ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಜನಪ್ರಿಯವಾಗುತ್ತಿದೆ. ಇದಕ್ಕೆ ಒಂದು ಕಾರಣ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆಯಾದರೆ, ಮತ್ತೊಂದು ಕಾರಣ ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಹೊಸ ತಲೆಮಾರು ಮುಂದಾಗಿರುವುದು. ಇದನ್ನೇ ಬಂಡವಾಳ ಮಾಡಿಕೊಂಡು ಅಮೆರಿಕದ ಇ-ಬೈಕ್ ತಯಾರಕ Optbike ಹೊಸ ಸೈಕಲ್ ಅನ್ನು ಪರಿಚಯಿಸಿದೆ. ಆದರೆ ಇದು ಎಲೆಕ್ಟ್ರಿಕ್ ಬೈಸಿಕಲ್ ಎಂಬುದೇ ಇಲ್ಲಿ ವಿಶೇಷ. ಅಂದರೆ ಸಣ್ಣ ಮಾದರಿಯ ಬೈಕ್ ಪ್ರಿಯರಿಗಾಗಿ ಅಪ್ಟಿಬೈಕ್ ಹೊಸ ಮಾದರಿಯ ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಇ-ಸೈಕಲ್ನಲ್ಲಿ ಹಲವು ವಿಶೇಷತೆಗಳನ್ನು ನೀಡಲಾಗಿದ್ದು, ಅವುಗಳನ್ನು ತಿಳಿದರೆ ನೀವು ಖಂಡಿತವಾಗಿಯೂ ಅಚ್ಚರಿಪಡುತ್ತೀರಿ...ಹಾಗಿದ್ರಿ ಅಪ್ಟಿಬೈಕ್ನ ವಿಶೇಷಗಳೇನು ನೋಡೋಣ...