International Yoga Day: ಈಶಾ ಫೌಂಡೇಶನ್​ನಿಂದ 10,000 ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿಗೆ ಉಚಿತ ಯೋಗ ತರಬೇತಿ

Updated on: Jun 21, 2025 | 4:49 PM

ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ, ಈಶಾ ಫೌಂಡೇಶನ್ ದೇಶಾದ್ಯಂತ 2,500 ಕ್ಕೂ ಹೆಚ್ಚು ಯೋಗ ಸೆಷನ್‌ಗಳನ್ನು ಆಯೋಜಿಸಿತು. 10,000 ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 11,000 ಯೋಗ ಶಿಕ್ಷಕರು ತರಬೇತಿ ಪಡೆದು ಈ ಯಶಸ್ವಿ ಕಾರ್ಯಕ್ರಮಕ್ಕೆ ನೆರವಾಗಿದ್ದರು. ಮಾನಸಿಕ ಯೋಗಕ್ಷೇಮದ ಪ್ರಾಮುಖ್ಯತೆಯನ್ನು ಒತ್ತಿಹೇಳಲು 2,000 ಕ್ಕೂ ಹೆಚ್ಚು ಯುವ ರಾಯಭಾರಿಗಳು ಕಾರ್ಯನಿರ್ವಹಿಸಿದರು.

1 / 8
ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಈಶಾ ಫೌಂಡೇಶನ್​ವತಿಯಿಂದ ದೇಶಾದ್ಯಂತ ಯೋಗ ಸೆಷನ್​ಗಳನ್ನು ಆಯೋಜಿಸಿದ್ದು, 10,000 ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿಗೆ ಉಚಿತವಾಗಿ ಯೋಗ ಹೇಳಿಕೊಡಲಾಯಿತು. ಒಟ್ಟಾರೆಯಾಗಿ, ದೇಶಾದ್ಯಂತ 2,500 ಕ್ಕೂ ಹೆಚ್ಚು ಯೋಗ ಸೆಷನ್​ಗಳನ್ನು ಆಯೋಜಿಸಲಾಗಿತ್ತು. ಈ ಯೋಗ ಸೆಷನ್​ನಲ್ಲಿ ರಕ್ಷಣಾ ಇಲಾಖೆಯ ಅಧಿಕಾರಿಗಳು, ಉದ್ಯೋಗಸ್ಥರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು.

2 / 8
ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಈಶಾ ಫೌಂಡೇಶನ್​ವತಿಯಿಂದ ದೇಶಾದ್ಯಂತ ಯೋಗ ಸೆಷನ್​ಗಳನ್ನು ಆಯೋಜಿಸಿದ್ದು, 10,000 ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿಗೆ ಉಚಿತವಾಗಿ ಯೋಗ ಹೇಳಿಕೊಡಲಾಯಿತು. ಒಟ್ಟಾರೆಯಾಗಿ, ದೇಶಾದ್ಯಂತ 2,500 ಕ್ಕೂ ಹೆಚ್ಚು ಯೋಗ ಸೆಷನ್​ಗಳನ್ನು ಆಯೋಜಿಸಲಾಗಿತ್ತು. ಈ ಯೋಗ ಸೆಷನ್​ನಲ್ಲಿ ರಕ್ಷಣಾ ಇಲಾಖೆಯ ಅಧಿಕಾರಿಗಳು, ಉದ್ಯೋಗಸ್ಥರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು.  ಈ ದೊಡ್ಡ ಪ್ರಮಾಣದ ಉಪಕ್ರಮವು 11,000 ಕ್ಕೂ ಹೆಚ್ಚು ಯೋಗ ವೀರರು (ಯೋಗ ಶಿಕ್ಷಕರು) ತರಬೇತಿಯ ಮೂಲಕ ಸಾಧ್ಯವಾಯಿತು. ಯೋಗ ಶಿಕ್ಷಕರು ರಕ್ಷಣಾ ಇಲಾಖೆ, ಶಾಲೆ, ಕಾಲೇಜು, ಕಚೇರಿಯ ಆವರಣ, ಜಿಮ್‌ ಮತ್ತು ಜೈಲುಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಸೆಷನ್​ ನಡೆಸಿಕೊಟ್ಟರು.  ಹೆಚ್ಚುವರಿಯಾಗಿ, 2,000 ಕ್ಕೂ ಹೆಚ್ಚು ಯುವ ರಾಯಭಾರಿಗಳು ಮಾನಸಿಕ ಯೋಗಕ್ಷೇಮದ ಮಹತ್ವವನ್ನು ಪ್ರಚಾರ ಮಾಡಿದರು. ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ಸದ್ಗುರು ವಿನ್ಯಾಸಗೊಳಿಸಿದ ಸರಳ ಮತ್ತು ಶಕ್ತಿಯುತ 7 ನಿಮಿಷಗಳ ಮಾರ್ಗದರ್ಶಿ ಧ್ಯಾನವಾದ ಮಿರಾಕಲ್ ಆಫ್ ಮೈಂಡ್ ಅನ್ನು ಪರಿಚಯಿಸಿದರು.

