Updated on: Jun 28, 2023 | 11:26 PM
ನಟಿ ಜಾನ್ಹವಿ ಕಪೂರ್ ಬೆಳ್ಳಂಬೆಳಿಗ್ಗೆ ಹಸಿರಿನ ಹಿನ್ನೆಲೆಯಲ್ಲಿ ಫೋಟೊಶೂಟ್ ಮಾಡಿಸಿದ್ದಾರೆ.
ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಿರುವ ಜಾನ್ಹವಿ ಬಿಡುವು ಮಾಡಿಕೊಂಡು ಗೆಳೆಯರೊಟ್ಟಿಗೆ ಹಸಿರು ವನಗಳಲ್ಲಿ ಸುತ್ತಾಡಿದ್ದಾರೆ.
ಉಲಜ್ ಹೆಸರಿನ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಜಾನ್ಹವಿ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಈ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ.
ಹಸಿರು ಎಲ್ಲಿ ಕಾಣುತ್ತದೆಯೋ ಅತ್ತ ಕಡೆ ನಾನು ತಾನೇ ತಾನಾಗಿ ಹೊರಟು ನಿಲ್ಲುತ್ತೇನೆ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಜಾನ್ಹವಿ ಕಪೂರ್, ಖ್ಯಾತ ನಟಿ ಶ್ರೀದೇವಿ ಹಾಗೂ ಬೋನಿ ಕಪೂರ್ ಪುತ್ರಿ.
ಬಾಲಿವುಡ್ ಯುವ ಸ್ಟಾರ್ ನಟಿ ಜಾನ್ಹವಿ ಕಪೂರ್ ಇದೀಗ ಟಾಲಿವುಡ್ಗೂ ಕಾಲಿಟ್ಟಿದ್ದು ಜೂ ಎನ್ಟಿಆರ್ ನಟನೆಯ ದೇವೆರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಟಾಲಿವುಡ್ನಲ್ಲಿ ಮತ್ತೊಂದು ಸಿನಿಮಾ ಅವಕಾಶವನ್ನು ಬಾಚಿಕೊಂಡಿದ್ದು ಅಖಿಲ್ ನಟನೆಯ ಮುಂದಿನ ಸಿನಿಮಾಕ್ಕೆ ಅವರೇ ನಾಯಕಿ.