ಪಿಒಪಿ ಗಣೇಶ ಮೂರ್ತಿಗಳಿಗೆ ಸೆಡ್ಡು ಹೊಡೆಯುತ್ತಿರೋ ಪೇಪರ್ ಗಣೇಶ ಮೂರ್ತಿಗಳು!
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪಿಒಪಿ ಗಣೇಶ ಮೂರ್ತಿಗಳನ್ನ ಮಾರಾಟ ಮಾಡದಂತೆ ನಿಷೇಧ ಹೇರಿದೆ. ಇತ್ತ ಮಣ್ಣಿನ ಗಣೇಶ ಮೂರ್ತಿಗಳ ಬೇಡಿಕೆ ಹೆಚ್ಚಾಗಿದೆ. ಇದರ ಮಧ್ಯೆ ಜನರ ಅನುಕೂಲಕ್ಕೆ ತಕ್ಕಂತೆ ಈ ವ್ಯಾಪಾರಸ್ಥರು ಪೇಪರ್ ಗಣೇಶ ಮೂರ್ತಿಗಳನ್ನು ಮಾಕೇರ್ಟ್ಗೆ ತಂದಿದ್ದು, ಫುಲ್ ಡಿಮ್ಯಾಂಡ್ ಶುರುವಾಗಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.
1 / 6
ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಸಂಭ್ರಮ, ಸಡಗರ ಜೋರಾಗಿದೆ. ಅತ್ತ ಗಣೇಶ ಮೂರ್ತಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಸಿಟಿಯ ಅಂಗಡಿಗಳು ಮಕ್ಕಳು- ಯುವಕರಿಂದ ಫುಲ್ ರಶ್ ಆಗಿದೆ. ಅತ್ತ ಸರ್ಕಾರ ಪಿಒಪಿ ಗಣಪನಿಗೆ ನಿಷೇಧ ಹೇರಿದ ಹಿನ್ನಲೆ ಗಣೇಶ ತಯಾರಕರು ಪರಿಸರ ಸ್ನೇಹಿ ಪೇಪರ್ ಗಣಪ ಮೂರ್ತಿ ತಯಾರಿಸಿದ್ದಾರೆ. ಈ ಪೇಪರ್ ಗಣಪನಿಗೆ ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ಡಿಮ್ಯಾಂಡ್ ಬಂದಿದೆ.
2 / 6
ಹೌದು, ನೀರು ಕಲುಷಿತವಾಗುತ್ತದೆ ಎಂದು ಪಿಒಪಿ ಗಣೇಶನ ಮೂರ್ತಿಗಳ ಮಾರಾಟಕ್ಕೆ ಬಿಬಿಎಂಪಿ ನಿಷೇಧ ಹೇರಿದೆ. ಹೀಗಾಗಿ ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಜೇಡಿ ಮಣ್ಣಿಗೆ ಕೊರತೆ ಹಿನ್ನೆಲೆಯಲ್ಲಿ ಮಣ್ಣಿನ ಮೂರ್ತಿ ಸಿಗದೆ ಜನ ಪರದಾಡುತ್ತಿದ್ದಾರೆ. ಹೀಗಾಗಿ ಈ ವರ್ಷ ಪೇಪರ್ ಮೂರ್ತಿಗಳ ಮೊರೆ ಹೋಗಿದ್ದು, ನಗರದ ಟ್ರಿನಿಟಿ ಸರ್ಕಲ್, ಯಶವಂತಪುರ, ಬಸವನಗುಡಿ, ಕಂಟೋನ್ಮೆಂಟ್, ಸೇರಿದಂತೆ ಹಲವೆಡೆ ಪೇಪರ್ ಗಣೇಶಗಳ ಹಾವಾಳಿ ಜೋರಾಗಿದೆ.
