Kannada News Photo gallery In Bidar, Farmer brothers who grew papaya and earned an income of 22 lakh rupees in two months, kannada News
ಪಪ್ಪಾಯಿ ಬೆಳೆದು ಎರಡು ತಿಂಗಳಲ್ಲಿ 22 ಲಕ್ಷ ರೂಪಾಯಿ ಆದಾಯ ಗಳಿಸಿದ ರೈತ ಸಹೋದರರು
ಆ ರೈತ ಸಹೋದರರು ಬರಡು ಭೂಮಿಯಲ್ಲಿ ಕೃಷಿ ಪ್ರಾರಂಭಿಸಿ, ಆ ಬರಡು ಭೂಮಿಯನ್ನೇ ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿದ್ದಾರೆ. ಕಳೆದೆರಡು ವರ್ಷದಿಂದ ಆ ಜಮೀನಿನಲ್ಲಿ ಪಪ್ಪಾಯಿ ಬೆಳೆಸಿ ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.
1 / 8
ರೈತ ಸಹೋದರರು ಪಪ್ಪಾಯಿ ಬೆಳೆದು ಹೊರ ರಾಜ್ಯಕ್ಕೂ ಮಾರಾಟ ಮಾಡಿ, ಎರಡು ತಿಂಗಳಲ್ಲಿ ಬರೋಬ್ಬರಿ 22 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ಆ ಮೂಲಕ ಕಡಿಮೆ ನೀರು, ಬರಡು ಭೂಮಿಯಲ್ಲಿ ತೋಟಗಾರಿಕೆ ಕೃಷಿಯಲ್ಲಿ ಚಮತ್ಕಾರ ಮಾಡುತ್ತಿದ್ದಾರೆ.
2 / 8
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸದಲಾಪುರ ಗ್ರಾಮದ ಸಂತೋಷ್ ಹಾಗೂ ಆನಂದ್ ಎಂಬ ಸಹೋದರರು, ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯದೆ ಇದ್ದರೂ, ಇವರು ಕೃಷಿಯಲ್ಲಿ ಹೆಚ್ಚಿನ ಜ್ಜಾನವನ್ನು ಕಲಿತಿದ್ದಾರೆ. ಇವರಿಗೆ 40 ಎಕರೆಯಷ್ಟು ಕೃಷಿ ಜಮೀನಿದೆ. ಆ ಜಮೀನಿನಲ್ಲಿಯೇ ವೈಜ್ಞಾನಿಕ ಪದ್ದತ್ತಿಯಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದು, ಹೆಚ್ಚಿನ ಲಾಭವನ್ನ ಮಾಡುತ್ತಿದ್ದಾರೆ.
3 / 8
ಇನ್ನು ಕಳೆದ ಎರಡು ವರ್ಷದಿಂದ ಪಪ್ಪಾಯಿ ಬೆಳೆಸುತ್ತಿದ್ದು, ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯವನ್ನ ಪಪ್ಪಾಯಿಂದಲೇ ಗಳಿಸುತ್ತಿದ್ದಾರೆ. ಇವರು ಈ ವರ್ಷದ ನಾಲ್ಕು ಎಕರೆಯಷ್ಟು ಪ್ರದೇಶದಲ್ಲಿ ಪಪ್ಪಾಯಿ ನಾಟಿ ಮಾಡಿದ್ದು, ಈ ಪಪ್ಪಾಯಿ ನಾಟಿ ಮಾಡಿದ ಜಮೀನು ಅಷ್ಟೇನು ಫಲವತ್ತತೆಯಿಂದ ಕೂಡಿದ್ದಲ್ಲ, ಕಲ್ಲು ಪ್ರದೇಶದ ಜಮೀನನ್ನೇ ಹದವನ್ನಾಗಿ ಮಾಡಿ, ಮೇಕೆ ಗೊಬ್ಬರವನ್ನ ಬಳಸಿಕೊಂಡು, ಅಣ್ಣ-ತಮ್ಮ ಇಬ್ಬರು ಕೂಡ ಶ್ರಮ ಪಟ್ಟು ಹೊಲದಲ್ಲಿ ದುಡಿಯುತ್ತಿದ್ದಾರೆ.
4 / 8
ಕಾಲ ಕಾಲಕ್ಕೆ ಪಪ್ಪಾಯಿಗೆ ಔಷದೋಪಚಾರ ಮಾಡುತ್ತಾ, ಬೇಕಾದಷ್ಟು ನೀರು ಕೊಟ್ಟು ರೋಗ ಬಂದಾಗ ಔಷಧಿಯನ್ನ ಸಿಂಪಡನೆ ಮಾಡಿದರ ಪರಿಣಾಮವಾಗಿ ಇವರು ಬೆಳೆಸಿದ ಪಪ್ಪಾಯಿ ಸದ್ಯ ಒಂದು ಗಿಡಕ್ಕೆ ಕನಿಷ್ಟವೆಂದರೂ ಕೂಡ 30 ರಿಂದ 35 ಕೆಜಿಯಷ್ಟು ಹಣ್ಣುಗಳು ಬಿಟ್ಟಿದ್ದು, ಭರ್ಜರಿ ಇಳುವರಿಯನ್ನ ಕೂಡ ಪಡೆಯುತ್ತಿದ್ದಾರೆ.
