ಬಕ್ರೀದ್ ಅಥವಾ ಈದ್ ಉಲ್ ಅಧಾ 'ತ್ಯಾಗದ ಹಬ್ಬ'. ಇದು ಇಸ್ಲಾಮಿಕ್ ಸಮುದಾಯವು ಆಚರಿಸುವ ಎರಡನೇ ಪ್ರಮುಖ ಹಬ್ಬವಾಗಿದೆ. ಈ ವರ್ಷ, ಭಾರತದಲ್ಲಿ ಈದ್ ಉಲ್ ಅಧಾ ಜೂನ್ 29 ರಂದು ಆಚರಿಸಲಾಗುತ್ತದೆ. ಈ ದಿನವನ್ನು ಪ್ರವಾದಿ ಇಬ್ರಾಹಿಂ ಅವರು ತಮ್ಮ ಮಗನ ತ್ಯಾಗವನ್ನು ಸ್ಮರಿಸುವ ಸಲುವಾಗಿ ಪ್ರತಿವರ್ಷ ಈದ್ ಉಲ್ ಅಧಾವನ್ನು ಆಚರಿಸಲಾಗುತ್ತದೆ. ಪ್ರವಾದಿಯವರು ತಮ್ಮ ಮಗನ ತಲೆಯನ್ನು ಅಲ್ಲಾಹುನಿಗೆ ಅರ್ಪಿಸಿದಾಗ, ಅಲ್ಲಾ ಅವರ ಭಕ್ತಿಗೆ ಮೆಚ್ಚಿ ಅದರ ಪ್ರತಿಫಲವಾಗಿ ಆ ಮಗುವಿನ ತಲೆಯ ಬದಲು ಕುರಿಮರಿಯ ತಲೆಯನ್ನಾಗಿ ಪರಿವರ್ತಿಸಿದರು. ಅದಕ್ಕಾಗಿಯೇ ಬಕ್ರೀದ್ ಹಬ್ಬದಂದು ಮುಸ್ಲಿಂ ಕುಟುಂಬಗಳು ಗಂಡು ಮೇಕೆಯನ್ನು ದೇವರಿಗೆ ಬಲಿ ನೀಡುವ ಮೂಲಕ ಆಚರಣೆ ಮಾಡಲಾಗುತ್ತದೆ.