ತಂಡದಲ್ಲಿ ಸ್ಥಾನ ಪಡೆಯುವ ಖಚಿತತೆ ಹೊಂದಿರುವ ಆಟಗಾರರು: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್ , ಇಶಾನ್ ಕಿಶನ್, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್
ಟೀಂ ಇಂಡಿಯಾ ಇನ್ನಿಂಗ್ಸ್‌ನ 13.2ನೇ ಓವರ್‌ನಲ್ಲಿ ಸ್ಯಾಮ್ ಕರನ್ ಎಸೆದ ಎಸೆತವನ್ನು, ಯಾದವ್ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಯಾದವ್ ಬ್ಯಾಟ್ಗೆ ತಾಗಿ ಚಿಮ್ಮಿದ ಚೆಂಡನ್ನು ಡೇವಿಡ್ ಮಲಾನ್ ಡೈವ್ ಮಾಡಿ ಕ್ಯಾಚ್ ಮಾಡಿದರು. ಆದರೆ ಮಲಾನ್ ಹಿಡಿದ ಕ್ಯಾಚ್ ಅನುಮಾನಾಸ್ಪದವಾಗಿತ್ತು. ಅಂಪೈರ್ ರಿವ್ಯೂವ್ನಲ್ಲಿ ಚೆಂಡು ನೆಲಕ್ಕೆ ತಾಗಿದಂತೆ ಕಾಣಿಸುತ್ತಿತ್ತು. ಇದನ್ನು ಪರಿಶೀಲಿಸಿದ ಥರ್ಡ್ ಅಂಪೈರ್ ಕೂಡ ಅದನ್ನು ಔಟ್ ಎಂದು ಅಂತಿಮವಾಗಿ ತೀರ್ಪು ನೀಡಿದರು. ಇದು ವಿವಾದಕ್ಕೆ ಕಾರಣವಾಗಿದೆ.
ಸೂರ್ಯಕುಮಾರ್ ಯಾದವ್ ಔಟ್ ತೀರ್ಪು ನಿಜಕ್ಕೂ ವಿವಾದಾತ್ಮಕವಾಗಿದೆ. ಯಾಕೆಂದರೆ ಚೆಂಡು ನೆಲಕ್ಕೆ ತಾಗಿದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಡಿಆರ್‌ಎಸ್‌ನಲ್ಲೂ ಇದನ್ನು ಸುಲಭವಾಗಿ ಔಟ್ ಎಂದು ಹೇಳುವಂತಿರಲಿಲ್ಲ. ಆದರೆ ಅಂತಿಮವಾಗಿ ಫೀಲ್ಡ್ ಅಂಪೈರ್ ತೀರ್ಮಾನವನ್ನ ಗಣನೆಗೆ ತೆಗೆದುಕೊಂಡ 3ನೇ ಅಂಪೈರ್ ಸಾಫ್ಟ್ ಸಿಗ್ನಲ್ ಎಂದು 'ಔಟ್' ತೀರ್ಪು ನೀಡಿದರು.
ಅಂಪೈರ್ ತಮ್ಮ ನಿರ್ಧಾರದ ಬಗ್ಗೆ ಖಚಿತವಾಗಿರದಿದ್ದರೆ, ಅವರು ಮೂರನೇ ಅಂಪೈರ್‌ಗೆ ನಿರ್ಧಾರ ತೆಗೆದುಕೊಳ್ಳುವಂತೆ ಕೇಳುವುದಕ್ಕೂ ಮೊದಲು ತಮ್ಮ ನಿರ್ಧಾರವನ್ನು ನೀಡುತ್ತಾರೆ. ಈ ನಿರ್ಧಾರ ಔಟ್ ಅಥವಾ ನಾಟ್ಔಟ್ ಕೂಡ ಆಗಿರಬಹುದು. ಮೂರನೇ ಅಂಪೈರ್ ಸಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಆನ್-ಫೀಲ್ಡ್ ಅಂಪೈರ್ನ ಸಾಫ್ಟ್ ಸಿಗ್ನಲ್ ಅನ್ನು ಮೂರನೇ ಅಂಪೈರ್ ಗಣನೆಗೆ ತೆಗೆದುಕೊಳ್ಳುತ್ತಾರೆ. ಆನ್-ಫೀಲ್ಡ್ ಅಂಪೈರ್ ನೀಡಿದ ಸಾಫ್ಟ್ ಸಿಗ್ನಲ್ ಆಧಾರದ ಮೇಲೆ 3ನೇ ಅಂಪೈರ್ ತಮ್ಮ ನಿರ್ಧಾರವನ್ನು ಪ್ರಕಟಿಸುತ್ತಾರೆ.
ಥರ್ಡ್ ಮ್ಯಾನ್ ಬೌಂಡರಿಯಲ್ಲಿ ಸುಂದರ್ ಅವರ ಹೊಡೆತವನ್ನು ಆದಿಲ್ ರಶೀದ್ ಸುಲಭವಾಗಿ ಕ್ಯಾಚ್ ಮಾಡಿದರು. ಆದರೆ ಕ್ಯಾಚ್ ತೆಗೆದುಕೊಳ್ಳುವಾಗ ಆದಿಲ್ ರಶೀದ್ ಅವರ ಕಾಲು ಬೌಂಡರಿಯನ್ನು ಸ್ಪರ್ಶಿಸುತ್ತಿರುವುದು ಕಂಡುಬಂತು. ಆದರೆ ಸುಂದರ್ ಅವರನ್ನು ಆನ್-ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಮಾನ ನೀಡಿದರು. ಮೂರನೇ ಅಂಪೈರ್‌ಗೆ ಸಾಕಷ್ಟು ಪುರಾವೆಗಳಿಲ್ಲದ ಕಾರಣ ಇಂತಹ ಪರಿಸ್ಥಿತಿಯಲ್ಲಿ 3ನೇ ಅಂಪೈರ್ ಆನ್-ಫೀಲ್ಡ್ ಅಂಪೈರ್ ಅವರ ತೀರ್ಮಾನವನ್ನು ಎತ್ತಿಹಿಡಿದರು.
ಭಾರತದ ನಾಯಕ ವಿರಾಟ್ ಕೊಹ್ಲಿ ಪಂದ್ಯದ ನಂತರ ಈ ವಿಷಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ತನಗೆ ಗೊತ್ತಿಲ್ಲದ ಸಾಫ್ಟ್ ಸಿಗ್ನಲ್ ಎಂದು ಅಂಪೈರ್ ಏಕೆ ಹೇಳಲು ಸಾಧ್ಯವಿಲ್ಲ ಎಂದು ಕೊಹ್ಲಿ ಆಶ್ಚರ್ಯಪಟ್ಟರು. ಕ್ರಿಕೆಟ್ ಅನ್ನು ಉತ್ತಮಗೊಳಿಸಲು, ಇಂತಹ ನ್ಯೂನತೆಗಳನ್ನು ತೆಗೆದುಹಾಕುವ ಅವಶ್ಯಕತೆಯಿದೆ ಎಂದು ಕೊಹ್ಲಿ ಹೇಳಿದರು.
Published On - 2:02 pm, Fri, 19 March 21