Photos: ಭಾರತಕ್ಕೆ ಮರಳಿದ ಒಲಿಂಪಿಕ್ಸ್ ಪದಕ ಸಾಧಕರಿಗೆ ಸಂಸದ ತೇಜಸ್ವಿ ಸೂರ್ಯ ಹೃದಯಸ್ಪರ್ಶಿ ಸ್ವಾಗತ

| Updated By: ಪೃಥ್ವಿಶಂಕರ

Updated on: Aug 09, 2021 | 9:40 PM

ಹಲವು ರಾಜಕೀಯ ಪಕ್ಷಗಳ ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು. ಇದರಲ್ಲಿ ಕರ್ನಾಟಕದ ಯುವ ಸಂಸದ ತೇಜಸ್ವಿ ಸೂರ್ಯ ಕೂಡ ಭಾಗವಹಿಸಿದ್ದರು. ಪ್ರತಿಯೊಬ್ಬ ಸ್ಪರ್ಧಿಗಳನ್ನು ತೇಜಸ್ವಿ ಸೂರ್ಯ ಆತ್ಮೀಯವಾಗಿ ಬರ ಮಾಡಿಕೊಂಡರು.

1 / 7
ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಆಟಗಾರರನ್ನು ಸ್ವಾಗತಿಸಲು ಕ್ರೀಡಾ ಅಧಿಕಾರಿಗಳು, ವಿವಿಧ ಒಕ್ಕೂಟಗಳು, ಮಾಧ್ಯಮಗಳು ಹಾಗೂ ಹಲವು ರಾಜಕೀಯ ಪಕ್ಷಗಳ ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು. ಇದರಲ್ಲಿ ಕರ್ನಾಟಕದ ಯುವ ಸಂಸದ ತೇಜಸ್ವಿ ಸೂರ್ಯ ಕೂಡ ಭಾಗವಹಿಸಿದ್ದರು. ಪ್ರತಿಯೊಬ್ಬ ಸ್ಪರ್ಧಿಗಳನ್ನು ತೇಜಸ್ವಿ ಸೂರ್ಯ ಆತ್ಮೀಯವಾಗಿ ಬರ ಮಾಡಿಕೊಂಡರು.

2 / 7
ಇದೀಗ ಜಾವೆಲಿನ್ ವಿಭಾಗದಲ್ಲಿ ಭಾರತಕ್ಕೆ ಮೊತ್ತ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟ ಹೆಗ್ಗಳಿಕೆ ಹಾಗೂ ಭಾರತಕ್ಕಾಗಿ ಒಲಿಂಪಿಕ್ಸ್ ಇತಿಹಾಸದಲ್ಲಿ 2ನೇ ಬಾರಿ ಸ್ವರ್ಣ ಪದಕವನ್ನು ಗೆಲ್ಲಿಸಿಕೊಟ್ಟ ಕೀರ್ತಿ ನೀರಜ್ ಚೋಪ್ರಾಗೆ ಸಲ್ಲುತ್ತದೆ. ಇದಾಗ್ಯೂ ಭಾರತ ಹಾಕಿ ತಂಡವು 8 ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಅದೊಂದು ಟೀಮ್ ಪ್ರದರ್ಶನವಾಗಿರುವುದರಿಂದ ವೈಯುಕ್ತಿಕ ಪದಕ ಪಟ್ಟಿಯಲ್ಲಿ ಅದನ್ನು ಪರಿಗಣಿಸಲಾಗುವುದಿಲ್ಲ.

3 / 7
ಅಸಲಿಗೆ 27 ವರ್ಷದ ಪೂನಿಯಾ ಅವರಿಂದ ಭಾರತ ಚಿನ್ನದ ಪದಕ ನಿರೀಕ್ಷಿಸಿತ್ತು. ಆದರೆ ಒಂದು ತಿಂಗಳ ಹಿಂದೆ ಬಲತೊಡೆಗೆ ಗಾಯವಾಗಿದ್ದರೂ ಅದನ್ನು ಲೆಕ್ಕಿಸದೆ ಅವರು ಅಖಾಡಾದಲ್ಲಿ ಸೆಣಸಿದರು. ಈ ಗಾಯದ ಸಮಸ್ಯೆ ಇಲ್ಲದೆ ಹೋಗಿದ್ದರೆ ಅವರನ್ನು ಚಿನ್ನ ಗೆಲ್ಲದಂತೆ ತಡೆಯುವುದು ಯಾವ ಪೈಲ್ವಾನನಿಗೂ ಸಾಧ್ಯವಾಗುತ್ತಿರಲಿಲ್ಲ. ಶನಿವಾರದ ಬೌಟ್ನಲ್ಲಿ ಅವರು ತೊಡೆಗೆ ಪಟ್ಟಿ ಸುತ್ತಿಕೊಳ್ಳದೆ ದೌಲೆಟ್ ಅವರನ್ನು ಅನಾಯಾಸವಾಗಿ ಸೋಲಿಸಿದರು. ಒಲಂಪಿಕ್ಸ್ನಲ್ಲಿ ಇದು ಅವರ ಮೊದಲ ಪದಕವಾಗಿದೆ.

