AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Napier Weather: ಭಾರತ- ನ್ಯೂಜಿಲೆಂಡ್ ಮೂರನೇ ಟಿ20 ಪಂದ್ಯಕ್ಕೆ ಮಳೆಯ ಕಾಟ?: ಇಲ್ಲಿದೆ ಹವಾಮಾನ ವರದಿ

India vs New Zealand 3rd T20I Weather Report: ಭಾರತ- ನ್ಯೂಜಿಲೆಂಡ್ ಪಂದ್ಯದ ದಿನ ನೆಪಯರ್​ನಲ್ಲಿ ಗರಿಷ್ಠ ತಾಪಮಾನ ಶೇ. 22 ಡಿಗ್ರಿ ಸೆಲ್ಸಿಯಷ್ಟ್​​ನಷ್ಟು ಇರಲಿದೆ. ಆದರೆ, ಪಂದ್ಯ ನಡೆಯುವ ಸಂದರ್ಭ ಮಳೆ ಬರುವ ಸಾಧ್ಯತೆ ಶೇ. 25 ರಷ್ಟು ಇದೆಯಷ್ಟೆ.

TV9 Web
| Updated By: Vinay Bhat|

Updated on:Nov 22, 2022 | 9:46 AM

Share
ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದ್ದ ಭಾರತ ಇದೀಗ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇಂದು ನೆಪಯರ್​ನ ಮಕ್ಲೆನ್ ಪಾರ್ಕ್​​ನಲ್ಲಿ ನಡುವೆ ಹೈವೋಲ್ಟೇಜ್ ಕದನ ನಡೆಯಲಿದೆ. ಇದರಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಲಿದೆ.

1 / 8
ನ್ಯೂಜಿಲೆಂಡ್​ಗೆ ಈ ಪಂದ್ಯ ಗೆಲ್ಲಲೇ ಬೇಕು. ಗೆದ್ದರೆ ಸರಣಿ ಸಮಬಲ ಆಗಲಿದೆ. ಸೋತರೆ ತವರಿನಲ್ಲೇ ಮುಖಭಂಗ ಅನುಭವಿಸಲಿದೆ. ಮಳೆಬಂದು ಕನಿಷ್ಠ ಪಂದ್ಯ ರದ್ದಾದರು ಟ್ರೋಫಿ ಹಾರ್ದಿಕ್ ಪಡೆಯ ಕೈವಶ ಆಗಲಿದೆ. ಹಾಗಾದರೆ ಈ ರೋಚಕ ಕದನಕ್ಕೆ ಮಳೆ ಅಡ್ಡಿ ಪಡಿಸುತ್ತಾ?, ನೆಪಯರ್​ ಹವಾಮಾನ ಹೇಗಿದೆ?.

2 / 8
ಪಂದ್ಯದ ದಿನ ನೆಪಯರ್​ನಲ್ಲಿ ಗರಿಷ್ಠ ತಾಪಮಾನ ಶೇ. 22 ಡಿಗ್ರಿ ಸೆಲ್ಸಿಯಷ್ಟ್​​ನಷ್ಟು ಇರಲಿದೆ. ಆದರೆ, ಪಂದ್ಯ ನಡೆಯುವ ಸಂದರ್ಭ ಮಳೆ ಬರುವ ಸಾಧ್ಯತೆ ಶೇ. 25 ರಷ್ಟು ಇದೆಯಷ್ಟೆ. ಹೀಗಾಗಿ ಸಂಪೂರ್ಣ 20 ಓವರ್​ಗಳ ಪಂದ್ಯವನ್ನು ನಿರೀಕ್ಷಿಸಲಾಗಿದೆ. ಮಳೆ ಇದ್ದರೂ ತಡರಾತ್ರಿ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

3 / 8
ಭಾರತ ತಂಡ ಬ್ಯಾಟಿಂಗ್-ಬೌಲಿಂಗ್​ನಲ್ಲಿ ಭರ್ಜರಿ ಫಾರ್ಮ್​ನಲ್ಲಿದೆ. ಇಂದುಕೂಡ ಸೂರ್ಯ ಬ್ಯಾಟ್​ನಿಂದ ಹಿಂದಿನ ಪಂದ್ಯದ ರೀತಿಯ ಆಟ ನಿರೀಕ್ಷಿಸಲಾಗಿದೆ. ಓಪನರ್ ಆಗಿ ಬಂದ ರಿಷಭ್ ಪಂತ್ ವೈಫಲ್ಯ ಅನುಭವಿಸಿದ್ದು, ಶುಭ್ಮನ್ ಗಿಲ್ ಪದಾರ್ಪಣೆ ಮಾಡುತ್ತಾರ ನೋಡಬೇಕಿದೆ.

4 / 8
ಶ್ರೇಯಸ್ ಅಯ್ಯರ್, ನಾಯಕ ಹಾರ್ದಿಕ್ ಪಾಂಡ್ಯ, ದೀಪಕ್ ಹೂಡ್ ಬ್ಯಾಟಿಂಗ್​ನಲ್ಲಿ ಇನ್ನಷ್ಟು ಮಿಂಚಬೇಕಿದೆ. ಭುವನೇಶ್ವರ್‌ ಕುಮಾರ್‌ ಮತ್ತು ಅರ್ಷದೀಪ್‌ ಸಿಂಗ್‌ ಹೊಸ ಚೆಂಡಿನೊಂದಿಗೆ ಉತ್ತಮ ದಾಳಿ ನಡೆಸುತ್ತಿದ್ದಾರೆ.

5 / 8
ಇತ್ತ ನಾಯಕ ಕೇನ್ ವಿಲಿಯಮ್ಸನ್ ಅವರೇ ತೃತೀಯ ಟಿ20 ಪಂದ್ಯಕ್ಕೆ ಅಲಭ್ಯರಾಗಿರುವುದು ಕಿವೀಸ್ ಪಡೆಗೆ ದೊಡ್ಡ ಹಿನ್ನಡೆ. ಪೂರ್ವ ನಿಯೋಜಿತ ವೈದ್ಯಕೀಯ ತಪಾಸಣೆ ಇರುವ ಕಾರಣ ತೃತೀಯ ಟಿ20 ಯಲ್ಲಿ ಕೇನ್ ಕಣಕ್ಕಿಳಿಯುತ್ತಿಲ್ಲ.

6 / 8
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಪಂದ್ಯ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ. ಬೆಳಗ್ಗೆ 11.30ಕ್ಕೆ ಟಾಸ್ ನಡೆಯಲಿದೆ. ನೇರ ಪ್ರಸಾರವು ಡಿಡಿ ಸ್ಪೋರ್ಟ್ಸ್‌ನಲ್ಲಿ ಮಾತ್ರ ಇರುತ್ತದೆ. ಲೈವ್ ಸ್ಟ್ರೀಮಿಂಗ್ ಅಮೆಜಾನ್ ಪ್ರೈಮ್‌ನಲ್ಲಿರಲಿದೆ.

7 / 8
ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್ (ಉಪನಾಯಕ/ ವಿಕೆಟ್‌ಕೀಪರ್‌), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್‌), ವಾಷಿಂಗ್ಟನ್‌ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್.

8 / 8

Published On - 9:46 am, Tue, 22 November 22

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು

ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ

ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ

ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ

ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್

ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ

ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ

ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ

ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ

ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..