- Kannada News Photo gallery ISSF World Championship Amanpreet Singh wins gold in men’s 25m standard pistol
Shooting World C’ships: ಚಿನ್ನ ಗೆದ್ದ ಅಮನ್‌ಪ್ರೀತ್ ಸಿಂಗ್! ಕಂಚಿಗೆ ಮುತ್ತಿಟ್ಟ ವನಿತಾ ತಂಡ
Updated on: Aug 24, 2023 | 11:48 AM

ಅಜೆರ್‌ಬೈಜಾನ್‌ನ ಬಾಕುನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಶಿಪ್‌ನ ಶೂಟಿಂಗ್ ವಿಭಾಗದಲ್ಲಿ ಭಾರತದ ಅಮನ್‌ಪ್ರೀತ್ ಸಿಂಗ್, ಪುರುಷರ 25 ಮೀಟರ್ ಸ್ಟ್ಯಾಂಡರ್ಡ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.

ಪುರುಷರ ಸ್ಟ್ಯಾಂಡರ್ಡ್ ಪಿಸ್ತೂಲ್ ಸ್ಪರ್ಧೆಯಲ್ಲಿ 577 ಅಂಕಗಳೊಂದಿಗೆ ಅಮನ್‌ಪ್ರೀತ್ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾದರೆ, ಕೊರಿಯಾದ ಲೀ ಗುನ್‌ಹ್ಯೊಕ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ಹಾಗೆಯೇ ಫ್ರಾನ್ಸ್‌ನ ಕೆವಿನ್ ಚಾಪೋನ್ ಲೀ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಅಮನ್‌ಪ್ರೀತ್ ಹೊರತಾಗಿ ಭಾರತದ ಪರ ಸ್ಪರ್ಧಿಸಿದ್ದ ಹರ್ಷ್ ಗುಪ್ತಾ 573 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರೆ, ಅಕ್ಷಯ್ ಜೈನ್ 545 ಅಂಕ ಕಲೆಹಾಕುವುದರೊಂದಿಗೆ ಇನ್ನೊಂದು ಪದಕ ಗೆಲ್ಲುವುದರಿಂದ ಸ್ವಲ್ಪದರಲ್ಲೇ ವಂಚಿತರಾದರು.

ಮಹಿಳೆಯರ ವೈಯಕ್ತಿಕ 25 ಮೀ ಸ್ಟ್ಯಾಂಡರ್ಡ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ತಿಯಾನಾ 538 ಅಂಕಗಳೊಂದಿಗೆ 11 ನೇ ಸ್ಥಾನ, ಯಶಿತಾ ಶೋಕೀನ್ 536 ಅಂಕಗಳೊಂದಿಗೆ 12 ನೇ ಸ್ಥಾನ, ಕೃತಿಕಾ ಶರ್ಮಾ 527 ಅಂಕಗಳೊಂದಿಗೆ 14 ನೇ ಸ್ಥಾನ ಪಡೆದರು. ಆದರೆ ಯಾರೂ ಪ್ರತ್ಯೇಕವಾಗಿ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ.

ಆದಾಗ್ಯೂ, ಈ ಮೂವರನ್ನೊಳಗೊಂಡ ತಂಡವು 1601 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ಮುತ್ತಿಕ್ಕಿತು.

ಅಮನ್‌ಪ್ರೀತ್ ಚಿನ್ನ ಗೆಲ್ಲುವುದರೊಂದಿಗೆ ಭಾರತದ ಖಾತೆಗೆ ಒಟ್ಟು ಐದು ಚಿನ್ನದ ಪದಕಗಳು ಸೇರಿದಂತ್ತಾಗಿದೆ. ಇದರೊಂದಿಗೆ ನಾಲ್ಕು ಕಂಚಿನ ಪದಕಗಳನ್ನು ಹೆದ್ದಿರುವ ಭಾರತ ಪದಕಗಳ ಪಟ್ಟಿಯಲ್ಲಿ ಚೀನಾ ನಂತರ ಎರಡನೇ ಸ್ಥಾನದಲ್ಲಿದೆ.

ಇನ್ನು 13 ಚಿನ್ನ ಸೇರಿದಂತೆ ಒಟ್ಟು 24 ಪದಕಗಳನ್ನು ಗೆದ್ದಿರುವ ಚೀನಾ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
























