವಿಶೇಷ ಬೈಕ್ಗಳೊಂದಿಗೆ ಸಿಬ್ಬಂದಿಗಳನ್ನು ಬಿಡಲಾಗಿದೆ. ಎಎಸ್ಐ ಹಾಗೂ ಪಿಎಸ್ಐ ಅವರಿಗೆ ಹೆಚ್ಚಿನ ಹೊಣೆಗಾರಿಕೆ ನೀಡಿ ಚಾಲನಾ ನಿಯಮಗಳನ್ನು ಪಾಲನೆ ಮಾಡದೇ ಅಜಾಗರೂಕತೆ ಡ್ರೈವಿಂಗ್ ಮಾಡುವವರಿಗೆ ದಂಡ ಹಾಕುವ ಕೆಲಸ ಮಾಡಲಾಗುತ್ತಿದೆ.

ಇನ್ನು ಎಲ್ಲೆಂದರಲ್ಲಿ ವಾಃನಗಳನ್ನು ನಿಲ್ಲಿಸಿ ಹೋಗುವವರಿಗೆ ಬಿಸಿ ಮುಟ್ಟಿಸಲಾಗುತ್ತಿದೆ. ಕಂಡ ಕಂಡಲ್ಲಿ ವಾಹನ ನಿಲ್ಲಿಸಿದರೆ ಹೆಚ್ಚಿನ ಪ್ರಮಾಣದ ದಂಡ ಹಾಕಲಾಗುತ್ತಿದೆ. ನಿಗದಿತ ಸ್ಥಳಗಳಲ್ಲಿ ಮಾತ್ರ ವಾಹನಗಳ ಪಾರ್ಕಿಂಗ್ ಮಾಡಬೇಕು. ಅದರ ಹೊರತಾಗಿ ಜನರಿಗೆ ಹಾಗೂ ಇತರೆ ವಾಹನ ಸವಾವರಿಗೆ ತೊಂದರೆಯಾಗುವಂತೆ ವಾಹನಗಳ ಪಾರ್ಕಿಂಗ್ ಮಾಡುವಂತಿಲ್ಲ ಎಂದು ಎಸ್ಪಿ ಹೇಳಿದ್ದಾರೆ.

ನಗರದ ಗಾಂಧಿಚೌಕ್, ಕೆಸಿ ಮಾರ್ಕೆಟ್, ಅಜಾದ್ ಮಾರ್ಕೆಟ್, ಎಲ್ ಬಿ ಎಸ್ ಮಾರುಕಟ್ಟೆ ಪ್ರಾಂಗಣ, ಜೈನ್ ಮಂದಿರ, ಸಿದ್ದೇಶ್ವರ ರಸ್ತೆ, ಹಲೆಯ ಕಿರಾಣಾ ಬಜಾರ್, ವಾಜಪೇಯಿ ರಸ್ತೆ ಸೇರಿದಂತೆ ಇತರೆ ಮಾರುಕಟ್ಟೆ ಪ್ರದೇಶಗಳಲ್ಲಿ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು.

ಜೊತೆಗೆ ಇವೆಲ್ಲ ಪ್ರದೇಶಗಳಲ್ಲಿ ವಾಹನಗಳನ್ನು ನಿಲ್ಲಿಸಿ ಜನರು ಮಾರುಕಟ್ಟೆಗಳಿಗೆ ತೆರೆಳುತ್ತಿದ್ದರು. ಹೀಗಾಗಿ ಟ್ರಾಫಿಕ್ ಜಾಮ್ ಆಗುವುದರ ಜೊತೆಗೆ ಪಾರ್ಕಿಂಗ್ ವಿಚಾರವೂ ಕಿರಿಕಿಗರ ದಾರಿ ಮಾಡಿಕೊಟ್ಟಿತ್ತು. ಇದ್ದಕ್ಕೆಲ್ಲಾ ಇದೀಗ ಬ್ರೇಕ್ ಹಾಕಿ ಸುಗಮ ವಾಹನ ಸಂಚಾರ, ಸರಳ ಪಾರ್ಕಿಂಗ್ ಹಾಗೂ ಕಾನೂನು ಪಾಲನೆಗೆ ಎಸ್ಪಿ ಕ್ರಮ ತೆಗೆದುಕೊಂಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಜನರು ಪೊಲೀಸ್ ಇಲಾಖೆಯ ಕಾರ್ಯಕ್ಕೆ ಕೈ ಜೋಡಿದ್ದಾರೆ.

ನಿನ್ನೆ ಹಾಗೂ ಇಂದು ಎರಡು ದಿನಗಳಲ್ಲಿ 300 ಆಧಿಕ ವಾಹನ ಸವಾರರಿಗೆ ಪಾರ್ಕಿಂಗ್ ವಿಚಾರದಲ್ಲಿ ದಂಡ ಹಾಕಲಾಗಿದೆ. ವಾಹನ ಚಲಾವಣೆ ಆಷ್ಟೇಯಲ್ಲಾ ಪಾರ್ಕಿಂಗ್ ವಿಚಾರದಲ್ಲೂ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಪೊಲೀಸರ ಈ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published On - 10:03 pm, Wed, 31 July 24