IND vs ENG: ಕೊಹ್ಲಿ ಹುಡುಗರ ಪೆವಿಲಿಯನ್ ಪರೇಡ್; ಇಂಗ್ಲೆಂಡ್ ವಿರುದ್ಧ ಕೆಟ್ಟ ದಾಖಲೆಗಳ ಸರಮಾಲೆ ಹೊತ್ತ ಭಾರತ

| Updated By: ಪೃಥ್ವಿಶಂಕರ

Updated on: Aug 25, 2021 | 10:10 PM

IND vs ENG: ಭಾರತವು ಇಂಗ್ಲೆಂಡಿನಲ್ಲಿ ಮೂರನೇ ಕಡಿಮೆ ಸ್ಕೋರ್ ಮಾಡಿದೆ. 1974 ರಲ್ಲಿ ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತ 42 ರನ್ ಮಾಡಿತ್ತು. 1952 ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಭಾರತೀಯ ತಂಡವನ್ನು 58 ಕ್ಕೆ ಆಲ್ಔಟ್ ಆಗಿತ್ತು.

1 / 5
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ನಲ್ಲಿ ಭಾರತೀಯ ಕ್ರಿಕೆಟ್ ತಂಡ ಹೀನಾಯ ಪ್ರದರ್ಶನ ತೋರಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 78 ರನ್ಗಳಿಗೆ ಆಲ್ಔಟ್ ಆಗಿದೆ. ಹೆಡಿಂಗ್ಲೆ ಟೆಸ್ಟ್ನಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳು ಕಳಪೆ ಬ್ಯಾಟಿಂಗ್ ಮಾಡಿ ವಿಕೆಟ್ಗಳನ್ನು ಕೈಚೆಲ್ಲಿದರು. ಭಾರತದ ಪರ ರೋಹಿತ್ ಶರ್ಮಾ (19) ಮತ್ತು ಅಜಿಂಕ್ಯ ರಹಾನೆ (18) ಮಾತ್ರ ಎರಡಂಕಿ ದಾಟಿದ ಆಟಗಾರರಾದರು. ಈ ಇಬ್ಬರ ನಂತರ, ಒಂಬತ್ತನೇ ಸ್ಥಾನದಲ್ಲಿ ಬಂದ ಇಶಾಂತ್ ಶರ್ಮಾ ಎಂಟು ರನ್ ಗಳಿಸುವ ಮೂಲಕ ಅತ್ಯಧಿಕ ಸ್ಕೋರರ್ ಆಗಿದ್ದಾರೆ. ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ ಮತ್ತು ಕ್ರೇಗ್ ಓರ್ಟನ್ ತಲಾ ಮೂರು ವಿಕೆಟ್ ಪಡೆದರು. 78 ರನ್ ಗಳಿಗೆ ಇಳಿದ ಕಾರಣ, ಭಾರತ ತಂಡವು ಹಲವು ಕಳಪೆ ದಾಖಲೆಗಳನ್ನು ಮಾಡಿದೆ.

2 / 5
ಭಾರತವು ಇಂಗ್ಲೆಂಡಿನಲ್ಲಿ ಮೂರನೇ ಕಡಿಮೆ ಸ್ಕೋರ್ ಮಾಡಿದೆ. 1974 ರಲ್ಲಿ ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತ 42 ರನ್ ಮಾಡಿತ್ತು. 1952 ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಭಾರತೀಯ ತಂಡವನ್ನು 58 ಕ್ಕೆ ಆಲ್ಔಟ್ ಆಗಿತ್ತು. 1952 ರಲ್ಲಿಯೇ ಭಾರತ ಮ್ಯಾಂಚೆಸ್ಟರ್‌ನಲ್ಲಿ 82 ರನ್ ಗಳಿಸಿತ್ತು. 200 ಕ್ಕಿಂತ ಕಡಿಮೆ ರನ್ ಗಳಿಸಿದ ನಂತರ ಭಾರತ ತಂಡ ಇಂಗ್ಲೆಂಡ್ನಲ್ಲಿ ಟೆಸ್ಟ್ ಗೆದ್ದಿಲ್ಲ. ಯಾವುದೇ ತಂಡದ ವಿರುದ್ಧವೂ ಭಾರತ 200 ಕ್ಕಿಂತ ಕಡಿಮೆ ರನ್ ಗಳಿಸಿದ ನಂತರ ಗೆದ್ದಿಲ್ಲ. 2012 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಂಬೈ ಟೆಸ್ಟ್‌ನಲ್ಲಿ 104 ರನ್ ಗಳಿಸಿ ಟೆಸ್ಟ್ ಗೆದ್ದಿತ್ತು.

