ಚೀನಾವನ್ನು ಮಣಿಸಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಕಿರೀಟ ತೊಟ್ಟ ಭಾರತ ಮಹಿಳಾ ಹಾಕಿ ತಂಡ

Women's Asian Champions Trophy hockey final: ಬಿಹಾರದ ರಾಜಗೀರ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್‌ನಲ್ಲಿ ಭಾರತ ತಂಡ, ಚೀನಾವನ್ನು 1-0 ಅಂತರದಿಂದ ಸೋಲಿಸಿ ಮೂರನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ದೀಪಿಕಾ ಅವರ ಏಕೈಕ ಗೋಲು ಭಾರತಕ್ಕೆ ಗೆಲುವು ತಂದುಕೊಟ್ಟಿತು. ಈ ಗೆಲುವಿನೊಂದಿಗೆ ಭಾರತ ತಂಡ 2016ರ ಗೆಲುವಿನ ಇತಿಹಾಸವನ್ನು ಪುನರಾವರ್ತಿಸಿದೆ. ಲೀಗ್ ಹಂತದಲ್ಲೂ ಚೀನಾವನ್ನು ಸೋಲಿಸಿದ ಭಾರತ, ಸೆಮಿಫೈನಲ್‌ನಲ್ಲಿ ಜಪಾನ್‌ ಅನ್ನು ಮಣಿಸಿತ್ತು.

ಪೃಥ್ವಿಶಂಕರ
|

Updated on: Nov 20, 2024 | 7:32 PM

ಬಿಹಾರದ ರಾಜಗೀರ್ ಕ್ರೀಡಾಂಗಣದಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಚೀನಾ ಮಹಿಳಾ ಹಾಕಿ ತಂಡವನ್ನು ಮಣಿಸಿದ ಭಾರತ ಮಹಿಳಾ ಹಾಕಿ ತಂಡ ಮೂರನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಸಲೀಮಾ ಟೆಟೆ ನಾಯಕತ್ವದಲ್ಲಿ ಭಾರತ ತಂಡ ಈ ಪಂದ್ಯದಲ್ಲಿ ಚೀನಾವನ್ನು 1-0 ಗೋಲುಗಳಿಂದ ಸೋಲಿಸಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಕಿರೀಟ ತೊಟ್ಟುಕೊಂಡಿದೆ.

1 / 6
ಭಾರತ ಮತ್ತು ಚೀನಾ ನಡುವೆ ನಡೆದ ಅಂತಿಮ ಪಂದ್ಯದಲ್ಲಿ, ಮೊದಲ ಎರಡು ಕ್ವಾರ್ಟರ್‌ಗಳು ಗೋಲುರಹಿತವಾಗಿದ್ದವು. ಅಂದರೆ, ಪಂದ್ಯದ ಮೊದಲಾರ್ಧದಲ್ಲಿ ಈ ಎರಡೂ ತಂಡಗಳಿಗೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಮೊದಲಾರ್ಧದಲ್ಲಿ ಭಾರತಕ್ಕೆ ನಾಲ್ಕು ಪೆನಾಲ್ಟಿ ಕಾರ್ನರ್ ಸಿಕ್ಕರೆ, ಚೀನಾಕ್ಕೆ ಎರಡು ಪೆನಾಲ್ಟಿ ಕಾರ್ನರ್ ಸಿಕ್ಕಿತು. ಆದರೆ, ಎರಡೂ ತಂಡಗಳು ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾದವು.

2 / 6
ಮೂರನೇ ಕ್ವಾರ್ಟರ್ ಆರಂಭವಾದ 30 ಸೆಕೆಂಡುಗಳಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ಭಾರತದ ದೀಪಿಕಾ ಯಶಸ್ವಿಯಾದರು. ಹೀಗಾಗಿ ಭಾರತ ತಂಡ ಪಂದ್ಯದಲ್ಲಿ ಒಂದು ಗೋಲಿನ ಮುನ್ನಡೆ ಸಾಧಿಸಿತು. ನಾಲ್ಕನೇ ಕ್ವಾರ್ಟರ್‌ನಲ್ಲಿ ಚೀನಾ ಆಟಗಾರರ ತಪ್ಪಿನಿಂದ ಭಾರತಕ್ಕೆ ಪೆನಾಲ್ಟಿ ಸ್ಟ್ರೋಕ್ ಸಿಕ್ಕಿತು. ಆದರೆ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ಭಾರತ ಯಶಸ್ವಿಯಾಗಲಿಲ್ಲ.

