ಜನರೇ ನಮ್ಮ ಶಕ್ತಿ ಎಂದ ಮೋದಿ, 2 ತಿಂಗಳ ಆಹಾರ ಸಂಗ್ರಹಣೆಗೆ ಮುಂದಾದ ಪಾಕ್, ಪಾಕಿಸ್ತಾನಕ್ಕೆ ಇಂಡೋನೇಷ್ಯಾ ಚಾಟಿ
India-Pakistan Tensions: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಎಲ್‌ಒಸಿ ಉದ್ದಕ್ಕೂ ಇರುವ 13 ಕ್ಷೇತ್ರಗಳಲ್ಲಿ ಎರಡು ತಿಂಗಳ ಕಾಲ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಲು ಪಿಒಕೆ ನಾಗರಿಕರಿಗೆ ಸೂಚನೆಗಳನ್ನು ನೀಡಲಾಗಿದೆ. ಭಾರತದ ಇಂದಿನ ಶಕ್ತಿ ಕೇವಲ ಶಸ್ತ್ರಾಸ್ತ್ರಗಳಲ್ಲಿ ಮಾತ್ರವಲ್ಲ, ಏಕತೆಯಲ್ಲೂ ಇದೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಕಾರಣರಾದ ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಬಂಧಿಸುವಲ್ಲಿ ಭಾರತದೊಂದಿಗೆ ಸಹಕರಿಸುವಂತೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಪಾಕಿಸ್ತಾನವನ್ನು ಒತ್ತಾಯಿಸಿದರು. ಉಗ್ರರನ್ನು ಪರೋಕ್ಷವಾಗಿ ಸಲಹುತ್ತಿರುವ ಪಾಕಿಸ್ತಾನಕ್ಕೆ ಪೆಟ್ಟು ಕೊಡಲು ಭಾರತ ಮುಂದಾಗಿದೆ. ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ಗ್ರೇ ಪಟ್ಟಿಗೆ ಸೇರಿಸಲು ಭಾರತ ಪ್ರಯತ್ನ ಮಾಡುತ್ತಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಇಂದಿನ ಬೆಳವಣಿಗೆಗಳಿವು.

1 / 8

2 / 8

3 / 8

4 / 8

5 / 8

6 / 8

7 / 8

8 / 8
Follow Us




