ನಟಿ ನಭಾ ನಟೇಶ್ ಅವರು ಹೊಸ ಸಿನಿಮಾ ಒಪ್ಪಿಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಆದರೆ, ಅವರ ಕಡೆಯಿಂದ ಯಾವುದೇ ಹೊಸ ಸಿನಿಮಾ ಘೋಷಣೆ ಆಗುತ್ತಿಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ. ಅವರು ಅಭಿಮಾನಿಗಳ ಬೇಸರ ದೂರ ಮಾಡುವ ಕೆಲಸ ಮಾಡುತ್ತಿದ್ದಾರೆ.
ನಭಾ ನಟೇಶ್ ನಟನೆಯಿಂದ ದೂರ ಇದ್ದರೂ ಅಭಿಮಾನಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರು ಹೊಸ ಹೊಸ ಫೋಟೋಗಳನ್ನು ಫ್ಯಾನ್ಸ್ಗೋಸ್ಕರ ಹಂಚಿಕೊಳ್ಳುತ್ತಾ ಇರುತ್ತಾರೆ.
ಈಗ ನಭಾ ಅವರು ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅವರು ಸಖತ್ ಬೋಲ್ಡ್ ಆಗಿ ಮಿಂಚಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಈ ಚಿತ್ರಕ್ಕೆ ಭರ್ಜರಿ ಲೈಕ್ಸ್ ಒತ್ತುತ್ತಿದ್ದಾರೆ. ಅವರ ಬೋಲ್ಡ್ನೆಸ್ ಕಂಡು ಫಿದಾ ಆಗಿದ್ದಾರೆ.
ನಭಾ ಅವರು ಡೆನಿಮ್ ಬಟ್ಟೆ ಧರಿಸಿದ್ದಾರೆ. ಅವರ ನೋಟ ಕಿಲ್ಲಿಂಗ್ ಆಗಿದೆ. 8-10 ಫೋಟೋಗಳನ್ನು ಅವರು ಹಂಚಿಕೊಂಡಿದ್ದು, ಎಲ್ಲದರಲ್ಲೂ ಅವರು ಭಿನ್ನ ಅವತಾರ ತಾಳಿದ್ದಾರೆ. ಇದಕ್ಕೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
‘ನೀವು ಸಖತ್ ಹಾಟ್’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ಹೊಸ ಸಿನಿಮಾ ಒಪ್ಪಿಕೊಳ್ಳಿ ಪ್ಲೀಸ್’ ಎಂದು ಕೋರಿದ್ದಾರೆ. ಈ ಫೋಟೋಗೆ ಸದ್ಯ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.
ನಭಾ ನಟೇಶ್ ಕನ್ನಡದವರು. 2015ರ ‘ವಜ್ರಕಾಯ’ ಚಿತ್ರದಲ್ಲಿ ಶಿವಣ್ಣ ಜೊತೆ ತೆರೆಹಂಚಿಕೊಂಡರು. ಇದು ಅವರ ಮೊದಲ ಸಿನಿಮಾ. ಈ ಚಿತ್ರದಲ್ಲಿ ಅವರು ಸಖತ್ ಮಿಂಚಿದರು. 2019ರಲ್ಲಿ ತೆರೆಗೆ ಬಂದ ತೆಲುಗಿನ ‘ಇಸ್ಮಾರ್ಟ್ ಶಂಕರ್’ ಅವರ ವೃತ್ತಿ ಜೀವನದ ದಿಕ್ಕನ್ನು ಬದಲಿಸಿತು.
ನಭಾ ನಟೇಶ್ 2022ರಲ್ಲಿ ರಸ್ತೆ ಅಪಘಾತಕ್ಕೆ ಒಳಗಾದರು. ಈ ವೇಳೆ ಎಡಗೈ ಹಾಗೂ ಎಡ ಭುಜಕ್ಕೆ ಪೆಟ್ಟಾಗಿತ್ತು. ಹಲವು ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಅವರಿಗೆ ಎದುರಾಯಿತು. ಸದ್ಯಕ್ಕೆ ಅವರು ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.
Published On - 9:25 am, Thu, 24 August 23