ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದ್ದ ಭಾರತ ಇದೀಗ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇಂದು ನೆಪಯರ್ನ ಮಕ್ಲೆನ್ ಪಾರ್ಕ್ನಲ್ಲಿ ನಡುವೆ ಹೈವೋಲ್ಟೇಜ್ ಕದನ ನಡೆಯಲಿದೆ. ಇದರಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಲಿದೆ.
ನ್ಯೂಜಿಲೆಂಡ್ಗೆ ಈ ಪಂದ್ಯ ಗೆಲ್ಲಲೇ ಬೇಕು. ಗೆದ್ದರೆ ಸರಣಿ ಸಮಬಲ ಆಗಲಿದೆ. ಸೋತರೆ ತವರಿನಲ್ಲೇ ಮುಖಭಂಗ ಅನುಭವಿಸಲಿದೆ. ಮಳೆಬಂದು ಕನಿಷ್ಠ ಪಂದ್ಯ ರದ್ದಾದರು ಟ್ರೋಫಿ ಹಾರ್ದಿಕ್ ಪಡೆಯ ಕೈವಶ ಆಗಲಿದೆ. ಹಾಗಾದರೆ ಈ ರೋಚಕ ಕದನಕ್ಕೆ ಮಳೆ ಅಡ್ಡಿ ಪಡಿಸುತ್ತಾ?, ನೆಪಯರ್ ಹವಾಮಾನ ಹೇಗಿದೆ?.
ಪಂದ್ಯದ ದಿನ ನೆಪಯರ್ನಲ್ಲಿ ಗರಿಷ್ಠ ತಾಪಮಾನ ಶೇ. 22 ಡಿಗ್ರಿ ಸೆಲ್ಸಿಯಷ್ಟ್ನಷ್ಟು ಇರಲಿದೆ. ಆದರೆ, ಪಂದ್ಯ ನಡೆಯುವ ಸಂದರ್ಭ ಮಳೆ ಬರುವ ಸಾಧ್ಯತೆ ಶೇ. 25 ರಷ್ಟು ಇದೆಯಷ್ಟೆ. ಹೀಗಾಗಿ ಸಂಪೂರ್ಣ 20 ಓವರ್ಗಳ ಪಂದ್ಯವನ್ನು ನಿರೀಕ್ಷಿಸಲಾಗಿದೆ. ಮಳೆ ಇದ್ದರೂ ತಡರಾತ್ರಿ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತ ತಂಡ ಬ್ಯಾಟಿಂಗ್-ಬೌಲಿಂಗ್ನಲ್ಲಿ ಭರ್ಜರಿ ಫಾರ್ಮ್ನಲ್ಲಿದೆ. ಇಂದುಕೂಡ ಸೂರ್ಯ ಬ್ಯಾಟ್ನಿಂದ ಹಿಂದಿನ ಪಂದ್ಯದ ರೀತಿಯ ಆಟ ನಿರೀಕ್ಷಿಸಲಾಗಿದೆ. ಓಪನರ್ ಆಗಿ ಬಂದ ರಿಷಭ್ ಪಂತ್ ವೈಫಲ್ಯ ಅನುಭವಿಸಿದ್ದು, ಶುಭ್ಮನ್ ಗಿಲ್ ಪದಾರ್ಪಣೆ ಮಾಡುತ್ತಾರ ನೋಡಬೇಕಿದೆ.
ಶ್ರೇಯಸ್ ಅಯ್ಯರ್, ನಾಯಕ ಹಾರ್ದಿಕ್ ಪಾಂಡ್ಯ, ದೀಪಕ್ ಹೂಡ್ ಬ್ಯಾಟಿಂಗ್ನಲ್ಲಿ ಇನ್ನಷ್ಟು ಮಿಂಚಬೇಕಿದೆ. ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ಹೊಸ ಚೆಂಡಿನೊಂದಿಗೆ ಉತ್ತಮ ದಾಳಿ ನಡೆಸುತ್ತಿದ್ದಾರೆ.
ಇತ್ತ ನಾಯಕ ಕೇನ್ ವಿಲಿಯಮ್ಸನ್ ಅವರೇ ತೃತೀಯ ಟಿ20 ಪಂದ್ಯಕ್ಕೆ ಅಲಭ್ಯರಾಗಿರುವುದು ಕಿವೀಸ್ ಪಡೆಗೆ ದೊಡ್ಡ ಹಿನ್ನಡೆ. ಪೂರ್ವ ನಿಯೋಜಿತ ವೈದ್ಯಕೀಯ ತಪಾಸಣೆ ಇರುವ ಕಾರಣ ತೃತೀಯ ಟಿ20 ಯಲ್ಲಿ ಕೇನ್ ಕಣಕ್ಕಿಳಿಯುತ್ತಿಲ್ಲ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಪಂದ್ಯ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ. ಬೆಳಗ್ಗೆ 11.30ಕ್ಕೆ ಟಾಸ್ ನಡೆಯಲಿದೆ. ನೇರ ಪ್ರಸಾರವು ಡಿಡಿ ಸ್ಪೋರ್ಟ್ಸ್‌ನಲ್ಲಿ ಮಾತ್ರ ಇರುತ್ತದೆ. ಲೈವ್ ಸ್ಟ್ರೀಮಿಂಗ್ ಅಮೆಜಾನ್ ಪ್ರೈಮ್‌ನಲ್ಲಿರಲಿದೆ.
ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್ (ಉಪನಾಯಕ/ ವಿಕೆಟ್‌ಕೀಪರ್), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್.
Published On - 9:46 am, Tue, 22 November 22