3 / 8
ಬೆಂಗಳೂರಿನ ಸದ್ಗುರು ಸನ್ನಿಧಿಯಲ್ಲಿ ನಡೆದ ದೊಡ್ಡ ಪ್ರಮಾಣದ ಕಾರ್ಯಕ್ರಮದಲ್ಲಿ ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಯ 5,000 ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಭಾಗವಹಿಸಿದ್ದರು. ಹತ್ತಿರದ ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ 1,000 ಕ್ಕೂ ಹೆಚ್ಚು ನಾಗರಿಕರು ಕೂಡ ಭಾಗಿಯಾಗಿದ್ದರು.

4 / 8
ಈಶಾ ಫೌಂಡೇಶನ್ ವತಿಯಿಂದ ದೇಶದ ವಿವಿಧ ರಾಜ್ಯಗಳಲ್ಲಿ ಯೋಗ ಸೆಷನ್​ಗಳನ್ನು ಆಯೋಜಿಸಲಾಗಿತ್ತು. ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಆಯೋಜಿಸಲಾಗಿದ್ದ ಯೋಗ ಸೆಷನ್​ನಲ್ಲಿ 1,500 ರಕ್ಷಣಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಜೋಧ್‌ಪುರ ವಾಯುನೆಲೆಯಲ್ಲಿ ನಡೆದ ಸೆಷನ್​ನಲ್ಲಿ ವಾಯುಪಡೆಯ 900 ಅಧಿಕಾರಿಗಳು ಭಾಗವಹಿಸಿದ್ದರು. ಅದೇ ರೀತಿ, ಪುಣೆಯಲ್ಲಿ ನಡೆದ ಸೆಷನ್​ನಲ್ಲಿ ಸುಮಾರು 500 ಮಂದಿ ಸೇನಾ ಇಲಾಖೆ ಅಧಿಕಾರಿಗಳು ಮತ್ತು ಜೈಪುರದ ಜೈಗಢ ಕೋಟೆಯಲ್ಲಿ ನಡೆದ ಸೆಷನ್​ನಲ್ಲಿ 400 ಜನರು ಭಾಗವಹಿಸಿದ್ದರು.

5 / 8
ಕೊಯಮತ್ತೂರಿನ ಆದಿಯೋಗಿಯಲ್ಲಿ, ಭಾರತೀಯ ವಾಯುಪಡೆ (ರೆಡ್‌ಫೀಲ್ಡ್ಸ್ ಮತ್ತು ಸುಲೂರ್ ವಿಂಗ್ 43), ಸೇನೆಯ 35 ನೇ ರೆಜಿಮೆಂಟ್ (ಮದುಕ್ಕರೈ) ಮತ್ತು ಕ್ಷಿಪ್ರ ಕಾರ್ಯಪಡೆ (ವೆಲ್ಲಲೂರ್) ಯ 200 ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ದರು.

6 / 8
ಐಐಟಿ ಚೆನ್ನೈನಂತಹ ಪ್ರತಿಷ್ಠಿತ ಸಂಸ್ಥೆಗಳು ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್, ಐಬಿಎಂ, ಗೋದ್ರೇಜ್, ಎಚ್‌ಡಿಎಫ್‌ಸಿ ಲೈಫ್ ಇನ್ಶುರೆನ್ಸ್, ಎಲ್ & ಟಿ, ಮತ್ತು ಯೆಸ್ ಬ್ಯಾಂಕ್ ಸೇರಿದಂತೆ ಪ್ರಮುಖ ಕಾರ್ಪೊರೇಟ್ ಕಚೇರಿಗಳಲ್ಲಿ ಸೆಷನ್​ ನಡೆಸಲಾಯಿತು.

7 / 8
ಸದ್ಗುರುಗಳ ಮಾರ್ಗದರ್ಶನದಲ್ಲಿ, ಈಶಾ ಫೌಂಡೇಶನ್ 30 ವರ್ಷಗಳಿಗೂ ಹೆಚ್ಚು ಕಾಲ ಯೋಗದ ಪ್ರಾಚೀನ ವಿಜ್ಞಾನವನ್ನು ಅದರ ಶುದ್ಧ ರೂಪದಲ್ಲಿ ನೀಡುತ್ತಿದೆ. ಪ್ರಪಂಚದಾದ್ಯಂತ 400 ಕೇಂದ್ರಗಳಲ್ಲಿ 17 ಮಿಲಿಯನ್ ಸ್ವಯಂಸೇವಕರ ಸಹಾಯದಿಂದ, ಪ್ರತಿಷ್ಠಾನದ ಉಪಕ್ರಮಗಳು ಮಾನವ ಯೋಗಕ್ಷೇಮದ ಪ್ರತಿಯೊಂದು ಆಯಾಮವನ್ನು ತಿಳಿಸುತ್ತವೆ.

8 / 8
ಈಶಾ ಫೌಂಡೇಶನ್ 11,000 ಕ್ಕೂ ಹೆಚ್ಚು ಭಾರತೀಯ ಸೇನಾ ಸೈನಿಕರಿಗೆ ಹಠ ಯೋಗದ ತರಬೇತಿ ನೀಡಿದೆ. ಹೆಚ್ಚುವರಿಯಾಗಿ, 500 ಕ್ಕೂ ಹೆಚ್ಚು ಸೇನಾ ಸಿಬ್ಬಂದಿಗಳು ತಮ್ಮದೇ ಆದ ಘಟಕಗಳಲ್ಲಿ ಯೋಗ ತರಬೇತಿ ನೀಡಲು ಸಜ್ಜಾಗಿದ್ದಾರೆ.

Published On - 4:46 pm, Sat, 21 June 25