3 / 6
ಇನ್ನು ಮಣ್ಣಿನ ಮೂರ್ತಿಗಳಾದರೆ 5 ಅಡಿಗಿಂತ ಹೆಚ್ಚು ಎತ್ತರ ನಿರ್ಮಿಸುವುದು ಕಷ್ಟ. ಆದರೆ, ಈ ಪೇಪರ್ ಗಣಪತಿಯನ್ನ 10 ಅಡಿಗೂ ಹೆಚ್ಚು ಎತ್ತರ ನಿರ್ಮಾಣ ಮಾಡಬಹುದು. ಈ ಪೇಪರ್ ಗಣಪನ ಮೂರ್ತಿಗಳನ್ನು ತಯಾರಿಸುವುದು ಬಹಳ ಕಷ್ಟ, ಆದರೆ, ಮೂರ್ತಿ ತುಂಬಾ ಹಗುರ. ಇದರ ನಿರ್ವಹಣೆಯೂ ಸುಲಭ, ಜೊತೆಗೆ ಪೂಜೆಯ ನಂತರ ವಿಸರ್ಜನೆಗೂ ತೊಡಕಿಲ್ಲ. ಪರಿಸರಕ್ಕೂ ಹಾನಿಯಾಗಲ್ಲ, ಹೀಗಾಗಿ, ತಯಾರಕರು ಮತ್ತು ಗ್ರಾಹಕರಿಂದ ಪೇಪರ್ ಗಣೇಶಗಳ ಕಡೆ ಒಲವು ಜಾಸ್ತಿಯಾಗಿದೆ.
4 / 6
ಈ ಪೇಪರ್ ಗಣಪನನ್ನು ಯಾವುದೇ ವಾಹನಗಳಲ್ಲಿ ತೆಗೆದುಕೊಂಡು ಹೋಗಬಹುದು. ಅಲ್ಲದೆ ಪೇಪರ್ ಮೂರ್ತಿಗಳು ತುಂಬ ಹಗುರವಾಗಿರುತ್ತವೆ. ನಿರ್ವಹಣೆಯೂ ಸುಲಭ. ಈ ಬಗೆಯ ಗಣಪತಿಗಳಿಂದ ಪರಿಸರಕ್ಕೂ ಹಾನಿಯಾಗದು. ಹೀಗಾಗಿ, ಗ್ರಾಹಕರು ಪೇಪರ್ ಗಣೇಶಗಳ ಖರೀದಿಯತ್ತ ಹೆಚ್ಚು ಒಲವು ತೋರುತ್ತಿದ್ದಾರಂತೆ.
5 / 6
ಒಟ್ಟಿನಲ್ಲಿ ಒಂದು ಕಡೆ ಗಣಪನ ಹಬ್ಬಕ್ಕೆ ಮೂರ್ತಿಗಳ ಮಾರಾಟ ಜೋರಾಗಿದೆ. ಮತ್ತೊಂದೆಡೆ ಪಿಒಪಿ ಗಣಪನಿಗೆ ಕಡಿವಾಣ ಹಾಕಿರೋದು ವ್ಯಾಪಾರಿಗಳನ್ನ ಹೈರಾಣಾಗಿಸಿದೆ. ಹೀಗಾಗಿ ಪೇಪರ್ ಗಣೇಶನ ಮೊರೆ ಹೋಗಿದ್ದಾರೆ.
6 / 6
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪೇಪರ್ ಗಣಪನಿಗೆ 20 ಪರ್ಸೆಂಟ್ ಬೇಡಿಕೆ ಹೆಚ್ಚಾಗಿದ್ದು, 100 ರೂ. ಯಿಂದ 2 ಲಕ್ಷದವರೆಗಿನ ಗಣೇಶ ಮೂರ್ತಿಗಳು ಇವೆ. ಅಂದಹಾಗೇ ಈ ಮೂರ್ತಿಗಳನ್ನ ಆಂಧ್ರಪ್ರದೇಶ, ಹೈದರಾಬಾದ್ ಸೇರಿದಂತೆ ಹಲವೆಡೆಯಿಂದ ತರಿಸಿಕೊಳ್ಳುತ್ತಿದ್ದು, ವ್ಯಾಪಾರ ವಹಿವಾಟು ಜೋರಾಗಿದೆ.