4 / 7
ರಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಬ್ರಿಟನ್ ವಿರುದ್ಧ ವೀರೋಚಿತ ಆಟವಾಡಿ ಭಾರತ ಮಹಿಳಾ ಹಾಕಿ ತಂಡ 4-3 ಗೋಲುಗಳಿಂದ ಸೋಲೊಪ್ಪಿಕೊಂಡಿದೆ. ಈ ಮೂಲಕ ಒಲಿಂಪಿಕ್ಸ್​ ಹಾಕಿಯಲ್ಲಿ ಚೊಚ್ಚಲ ಪದಲ ಗೆಲ್ಲುವ ಕನಸು ಈಡೇರಲಿಲ್ಲ. ಆದರೆ, ಸೋತರೂ ಕೋಟ್ಯಾಂತರ ಭಾರತೀಯರ ಮನ ಗೆದ್ದಿದ ರಾಣಿ ರಾಂಪಾಲ್ ಪಡೆ. ಪಂದ್ಯ ಆರಂಭವಾದ ಮೊದಲ ಕ್ವಾರ್ಟರ್​ನಲ್ಲಿ ಉಭಯ ತಂಡಗಳಿಗೆ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ, ಎರಡನೇ ಕ್ವಾರ್ಟರ್​ನ ಆರಂಭದಲ್ಲಿ ಭಾರತೀಯರು ಮಾಡಿದ ತಪ್ಪಿನಿಂದ ಬ್ರಿಟನ್ ಖಾತೆ ತೆರೆಯಿತು. ಇದರ ಬೆನ್ನಲ್ಲೆ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತಾದರೂ ಸರಿಯಾಗಿ ಉಪಯೋಗಿಸಿಕೊಂಡಿಲ್ಲ. ಇದರ ನಡುವೆ ಬ್ರಿಟನ್ ಮತ್ತೊಂದು ಗೋಲು ದಾಖಲಿಸಿ 2-0 ಮುನ್ನಡೆ ಸಾಧಿಸಿತು.

5 / 7
ಕೊನೆಯ ನಿಮಿಷದ ವರೆಗೂ ಕೆಚ್ಚೆದೆಯ ಹೋರಾಟ ನಡೆಸಿದ ಭಾರತೀಯ ಮಹಿಳೆಯರು ಸೋತರೂ ಗೆದ್ದಷ್ಟೆ ಖುಷಿ ನೀಡಿದರು. ಪಂದ್ಯ ಮುಗಿದ ಬಳಿಕ ಗೆಲ್ಲಲು ಸಾಧ್ಯವಾಗಿಲ್ಲವಲ್ಲ ಎಂಬ ಕಣ್ಣೀರು ರಾಣಿ ಪಡೆಯಲ್ಲಿ ಮನೆ ಮಾಡಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಭಾರತ ಮಹಿಳಾ ಹಾಕಿ ತಂಡದ ಹೋರಾಟ ಕಂಡು ಶಹಬ್ಬಾಶ್ ಎಂದಿದ್ದಾರೆ.

6 / 7
ಸೆಮಿ ಫೈನಲ್​ನಲ್ಲಿ ಬಲಿಷ್ಠ ಬೆಲ್ಜಿಯಂ ವಿರುದ್ದ ಕಠಿಣ ಪೈಪೋಟಿ (5-2) ನಡೆಸಿದರೂ, ಗೆಲುವು ದಕ್ಕಲಿಲ್ಲ. ಹೀಗಾಗಿ ಕಂಚಿನ ಪದಕದ ಬೇಟೆಗಿಳಿದ ಭಾರತ ತಂಡ ಆಕ್ರಮಣಕಾರಿ ತಂಡವಾದ ಜರ್ಮನಿಗೆ ಅವರದ್ದೇ ರೀತಿಯಲ್ಲಿ ಪ್ರತ್ಯುತ್ತರ ನೀಡಿತು. ಪರಿಣಾಮ 5-4 ಅಂತರದಿಂದ ಗೆಲ್ಲುವ ಮೂಲಕ ಭಾರತ 4 ದಶಕಗಳ ಬಳಿಕ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.

7 / 7
ಇಂತಹದೊಂದು ಗೆಲುವು ಭಾರತದ ಹಾಕಿ ಪಾಲಿಗೆ ಅನಿವಾರ್ಯವಾಗಿತ್ತು. ಆ ಗೆಲುವು ಇದೀಗ ದಕ್ಕಿದೆ. ಇಡೀ ಭಾರತದಲ್ಲಿ ಹಾಕಿ ಬಗ್ಗೆ ಚರ್ಚೆಗಳು ಶುರುವಾಗಿದೆ. ಹಾಕಿ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಒಂದು ಭರ್ಜರಿ ಗೆಲುವಿನ ಮೂಲಕ ಹಾಕಿ ಕೂಡ ದೇಶದಲ್ಲಿ ಕ್ರೇಜ್ ಹುಟ್ಟುಹಾಕಿದೆ. ಹೀಗಾಗಿಯೇ ಈ ಗೆಲುವಿನೊಂದಿಗೆ ಭಾರತದ ಹಾಕಿಯ ಹೊಸ ಯುಗ ಆರಂಭ ಎಂದು ವಿಶ್ಲೇಷಿಸಲಾಗುತ್ತಿದೆ.