5 / 8
ಇವರು ಪಪ್ಪಾಯಿ ಸಸಿಯನ್ನ ಮಹಾರಾಷ್ಟ್ರದಿಂದ 11 ರೂಪಾಯಿಗೆ ಒಂದರಂತೆ ಸುಮಾರಿ ನಾಲ್ಕು ಸಾವಿರ ಸಸಿಗಳನ್ನ ತಂದು ನಾಟಿ ಮಾಡಿದ್ದಾರೆ. ಸಾಲಿನಿಂದಾ ಸಾಲಿಗೆ ಎಂಟು ಅಡಿಯಷ್ಟು, ಗಿಡದಿಂದ ಗಿಡಕ್ಕೆ 6 ಅಡಿ ಅಂತರದಲ್ಲಿ ಪಪ್ಪಾಯಿ ಸಸಿಗಳನ್ನ ನಾಟಿ ಮಾಡಿದ್ದು, ನಾಟಿ ಮಾಡಿದ ಎಂಟು ತಿಂಗಳಲ್ಲಿ ಪಪ್ಪಾಯಿ ಹಣ್ಣು ಕಟಾವಿಗೆ ಬಂದಿದೆ. ತಿಂಗಳ ಅವಧಿಯಲ್ಲಿ ಸುಮಾರು 62 ಟನ್ ನಷ್ಟು ಪಪ್ಪಾಯಿ ಮಾರಾಟ ಮಾಡಿದ್ದಾರೆ.
6 / 8
ಇನ್ನು ಇವರ ಪಪ್ಪಾಯಿಗೆ ಮಾರುಕಟ್ಟೆಯಲ್ಲಿ ಬಾರೀ ಬೇಡಿಕೆಯಿದ್ದು, ರಾಜಸ್ಥಾನದವರು ಇವರ ಹೊಲಕ್ಕೆ ಬಂದು ಪಪ್ಪಾಯಿ ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ. ಅಷ್ಟೊಂದು ಗುಣಮಟ್ಟದ ಪಪ್ಪಾಯಿಯನ್ನ ಇವರು ಬಳೆಸಿಸಿದ್ದಾರೆ. ಇವರು ಬೆಳೆಸಿದ 15ನೇ ನಂಬರ್ ಪಪ್ಪಾಯಿ ಉದ್ದವಾಗಿ ಬರುತ್ತದೆ. ಒಂದು ಹಣ್ಣು ಎರಡು ಕೆ.ಜಿಯಷ್ಟು ತೂಕ ಬರುತ್ತದೆ. ಜೊತೆಗೆ ತಿನ್ನಲೂ ಕೂಡ ರುಚಿಯಿದೆ.
7 / 8
ಹೀಗಾಗಿ ಇವರು ಬೆಳೆದ ಪಪ್ಪಾಯಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಇದೆ. ಇನ್ನು ಪಪ್ಪಾಯಿ ಹಣ್ಣು ಕೊಡಲು ಆರಂಭಿಸಿದರೆ ಒಂದು ವರ್ಷಗಳ ಕಾಲ ನಿರಂತರ ಎರಡು ವಾರಕ್ಕೊಮ್ಮೆ ಕಟಾವಿಗೆ ಬರುತ್ತದೆ. ಹೀಗಾಗಿ ನಾಲ್ಕು ಎಕರೆಯಲ್ಲಿ ಎಲ್ಲಾ ಖರ್ಚು ತೆಗೆದರೂ ಕೂಡ ಸುಮಾರು 25 ಲಕ್ಷದ ವರೆಗೆ ಆದಾಯ ಬರುತ್ತದೆಂದು ರೈತ ಹೇಳುತ್ತಿದ್ದಾರೆ.
8 / 8
ಒಟ್ಟಿನಲ್ಲಿ ರೈತ ಸಹೋದರರು ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಎಲ್ಲ ರೈತರು ಪ್ರಯೋಗಾತ್ಮಕ ಕೃಷಿ ಬೆಳೆ ಬೆಳೆಯಲು ಅನುಕೂಲ ಮಾಡಿಕೊಳ್ಳಬೇಕು. ತೋಟಗಾರಿಕೆ ಇಲಾಖೆಯ ಸಹಾಯ ಪಡೆದು ಉತ್ತಮ ಆದಾಯ ಗಳಿಸೋ ತೋಟಗಾರಿಕೆ ಬೆಳೆ ಬೆಳೆದು, ಎಲ್ಲ ರೈತರು ಯಶಸ್ಸು ಆಗಬೇಕು ಎಂದು ರೈತರ ಹೇಳುತ್ತಿದ್ದಾರೆ.