ಹಳೆಯ ಸಂಸತ್ ಭವನದ ಬಗ್ಗೆ ವಿಶೇಷ ಟಿಪ್ಪಣಿ ಬರೆದ ಮಹಿಳಾ ಸಂಸದರು

Updated on: Sep 18, 2023 | 10:46 AM

ನೂತನ ಸಂಸತ್ ನಿರ್ಮಾಣವಾಗಿದೆ, ನಾಳೆಯಿಂದ ಆ ಕಟ್ಟಡದಲ್ಲಿಯೇ ಕಲಾಪಗಳು ಜರುಗಲಿವೆ. ಐದು ದಿನಗಳ ಕಾಲ ಸಂಸತ್ ವಿಶೇಷ ಅಧಿವೇಶನ ನಡೆಯಲಿದ್ದು, ಇಂದು ಮಾತ್ರ ಹಳೆಯ ಕಟ್ಟಡದಲ್ಲೇ ನಡೆಯಲಿದ್ದು, ನಾಳೆಯಿಂದ ನೂತನ ಕಟ್ಟಡದಲ್ಲಿ ಅಧಿವೇಶನ ಜರುಗಲಿದೆ. ಈ ಹಿನ್ನೆಲೆಯಲ್ಲಿ ಹಳೆಯ ಸಂಸತ್​ ಭವನವನ್ನು ನೆನೆದಿರುವ ಮಹಿಳಾ ಸಂಸದರು ಫೋಟೊ ಜತೆ, ತಾವು ಮೊದಲು ಸಂಸತ್ ಭವನಕ್ಕೆ ಕಾಲಿಟ್ಟಾಗ ತಮಗಾದಂತಹ ಅನುಭವವನ್ನು ಬರೆದಿದ್ದಾರೆ.

1 / 8
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ: ಹಳೆಯ ಸಂಸತ್ತಿನ ನೆನಪನ್ನು ಮೆಲುಕು ಹಾಕಿದ್ದಾರೆ, ಮೊದಲ ಬಾರಿಗೆ ಸಂಸದೆಯಾಗಿಕಾಲಿಟ್ಟ ಸದನ. ಆದರೆ ಅದು ಕ್ರಮೇಣ ಮನೆಯಾಯಿತು, ಕಟ್ಟಡ ಬದಲಾಗಿರಬಹುದು ಆದರೆ ಭಾವನೆ ಹಾಗೆಯೇ ಇದೆ ಎಂದಿದ್ದಾರೆ.

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ: ಹಳೆಯ ಸಂಸತ್ತಿನ ನೆನಪನ್ನು ಮೆಲುಕು ಹಾಕಿದ್ದಾರೆ, ಮೊದಲ ಬಾರಿಗೆ ಸಂಸದೆಯಾಗಿಕಾಲಿಟ್ಟ ಸದನ. ಆದರೆ ಅದು ಕ್ರಮೇಣ ಮನೆಯಾಯಿತು, ಕಟ್ಟಡ ಬದಲಾಗಿರಬಹುದು ಆದರೆ ಭಾವನೆ ಹಾಗೆಯೇ ಇದೆ ಎಂದಿದ್ದಾರೆ.

2 / 8

ನವನಿತ್ ರವಿ ರಾಣಾ: ಹಳೆಯ ಸಂಸತ್ತಿನ ಮೆಲುಕು ಹಾಕಿ, ನಾನು ಮೊದಲ ಬಾರಿಗೆ ಸಂಸತ್ತಿಗೆ ಪ್ರವೇಶಿಸಿದ್ದು ಎಂದೂ ಮರೆಯಲು ಸಾಧ್ಯವಿಲ್ಲ, ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ ಮತ್ತು ಇದು ಪ್ರಜಾಪ್ರಭುತ್ವದ ನಿಜವಾದ ದೇವಾಲಯವಾಗಿದೆ ಎಂದಿದ್ದಾರೆ.

3 / 8

ರಾಜ್ಯಸಭಾ ಸಂಸದೆ ಪಿಟಿ ಉಷಾ: 1986 ರಲ್ಲಿ ಸಿಯೋಲ್‌ನಲ್ಲಿ ನಾನು ಚಿನ್ನದ ಪದಕ ಗೆದ್ದು ವೀಕ್ಷಕನಾಗಿ ನಾನು ಮೊದಲ ಬಾರಿಗೆ ಈ ಸೊಗಸಾದ ಸಂಸತ್ ಭವನಕ್ಕೆ ಭೇಟಿ ನೀಡಿದ್ದೆ, ದಾದ ನಂತರವೂ 2-3 ಬಾರಿ ಯಾವುದೋ ವಿಶೇಷ ಉದ್ದೇಶದಿಂದ ಭೇಟಿ ನೀಡಿದ್ದೆ. ಆದರೆ 20ನೇ ಜುಲೈ 22 ನನ್ನ ಪಾಲಿಗೆ ಬಹಳ ವಿಶೇಷವಾದ ದಿನವಾಗಿತ್ತು. ನ್ನ ಜೀವನದಲ್ಲಿ ಮೊದಲ ಬಾರಿಗೆ, ನಾನು ನನ್ನ ಬಲಗಾಲಿನಿಂದ ರಾಜ್ಯಸಭೆಗೆ ಕಾಲಿಟ್ಟಿದ್ದೇನೆ ಎಂದು ಬರೆದಿದ್ದಾರೆ.

