AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಮೊದಲ ಓವರ್​ನಲ್ಲೇ ಅತಿ ಹೆಚ್ಚು ವಿಕೆಟ್ ಕಿತ್ತ ಡೇಂಜರಸ್ ಬೌಲರ್​ಗಳು ಯಾರು ಗೊತ್ತೇ?

ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಕೂಡ ಅನೇಕ ಬೌಲರ್ಗಳು ಬೆಳಕಿಗೆ ಬಂದಿದ್ದಾರೆ. ಅದರಲ್ಲೂ ಮೊದಲ ಓವರ್ ನಲ್ಲಿ ವಿಕೆಟ್ ಗಳನ್ನು ಕೀಳುವ ಬೌಲರ್ ಗಳು ಹೆಚ್ಚು ಅಪಾಯಕಾರಿಯಾಗಿದ್ದಾರೆ. ಸದ್ಯ ಐಪಿಎಲ್ ನ ಮೊದಲ ಓವರ್ ನಲ್ಲೇ ಅತಿ ಹೆಚ್ಚು ವಿಕೆಟ್ ಕಿತ್ತ ಬೌಲರ್ ಗಳು ಯಾರು ಎಂಬುದನ್ನು ನೋಡೋಣ.

Vinay Bhat
|

Updated on:Mar 26, 2022 | 3:08 PM

Share
ಟಿ20 ಕ್ರಿಕೆಟ್ ಎಂದರೆ ಅದು ಬ್ಯಾಟರ್ ಗಳ ಆಟವೆಂಬ ಮಾತಿದೆ. ಆದರೆ ಇದರಲ್ಲಿ ಬೌಲರ್ಗಳು ಕೂಡ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಡೆತ್ ಓವರ್ನಲ್ಲಿ ಬೌಲಿಂಗ್ ಮಾಡುವವರಿಗಂತು ಭರ್ಜರಿ ಬೇಡಿಕೆ ಇದೆ. ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಕೂಡ ಅನೇಕ ಬೌಲರ್ಗಳು ಬೆಳಕಿಗೆ ಬಂದಿದ್ದಾರೆ. ಅದರಲ್ಲೂ ಮೊದಲ ಓವರ್ ನಲ್ಲಿ ವಿಕೆಟ್ ಗಳನ್ನು ಕೀಳುವ ಬೌಲರ್ ಗಳು ಹೆಚ್ಚು ಅಪಾಯಕಾರಿಯಾಗಿದ್ದಾರೆ. ಸದ್ಯ ಐಪಿಎಲ್ ನ ಮೊದಲ ಓವರ್ ನಲ್ಲೇ ಅತಿ  ಹೆಚ್ಚು ವಿಕೆಟ್ ಕಿತ್ತ ಬೌಲರ್ ಗಳು ಯಾರು ಎಂಬುದನ್ನು ನೋಡೋಣ.

1 / 4
ಈ ಸಾಲಿನಲ್ಲಿ ಭುವನೇಶ್ವರ್ ಕುಮಾರ್ ಮುಂಚೂಣಿಯಲ್ಲಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ನ ಈ ಅನುಭವಿ ವೇಗಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಇನಿಂಗ್ಸ್ನ ಮೊದಲ ಓವರ್ ನಲ್ಲಿ 19 ವಿಕೆಟ್ ಗಳನ್ನು ಪಡೆದಿದ್ದಾರೆ. ಐಪಿಎಲ್ ನ 132 ಪಂದ್ಯಗಳಲ್ಲಿ 142 ವಿಕೆಟ್ ಗಳನ್ನು ಕಿತ್ತಿದ್ದಾರೆ.

2 / 4
IPL 2022: ಮೊದಲ ಓವರ್​ನಲ್ಲೇ ಅತಿ ಹೆಚ್ಚು ವಿಕೆಟ್ ಕಿತ್ತ ಡೇಂಜರಸ್ ಬೌಲರ್​ಗಳು ಯಾರು ಗೊತ್ತೇ?

ಎರಡನೇ ಸ್ಥಾನದಲ್ಲಿ ಸಂದೀಪ್ ಶರ್ಮಾ ಇದ್ದಾರೆ. ಸಂದೀಪ್ ಭಾರತ ತಂಡದಲ್ಲಿ ಸ್ಥಾನ ಪಡೆಯದೇ ಇರಬಹುದು, ಆದರೆ ಅವರು ಐಪಿಎಲ್ ನಲ್ಲಿ ಮಿಂಚಿದ್ದಾರೆ. ಸದ್ಯ ಪಂಜಾಬ್ ಕಿಂಗ್ಸ್ ನಲ್ಲಿರುವ ಈ ಮಧ್ಯಮ ವೇಗಿ, ಇನಿಂಗ್ಸ್ ನ ಮೊದಲ ಓವರ್ ನಲ್ಲಿ 13 ಬಾರಿ ವಿಕೆಟ್ ಪಡೆದಿದ್ದಾರೆ. ಸಂದೀಪ್ ಒಟ್ಟು 99 ಐಪಿಎಲ್ ಪಂದ್ಯಗಳಲ್ಲಿ 112 ವಿಕೆಟ್ ಪಡೆದಿದ್ದಾರೆ.

3 / 4
IPL 2022: ಮೊದಲ ಓವರ್​ನಲ್ಲೇ ಅತಿ ಹೆಚ್ಚು ವಿಕೆಟ್ ಕಿತ್ತ ಡೇಂಜರಸ್ ಬೌಲರ್​ಗಳು ಯಾರು ಗೊತ್ತೇ?

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರ ಆಡಿದ ಎಡಗೈ ಸ್ಟಾರ್ ವೇಗಿ ನ್ಯೂಜಿಲೆಂಡ್ ನ ದಂತಕಥೆ ವೇಗಿ ಟ್ರೆಂಟ್ ಬೌಲ್ಟ್, ಮೊದಲ ಓವರ್ ನಲ್ಲಿ 10 ವಿಕೆಟ್ ಪಡೆದಿದ್ದಾರೆ. ಇದರ ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ದೀಪಕ್ ಚಹಾರ್ ಕೂಡ ಮೊದಲ ಓವರ್ನಲ್ಲಿ 10 ವಿಕೆಟ್ಗಳನ್ನು ಕಬಳಿಸಿದ್ದಾರೆ.

4 / 4

Published On - 9:29 am, Sat, 26 March 22