3 / 6
ಇದಾದ ಬಳಿಕ ಚೀನಾ ಆಟಗಾರ್ತಿಯರು ಆಕ್ರಮಣಕಾರಿ ನಿಲುವು ತಳೆದರು. ಆದರೆ, ಚೀನಾಕ್ಕೆ ಭಾರತೀಯ ಸಿಂಹಿಣಿಯರ ವಿರುದ್ಧ ಯಾವುದೇ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ ಪರ ದೀಪಿಕಾ ಏಕೈಕ ಗೋಲು ದಾಖಲಿಸುವ ಮೂಲಕ ಅವರ ವೈಯಕ್ತಿಕ ಗೋಲುಗಳ ಸಂಖ್ಯೆ 11ಕ್ಕೆ ಏರಿದರೆ, ಟೀಂ ಇಂಡಿಯಾದ ಗೋಲುಗಳ ಸಂಖ್ಯೆ 29ಕ್ಕೆ ಏರಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 2016ರ ಇತಿಹಾಸವನ್ನು ಮತ್ತೊಮ್ಮೆ ಪುನರಾವರ್ತಿಸಿದೆ.

4 / 6
ಈ ಪಂದ್ಯಕ್ಕೂ ಮುನ್ನ ಚೀನಾ ತಂಡ ಅಂಕಿಅಂಶಗಳ ಪ್ರಕಾರ ಭಾರತ ತಂಡಕ್ಕಿಂತ ಬಹಳ ಮುಂದಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಭಾರತ ತಂಡ ಮೇಲುಗೈ ಸಾಧಿಸಿತು. ಇನ್ನು ಈ ಟೂರ್ನಿಯಲ್ಲಿ ಭಾರತ ತಂಡ ತಾನು ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಪ್ರಶಸ್ತಿಯನ್ನು ವಶಪಡಿಸಿಕೊಂಡಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಜಪಾನ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ 3-0 ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿತ್ತು. ಇದಲ್ಲದೆ, ಲೀಗ್ ಹಂತದಲ್ಲಿಯೂ ಚೀನಾವನ್ನು 3-0 ಅಂತರದಿಂದ ಸೋಲಿಸಿತ್ತು.

5 / 6
ಭಾರತ ಮಹಿಳಾ ಹಾಕಿ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆದ್ದಿದ್ದು ಇದು ಮೂರನೇ ಬಾರಿ. ಈ ಹಿಂದೆ 2016 ಮತ್ತು 2023ರಲ್ಲಿಯೂ ಭಾರತ ಗೆದ್ದಿತ್ತು. 2016ರಲ್ಲಿಯೂ ಭಾರತ ಫೈನಲ್‌ನಲ್ಲಿ ಚೀನಾವನ್ನು ಮಣಿಸಿದ್ದರೆ, 2023ರಲ್ಲಿ ಜಪಾನ್‌ ತಂಡವನ್ನು ಸೋಲಿಸಿತ್ತು.

6 / 6
Follow us
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?

‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ

ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್

ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!

ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ

ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?

ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ

"ಇಸ್ಪೀಟ್ ಆಟ ಆಡಲೇಬೇಕಾ ಸರ್​"? ಪೊಲೀಸರಿಗೆ ಮಕ್ಕಳ ಪ್ರಶ್ನೆ
ಫೆಂಗಲ್ ಪರಿಣಾಮ: ಟೊಮೆಟೋಗೆ ಭಾರಿ ಬೇಡಿಕೆ, ದರವೂ ಹೆಚ್ಚಳ

ರಜತ್ ಆಯ್ತು ಈಗ ತ್ರಿವಿಕ್ರಂಗೆ ತಲೆ ಬೋಳಿಸೋ ಚಾಲೆಂಜ್; ಒಪ್ಪಿದ್ರಾ?