- Kannada News Photo gallery after 10 years Basavanagudi Nandi Teppotsava in kempambudhi lake bangalore
Basavanagudi Nandi Teppotsava: 10 ವರ್ಷದ ಬಳಿಕ ಬಸವನಗುಡಿಯಲ್ಲಿ ನಂದಿ ತೆಪ್ಪೋತ್ಸವ, ಭಕ್ತಿಯಲ್ಲಿ ಮಿಂದೆದ್ದ ಜನ
ಬಸವನಗುಡಿಯ ಐತಿಹಾಸಿಕ ಕಡಲೆ ಕಾಯಿ ಪರಿಷೆ ನ.20ರಿಂದ ಶುರುವಾಗಿದೆ. ಹೀಗಾಗಿ ಬಸವಗುಡಿಯ ಸುತ್ತಾ- ಮುತ್ತಾ ಜಾತ್ರೆಯ ವಾತಾವರಣ ಮನೆಮಾಡಿದೆ. ಇನ್ನು ಬಸವನಗುಡಿಗೆ ಹೊಂದಿಕೊಂಡಂತೆ ಇರುವ ಕೆರೆಯಲ್ಲಿ 10 ವರ್ಷದ ಬಳಿಕ ಬಸವಣ್ಣನ ತೆಪ್ಪೋತ್ಸವ ನ.21ರಂದು ನಡೆದಿದೆ.
Updated on:Nov 22, 2022 | 8:54 AM

ಬಸವನಗುಡಿಯ ಐತಿಹಾಸಿಕ ಕಡಲೆ ಕಾಯಿ ಪರಿಷೆ ನ.20ರಿಂದ ಶುರುವಾಗಿದೆ. ಹೀಗಾಗಿ ಬಸವಗುಡಿಯ ಸುತ್ತಾ- ಮುತ್ತಾ ಜಾತ್ರೆಯ ವಾತಾವರಣ ಮನೆಮಾಡಿದೆ. ಇನ್ನು ಬಸವನಗುಡಿಗೆ ಹೊಂದಿಕೊಂಡಂತೆ ಇರುವ ಕೆರೆಯಲ್ಲಿ 10 ವರ್ಷದ ಬಳಿಕ ಬಸವಣ್ಣನ ತೆಪ್ಪೋತ್ಸವ ನ.21ರಂದು ನಡೆದಿದೆ.

ಕಡಲೆ ಕಾಯಿ ಪರಿಷೆ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ಕೆಂಪಾಬುದಿ ಕೆರೆಯಲ್ಲಿ ಬಸವಣ್ಣ ಮೂರ್ತಿಯ ತೆಪ್ಪೋತ್ಸವ ನಡೆಸಲಾಯ್ತು. ಅರ್ಚಕರು ಬಸವಣ್ಣನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿಸುಬ್ರಹ್ಮಣ್ಯ ತೆಪ್ಪೋತ್ಸವ ಉದ್ಘಾಟಿಸಿದ್ರು.

ಬಸವಣ್ಣನ ಮೂರ್ತಿಯನ್ನ ತೆಪ್ಪದ ಒಳಗೆ ಕೂರಿಸಿಕೊಂಡು ಕೆರೆಯಲ್ಲಿ ಉತ್ಸವ ಮಾಡಲಾಯ್ತು. ಕೆರೆ ಸುತ್ತ ಲೈಟಿಂಗ್ಸ್ ಅಳವಡಿಸಿದ್ದು ಸುತ್ತಮುತ್ತಲ ಜನ ತೆಪ್ಪೋತ್ಸವ ಕಣ್ತುಂಬಿಕೊಂಡ್ರು.

10 ವರ್ಷಗಳ ಹಿಂದೆ ಕೆಂಪಾಬುದಿ ಕೆರೆಯಲ್ಲಿ ತೆಪ್ಪೋತ್ಸವ ನಡೆಸಲಾಗಿತ್ತು. ಆದಾದ ನಂತರ ಕೆರೆಯಲ್ಲಿ ನೀರಿಲ್ಲದಾ ಕಾರಣ ತೆಪ್ಪೋತ್ಸವ ಮಾಡಿರಲಿಲ್ಲ. ಈ ವರ್ಷ ಮಳೆ ಚೆನ್ನಾಗಿ ಬಂದಿರುವ ಕಾರಣ ಬಸವಣ್ಣನ ತೆಪ್ಪೋತ್ಸವವನ್ನ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನು ದೊಡ್ಡ ಮಟ್ಟದಲ್ಲಿ ತೆಪ್ಪೋತ್ಸವ ನಡೆಯಲಿದೆ ಎಂದು ಎಂಎಲ್ಎ ರವಿ ಸುಬ್ರಮಣ್ಯಂ ತಿಳಿಸಿದರು.

ಬಸವನಗುಡಿಯ ನಂದಿ ತೆಪ್ಪೋತ್ಸವದಲ್ಲಿ ರಾರಾಜಿಸಿದ ನಂದಿ ವಿಗ್ರಹವನ್ನು ನೋಡಿ ಜನ ಭಕ್ತಿ ಪರವಶರಾದರು. ತೆಪ್ಪೋತ್ಸವ ಹಿನ್ನೆಲೆ ದೀಪಾಲಂಕಾರದಿಂದ ಕೆಂಪಾಬುದಿ ಕೆರೆ ಕಂಗೊಳಿಸುತ್ತಿತ್ತು.

ಎರಡನೇ ದಿನದ ಕಡಲೆಕಾಯಿ ಪರಿಷೆಯಲ್ಲಿ ನೂಕು ನುಗ್ಗಲು ಕಂಡು ಬಂತು. ಬಸವನಗುಡಿ ಸುತ್ತಾ - ಮುತ್ತಾ ಜನ ಸಾಹರವೇ ಕಂಡು ಬಂತು. ಕುಟುಂಬ ಸಮೇತರಾಗಿ ಜಾತ್ರೆ ನೋಡಿ ವಿವಿಧ ಬಗೆಯ ಕಡಲೆಕಾಯಿಗಳನ್ನ ಖರೀದಿ ಮಾಡಿ, ಜನ ಸಂತೋಷ ವ್ಯಕ್ತಪಡಿಸಿದ್ರು.

ಕೊರೊನಾದಿಂದ ಮಂಕಾಗಿದ್ದ ಪರಿಷೆಗೆ ಈ ಬಾರಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ರು. ನ.23ರ ವರೆಗೂ ಕಡಲೆಕಾಯಿ ಪರಿಷೆ ನಡೆಯಲಿದೆ.
Published On - 8:54 am, Tue, 22 November 22



