3 / 5
ಭಾರತವು 1987 ರಲ್ಲಿ ಲೀಡ್ಸ್ ಟೆಸ್ಟ್ನಲ್ಲಿ ಮೊದಲ ಬಾರಿಗೆ ಟೆಸ್ಟ್‌ನ ಮೊದಲ ದಿನದಂದು 78 ಕ್ಕಿಂತ ಕಡಿಮೆ ಸ್ಕೋರ್‌ಗೆ ಔಟಾಗಿತ್ತು. ನಂತರ ವೆಸ್ಟ್ ಇಂಡೀಸ್ ವಿರುದ್ಧ ಆಡುವಾಗ, ಭಾರತ ತಂಡವನ್ನು ದೆಹಲಿಯಲ್ಲಿ 75 ರನ್ ಗಳಿಗೆ ಆಲ್ಔಟ್ ಮಾಡಲಾಗಿತ್ತು. ಇದಾದ ನಂತರ, 34 ವರ್ಷಗಳ ನಂತರ ಇದೀಗ ಟೀಂ ಇಂಡಿಯಾ 78 ರನ್ ಗಳಿಗೆ ಔಟಾಗಿದೆ. ಅದೇ ಸಮಯದಲ್ಲಿ, ಟಾಸ್ ಗೆದ್ದ ನಂತರ ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 100 ಕ್ಕಿಂತ ಕಡಿಮೆ ರನ್ ಗಳಿಗೆ ಆಲೌಟ್ ಆಗಿದ್ದು 20 ವರ್ಷದ ನಂತರ ಇದು ಎರಡನೇ ಬಾರಿ. ಇದಕ್ಕೂ ಮೊದಲು, 2008 ರ ದಕ್ಷಿಣ ಆಫ್ರಿಕಾ ವಿರುದ್ಧದ ಅಹಮದಾಬಾದ್ ಟೆಸ್ಟ್‌ನಲ್ಲಿ ಇದು ಸಂಭವಿಸಿತು.

4 / 5
ಭಾರತೀಯ ತಂಡ 21 ನೇ ಶತಮಾನದಲ್ಲಿ ಐದನೇ ಬಾರಿಗೆ ಟೆಸ್ಟ್ ಕ್ರಿಕೆಟ್ನಲ್ಲಿ 100 ಕ್ಕಿಂತ ಕಡಿಮೆ ಸ್ಕೋರ್ಗೆ ಔಟಾಗಿದೆ. ಇದರ ಅಡಿಯಲ್ಲಿ 2020 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 36, 2008 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76, ಇಂಗ್ಲೆಂಡ್ ವಿರುದ್ಧ 2021 ರಲ್ಲಿ 78, 2014 ರಲ್ಲಿ ಇಂಗ್ಲೆಂಡ್ ವಿರುದ್ಧ 94 ಮತ್ತು 2002 ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 99 ರನ್ಗಳಿಗೆ ಔಟಾಗಿತ್ತು.

5 / 5
ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಟೆಸ್ಟ್ನಲ್ಲಿ ಭಾರತ 364 ರನ್ ಗಳಿಸಿತು. ಇಂಗ್ಲೆಂಡ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಾಗ ಇದು ಭಾರತದ ಅತ್ಯಧಿಕ ಸ್ಕೋರ್. ಇಂದಿನ ಟೆಸ್ಟ್‌ನಲ್ಲಿ, ಭಾರತವು ತಮ್ಮ ಕಡಿಮೆ ಸ್ಕೋರ್‌ಗೆ ಅಂದರೆ ಹೆಡಿಂಗ್ಲಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿದ ನಂತರ 78 ರನ್ ಗಳಿಗೆ ಆಲ್ಔಟ್ ಆಗಿದೆ.

Published On - 10:09 pm, Wed, 25 August 21