
ವೈಷ್ಣವಿ ಗೌಡ ಅವರು ಇತ್ತೀಚೆಗೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಭಾರತೀಯ ವಾಯುಸೇನೆಯಲ್ಲಿ ಇರುವ ಅನುಕೂಲ್ ಮಿಶ್ರಾ ಜೊತೆ ವೈಷ್ಣವಿ ಗೌಡ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇವ ನಿಶ್ಚಿತಾರ್ಥದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹಾಗಿದ್ರೆ ವೈಷ್ಣವಿ ಗೌಡ ಅವರದ್ದು ಅರೆಂಜ್ ಮ್ಯಾರೇಜೋ ಅಥವಾ ಲವ್ ಮ್ಯಾರೇಜೋ? ಈ ಪ್ರಶ್ನೆಗೆ ವೈಷ್ಣವಿ ಗೌಡ ಕಡೆಯಿಂದಲೇ ಉತ್ತರ ಸಿಕ್ಕಿದೆ. ಅವರು ಒಂದು ದೊಡ್ಡ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.

ವೈಷ್ಣವಿ ಗೌಡ ಹೇಳುವ ಪ್ರಕಾರ ಅವರದ್ದು ಪಕ್ಕಾ ಅರೇಂಜ್ ಮ್ಯಾರೇಜ್. ಮನೆಯವರು ಮೊದಲು ಮಾತನಾಡಿ, ಜಾತಕ ನೋಡಿ ಓಕೆ ಆದ ಬಳಿಕ ವೈಷ್ಣವಿ ಗೌಡ ಹಾಗೂ ಅನುಕೂಲ್ ಅವರ ಭೇಟಿ ಆಯಿತು ಅನ್ನೋದು ವಿಶೇಷ.

ಅನುಕೂಲ್ ಅವರು ಉತ್ತರ ಭಾರತದವರು. ಉತ್ತರ ಭಾರತ ಹಾಗೂ ದಕ್ಷಿಣ ಭಾರತದವರ ಮಧ್ಯೆ ಹೊಂದಾಣಿಕೆ ಆಗುತ್ತದೆಯೇ ಎನ್ನುವ ಪ್ರಶ್ನೆ ಮೂಡೋದು ಸಹಜ. ಆದರೆ, ಈ ರೀತಿ ವೈಷ್ಣವಿ ಎಂದಿಗೂ ಭಾವಿಸಲೇ ಇಲ್ಲ. ಈ ಕಾರಣಕ್ಕೆ ಇವರ ಮಧ್ಯೆ ನಿಶ್ಚಿತಾರ್ಥ ಆಯಿತು.

ವೈಷ್ಣವಿ ಗೌಡ ಅವರು ‘ಸೀತಾ ರಾಮ’ ಧಾರಾವಾಹಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಧಾರಾವಾಹಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದಿದೆ. ವಿವಾಹದ ಬಳಿಕವೂ ವೈಷ್ಣವಿ ಗೌಡ ಅವರು ಧಾರಾವಾಹಿಯಲ್ಲಿ ನಟಿಸೋದನ್ನು ಮುಂದುವರಿಸಲಿದ್ದಾರೆ.