4 / 8

ಎನ್​ಸಿಪಿ ಸಂಸದೆ ಸುಪ್ರಿಯಾ ಸುಳೆ: ಸಂಸತ್ ಭವನದಲ್ಲಿ ಅಧಿವೇಶನಗಳಿಗೆ ಹಾಜರಾಗಲು ಅವಕಾಶ ನೀಡಿದ ಮಹಾರಾಷ್ಟ್ರ ಮತ್ತು ಬಾರಾಮತಿ ಜನರಿಗೆ ಧನ್ಯವಾದಗಳನ್ನು ವ್ಯಕ್ತಪಡಿಸಿದ್ದಾರೆ.

5 / 8

ಲೋಕಸಭೆಯ ಬಿಜೆಪಿ ಸಂಸದೆ ಪೂನಂ ಮಹಾಜನ್ ಹಿಂದಿಯಲ್ಲಿ ಕವಿತೆಯ ಮೂಲಕ ಹಳೆಯ ಸಂಸತ್ತಿನ ನೆನಪುಗಳನ್ನು ವ್ಯಕ್ತಪಡಿಸಿದ್ದಾರೆ.

6 / 8

ಕಾಂಗ್ರೆಸ್ ಸಂಸದೆ ರಮ್ಯಾ ಹರಿದಾಸ್: ಇದು ಪ್ರಜಾ ಪ್ರಭುತ್ವದ ಅರಮನೆ, ಬಲವಾದ ನಿರ್ಧಾರಗಳ ಜನ್ಮ ಸ್ಥಳ, ಮಹಾನ್ ದಂಥಕಥೆಗಳ ಹೆಜ್ಜೆಗುರುತುಗಳನ್ನು ಹೊಂದಿರುವ ಪೂಜ್ಯ ಮಹಡಿಗಳು, ಐತಿಹಾಸಿಕ ಭಾಷಣ, ಬಿಸಿ ಬಿಸಿ ಚರ್ಚೆ, ಆತ್ಮೀಯ ಸಹೋದ್ಯೋಗಿಗಳು, ಶಾಶ್ವತ ನೆನಪು ಎಂದಿಗೂ ಮರೆಯಲು ಸಾಧ್ಯವಿಲ್ಲ.

7 / 8

ಶಿವಸೇನಾ ಸಂಸದೆ, ಪ್ರಿಯಾಂಕಾ ಚತುರ್ವೇದಿ: ನೆನಪುಗಳು. ಕಲಿಕೆಗಳು. ನೀತಿ ರೂಪಿಸುವುದು.. ಸ್ನೇಹ. ತೀವ್ರವಾದ ಚರ್ಚೆಗಳು, 75 ವರ್ಷಗಳಲ್ಲಿ ಈ ಸಂಸತ್ತು ಎಷ್ಟೋ ಸಂಸದರಿಗೆ ಆತ್ಮವಿಶ್ವಾಸವನ್ನು ತುಂಬಿದೆ, ಈ ಪ್ರಯಾಣದ ಭಾಗವಾಗಿರುವುದಕ್ಕೆ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ.

8 / 8

ಶಿರೋಮಣಿ ಅಕಾಲಿ ದಳ ಸಂಸದೆ ಹರ್​ಸಿಮ್ರತ್ ಕೌರ್ ಬಾದಲ್: 2009ರಲ್ಲಿ ಮೊದಲ ಬಾರಿಗೆ ಸಂಸದೆಯಾಗಿದ್ದೆ, ಈ ಪ್ರಜಾಪ್ರಭುತ್ವದ ದೇವಾಲಯದಲ್ಲಿರುವ ಈ 144 ಕಂಬಗಳು ನನಗೆ ಬಹುಸಂಖ್ಯೆಯ ನೆನಪುಗಳನ್ನು ಹಿಡಿದಿಟ್ಟಿವೆ. ಸಾವಿರಾರು ಭಾರತೀಯ ಕಲಾವಿದರು, ಶಿಲ್ಪಿಗಳು ಮತ್ತು ಕಾರ್ಮಿಕರ ಇತಿಹಾಸ ಹಾಗೂ ಕರಕುಶಲತೆಯಿಂದ ಅಲಂಕರಿಸಲ್ಪಟ್ಟ ಈ ಸುಂದರವಾದ ಕಟ್ಟಡವು ತೀವ್ರವಾದ ಕಲಿಕೆ ಮತ್ತು ಅಪಾರ ತೃಪ್ತಿಯ ಸ್ಥಳವಾಗಿದೆ ಎಂದು ಹೇಳಿದ್ದಾರೆ.

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us