Updated on: Jun 21, 2022 | 7:30 AM
ಇಂದು (ಜೂನ್ 21) ‘ಅಂತಾರಾಷ್ಟ್ರೀಯ ಯೋಗ ದಿನ’ ಆಚರಿಸಲಾಗುತ್ತಿದೆ. ವಿಶ್ವಾದ್ಯಂತ ಯೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗುತ್ತಿದೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳಿಗೆ ಯೋಗದಲ್ಲಿ ಆಸಕ್ತಿ ಇದೆ. ಆ ಪೈಕಿ ರಾಧಿಕಾ ನಾರಾಯಣ್ ಕೂಡ ಪ್ರಮುಖರು.
ಖ್ಯಾತ ನಟಿ ರಾಧಿಕಾ ನಾರಾಯಣ್ ಅವರು ಯೋಗದಲ್ಲಿ ಪರಿಣಿತ ಹೊಂದಿದ್ದಾರೆ. ಅನೇಕ ವರ್ಷಗಳಿಂದ ಅವರು ಯೋಗಾಭ್ಯಾಸ ಮಾಡುತ್ತಾ ಬಂದಿದ್ದಾರೆ. ಫಿಟ್ನೆಸ್ ಕಾಪಾಡಿಕೊಳ್ಳಲು ಅವರಿಗೆ ಇದು ಸಹಕಾರಿ ಆಗಿದೆ.
ಯೋಗದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ರಾಧಿಕಾ ನಾರಾಯಣ್ ಅವರು ಇತರರಿಗೂ ಹೇಳಿಕೊಟ್ಟಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಅನೇಕ ಆಸನಗಳ ಬಗ್ಗೆ ಅವರು ಮಾಹಿತಿ ಹಂಚಿಕೊಳ್ಳುತ್ತಾರೆ. ಇದರಿಂದ ಅನೇಕರಿಗೆ ಸಹಾಯ ಆಗಿದೆ.
ಯೋಗದ ವಿಚಾರದಲ್ಲಿ ಅಭಿಮಾನಿಗಳಿಗೆ ರಾಧಿಕಾ ನಾರಾಯಣ್ ಮಾದರಿ ಆಗಿದ್ದಾರೆ. ಸಿನಿಮಾ ಕೆಲಸಗಳ ನಡುವೆ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಅವರು ಯೋಗಾಭ್ಯಾಸವನ್ನು ತಪ್ಪಿಸುವುದಿಲ್ಲ. ಈ ಶಿಸ್ತನ್ನು ಅವರು ಪಾಲಿಸಿಕೊಂಡು ಬಂದಿದ್ದಾರೆ.
ಯೋಗಾಭ್ಯಾಸದಿಂದ ದೇಹದ ಆರೋಗ್ಯ ವೃದ್ಧಿಸುತ್ತದೆ. ಅಷ್ಟೇ ಅಲ್ಲ, ಮನಸ್ಸಿಗೆ ಹಿತ ಎನಿಸುತ್ತದೆ. ಹೀಗೆ ಯೋಗದ ಉಪಯೋಗ ಹಲವು. ಆ ಬಗ್ಗೆ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಅರಿವು ಮೂಡಿಸಲಾಗುತ್ತಿದೆ.