Kannada News Photo gallery India women team training session at Edgbaston Ground ahead of IND Wonen vs PAK Women Match in Commonwealth Games
INDW vs PAKW: ಭಾರತ-ಪಾಕಿಸ್ತಾನ ರೋಚಕ ಕದನಕ್ಕೆ ಕ್ಷಣಗಣನೆ: ಹರ್ಮನ್ ಪಡೆಯಿಂದ ಭರ್ಜರಿ ಅಭ್ಯಾಸ
TV9 Web | Updated By: Vinay Bhat
Updated on:
Jul 31, 2022 | 10:52 AM
CWG 2022: ಭಾರತ ಮಹಿಳಾ ತಂಡ ಇಂದು ಮತ್ತೊಂದು ಅಗ್ನಿಪರೀಕ್ಷೆಗೆ ಸಜ್ಜಾಗುತ್ತಿದೆ. ಇಂದು ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ ಮಹಿಳಾ ತಂಡ ಮಾಡು ಇಲ್ಲವೇ ಮಡಿ ಪಂದ್ಯವನ್ನು ಆಡುತ್ತಿದೆ. ಇದಕ್ಕಾಗಿ ಮೈದಾನದಲ್ಲಿ ಭರ್ಜರಿ ಅಭ್ಯಾಸವನ್ನು ನಡೆಸುತ್ತಿದೆ.
1 / 7
ಬಹುಕಾಲದ ಬಳಿಕ ಕಾಮನ್ ವೆಲ್ತ್ ನಲ್ಲಿ ನಡೆಯುತ್ತಿರುವ ಕ್ರಿಕೆಟ್ ನಲ್ಲಿ ಭಾರತ ಇನ್ನೂ ಶುಭಾರಂಭ ಕಂಡಿಲ್ಲ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಸೋಲು ಕಂಡ ಪರಿಣಾಮ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾಗಿದೆ.
2 / 7
ಭಾರತ ಮಹಿಳಾ ತಂಡ ಇಂದು ಮತ್ತೊಂದು ಅಗ್ನಿಪರೀಕ್ಷೆಗೆ ಸಜ್ಜಾಗುತ್ತಿದೆ. ಇಂದು ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ ಮಹಿಳಾ ತಂಡ ಮಾಡು ಇಲ್ಲವೇ ಮಡಿ ಪಂದ್ಯವನ್ನು ಆಡುತ್ತಿದೆ. ಇದಕ್ಕಾಗಿ ಮೈದಾನದಲ್ಲಿ ಭರ್ಜರಿ ಅಭ್ಯಾಸವನ್ನು ನಡೆಸುತ್ತಿದೆ.
3 / 7
ಟೂರ್ನಿಯಲ್ಲಿ ಉಭಯ ತಂಡಗಳು ಈಗಾಗಲೇ ಮೊದಲ ಪಂದ್ಯದಲ್ಲಿ ಸೋತಿರುವುದರಿಂದ ಇಂದಿನ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ದುರ್ಬಲ ಬಾರ್ಬಡೋಸ್ ತಂಡದ ವಿರುದ್ಧ ಸೋತರೆ, ಭಾರತ ತಂಡ ಆಸ್ಟ್ರೇಲಿಯಾ ಎದುರು ಸುಲಭ ಜಯ ಸಾಧಿಸು ಹಂತದಲ್ಲಿತ್ತಾದರು ಸೋಲುಂಡಿತು.
4 / 7
ಭಾರತ ವನಿತೆಯರ ತಂಡ ಹಾಗೂ ಪಾಕಿಸ್ತಾನ ವನಿತೆಯರ ತಂಡಗಳ ನಡುವೆ ಇಲ್ಲಿಯವರೆಗೂ ಒಟ್ಟು 11 ಅಂತರರಾಷ್ಟ್ರೀಯ ಟಿ20 ಮುಖಾಮುಖಿ ಪಂದ್ಯಗಳು ನಡೆದಿದ್ದು, ಈ ಪೈಕಿ ಭಾರತ ವನಿತೆಯರ ತಂಡ 9 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಉಳಿದೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಗೆಲುವು ಕಂಡಿದೆ. ಈ ಮೂಲಕ ಇಭಾರತ ವನಿತೆಯರ ತಂಡ ಸ್ಪಷ್ಟ ಮೇಲುಗೈ ಸಾಧಿಸಿದೆ.
5 / 7
ಕಳೆದ ಪಂದ್ಯದಲ್ಲಿ ಭಾರತ ಉತ್ತಮ ಆರಂಭ ಪಡೆದುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಹರ್ಮನ್ಪ್ರೀತ್ ಕೌರ್ ಬಿಟ್ಟರೆ ಉಳಿದವರೆಲ್ಲ ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಇಂದುಕೂಡ ಸ್ಮೃತಿ ಮಂದಾನ ಹಾಗೂ ಶೆಫಾಲಿ ವರ್ಮಾ ತಂಡಕ್ಕೆ ಸ್ಫೋಟಕ ಆರಂಭ ನೀಡಬೇಕಿದೆ.
6 / 7
ಮೂರನೇ ಕ್ರಮಾಂಕದಲ್ಲಿ ಬರುವ ಯಸ್ತಿಕಾ ಭಾಟಿಯ ಕೂಡ ತಂಡಕ್ಕೆ ನೆರವಾಗಬೇಕಿದೆ. ಜಮಿಯಾ ರೋಡ್ರಿಗಸ್, ದೀಪ್ತಿ ಶರ್ಮಾ ಅವರಿಂದಲೂ ಕೊಡುಗೆ ಬೇಕಾಗಿದೆ. ಬೌಲರ್ಗಳ ಪೈಕಿ ರೇಣುಕಾ ಸಿಂಗ್ ಬಿಟ್ಟರೆ ಮತ್ಯಾರು ಅಪಾಯಕಾರಿಯಾಗಿ ಗೋಚರಿಸಿಲ್ಲ.
7 / 7
ಇಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ಗಳಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಲೈವ್ ಸ್ಟ್ರೀಮಿಂಗ್ ಸೋನಿ LIV ನಲ್ಲಿ ಇರುತ್ತದೆ. ಪಂದ್ಯವು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆಯಲಿದೆ.