ನಟಿ ಜಾಕ್ವೆಲಿನ್ ಫರ್ನಾಂಡೀಸ್ರ ಮಾಜಿ ಪ್ರಿಯಕರ ಸುಕೇಶ್ ಚಂದ್ರಶೇಖರ್, ಜೈಲಿನಿಂದಲೇ ನಟಿಗೆ ಬೆದರಿಕೆ ಹಾಕಿದ್ದಾನೆ.
ಇತ್ತೀಚೆಗಷ್ಟೆ ಸುಖೇಶ್ ವಿರುದ್ಧ ಪ್ರಕರಣವೊಂದನ್ನು ನಟಿ ಜಾಕ್ವೆಲಿನ್ ಫರ್ನಾಂಡೀಸ್ ದಾಖಲಿಸಿದ್ದರು.
ಇದರಿಂದ ಸಿಟ್ಟಾಗಿರುವ ಸುಖೇಶ್, ‘ನಿನ್ನ ಬಣ್ಣ ಬಯಲು ಮಾಡುತ್ತೀನಿ’ ಎಂದು ಪತ್ರದಲ್ಲಿ ಬರೆದಿದ್ದಾನೆ.
ಆದರೆ ಇದಕ್ಕೆಲ್ಲ ಹೆದರಿಲ್ಲ ಜಾಕ್ವೆಲಿನ್, ದುಬೈನಲ್ಲಿ ಆರಾಮವಾಗಿ ಖಾಸಗಿ ಕಾರ್ಯಕ್ರಮದಲ್ಲಿ ಹಾಡಿ-ಕುಣಿದಿದ್ದಾರೆ.
ತಮ್ಮ ಗ್ಲಾಮರಸ್ ಚಿತ್ರಗಳನ್ನು ಸಹ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಂಚಕ ಸುಖೇಶ್ ಚಂದ್ರಶೇಖರ್ ಪ್ರಕರಣದಲ್ಲಿ ಜಾಕ್ವೆಲಿನ್ ಸಹ ಆರೋಪಿಯಾಗಿದ್ದಾರೆ. ಸುಖೇಶ್ ಜೊತೆಗೆ ಜಾಕ್ವೆಲಿನ್ ಬಹಳ ಆತ್ಮೀಯವಾಗಿದ್ದರು.
ಸುಖೇಶ್ರ ವಂಚಕ ಕೃತ್ಯಗಳ ಬಗ್ಗೆ ತಮಗೆ ಮಾಹಿತಿ ಇರಲಿಲ್ಲವೆಂದು ಜಾಕ್ವೆಲಿನ್ ನ್ಯಾಯಾಲಯಕ್ಕೆ ಹೇಳಿದ್ದಾರೆ. ಪ್ರಕರಣದ ತನಿಖೆ, ವಿಚಾರಣೆ ಚಾಲ್ತಿಯಲ್ಲಿದೆ.