
ಜೇನುತುಪ್ಪ- ಚಳಿಗಾಲದ ಸಮಯದಲ್ಲಿ ಶೀತ, ಜ್ವರ, ತಲೆನೋವಿನಂತಹ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ. ಹೀಗಿರುವಾಗ ನೀವು ಜೇನುತುಪ್ಪ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಜೇನುತುಪ್ಪದಲ್ಲಿ ಆಂಟಿಕ್ಸಿಡೆಂಟ್ಗಳ ಜೊತೆಗೆ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿರುತ್ತದೆ. ಇದು ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ದಾಲ್ಚಿನ್ನಿ- ದಾಲ್ಚಿನ್ನಿ ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಚಳಿಗಾಲದ ಸಮಯದಲ್ಲಿ ಬೆಚ್ಚಗಿರಲು ಸಹಾಯ ಮಾಡುತ್ತದೆ. ಮಸಾಲಾ ಪದಾರ್ಥವಾಗಿ ಬಳಸುವ ದಾಲ್ಚಿನ್ನಿ ನಿಮ್ಮ ಅಹಾರದಲ್ಲಿ ಸೇರಿರಲಿ.

ಕೇಸರಿ- ದೇಹವನ್ನು ಬೆಚ್ಚಗಿಡಲು ಕೇಸರಿ ಸಹಾಯಕ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಕೇಸರಿ ಹಾಲಿಗೆ ಒಣದ್ರಾಕ್ಷಿಯನ್ನು ಸೇರಿಸಿ ಸೇವಿಸುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಬಹುದಾಗಿದೆ.

ಬೆಲ್ಲ- ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಬೆಲ್ಲ ಸಹಾಯಕವಾಗಿದೆ. ಸಕ್ಕರೆಗಿಂತ ಬೆಲ್ಲ ಅರೋಗ್ಯಕ್ಕೆ ಒಳ್ಳೆಯದು.

ಡ್ರೈ ಫ್ರೂಟ್ಸ್- ಚಳಿಗಾಲದ ಸಮಯದಲ್ಲಿ ಒಣಗಿದ ಹಣ್ಣುಗಳು ಅರೋಗ್ಯಕ್ಕೆ ಉತ್ತಮ. ಬಾದಾಮಿ, ಅಂಜೂರ, ದ್ರಾಕ್ಷಿಯಂತಹ ಡ್ರೈ ಫ್ರೂಟ್ಸ್ಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.
Published On - 12:39 pm, Mon, 29 November 21