ರೆಟ್ರೋ ಲುಕ್ನಲ್ಲಿ ಗಮನ ಸೆಳೆದ ನಟಿ ಜಾನ್ವಿ ಕಪೂರ್; ಇಲ್ಲಿದೆ ಗ್ಯಾಲರಿ
ಈಗ ರೆಟ್ರೋ ಅವತಾರದಲ್ಲಿ ಜಾನ್ವಿ ಕಪುರ್ ಅವರು ಕಾಣಿಸಿಕೊಂಡಿದ್ದಾರೆ. ಹಳೆ ಕಾಲದಲ್ಲಿ ಫೋಟೋಗಳು ಬೇರೆಯದೇ ರೀತಿ ಇರುತ್ತಿದ್ದವು. ಜಾನ್ವಿ ಈಗ ಹಂಚಿಕೊಂಡ ಫೋಟೋ ಕೂಡ ರೆಟ್ರೋ ಕಾಲವನ್ನು ನೆನಪಿಸುವಂತಿದೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ.
1 / 7
ನಟಿ ಜಾನ್ವಿ ಕಪೂರ್ ಅವರಿಗೆ ಫೋಟೋಶೂಟ್ ಮಾಡಿಸೋದು ಅಂದರೆ ಎಲ್ಲಿಲ್ಲದ ಪ್ರೀತಿ. ಹಲವು ಸಿನಿಮಾಗಳಲ್ಲಿ ನಟಿಸಿರೋ ಅವರು ತಪ್ಪದೇ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಹೊಸ ಹೊಸ ಅವತಾರದಲ್ಲಿ ಅಭಿಮಾನಿಗಳನ್ನು ಎದುರುಗೊಳ್ಳುತ್ತಾರೆ.
2 / 7
ಈಗ ರೆಟ್ರೋ ಅವತಾರದಲ್ಲಿ ಜಾನ್ವಿ ಕಪುರ್ ಅವರು ಕಾಣಿಸಿಕೊಂಡಿದ್ದಾರೆ. ಹಳೆ ಕಾಲದಲ್ಲಿ ಫೋಟೋಗಳು ಬೇರೆಯದೇ ರೀತಿ ಇರುತ್ತಿದ್ದವು. ಜಾನ್ವಿ ಈಗ ಹಂಚಿಕೊಂಡ ಫೋಟೋ ಕೂಡ ರೆಟ್ರೋ ಕಾಲವನ್ನು ನೆನಪಿಸುವಂತಿದೆ.
3 / 7
ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ. ಫ್ಯಾನ್ಸ್ ಬಗೆಬಗೆಯಲ್ಲಿ ಈ ಫೋಟೋಗೆ ಕಮೆಂಟ್ ಮಾಡುತ್ತಿದ್ದಾರೆ. ‘ಜಾನ್ವಿ ಕಪೂರ್ ಅವರಿಗೆ ರೆಟ್ರೋ ಲುಕ್ ಹೊಂದುತ್ತದೆ. ಇದೇ ರೀತಿಯ ಸಿನಿಮಾ ಮಾಡಿ’ ಎಂದು ಕೆಲವರು ಬೇಡಿಕೆ ಇಟ್ಟಿದ್ದಾರೆ.
4 / 7
ಜಾನ್ವಿ ಕಪೂರ್ಗೆ ಚಿತ್ರರಂಗದ ಹಿನ್ನೆಲೆ ಇದೆ. ಜಾನ್ವಿ ಕಪೂರ್ ತಂದೆ ಬೋನಿ ಕಪೂರ್ ದೊಡ್ಡ ನಿರ್ಮಾಪಕರು. ತಾಯಿ ಶ್ರೀದೇವಿ ಅದ್ಭುತ ನಟಿ ಎನಿಸಿಕೊಂಡಿದ್ದರು. ಹೀಗಾಗಿ ಜಾನ್ವಿಗೆ ಸುಲಭದಲ್ಲಿ ಅವಕಾಶ ಸಿಗುತ್ತಿದೆ.
5 / 7
ಜಾನ್ವಿ ಕಪೂರ್ ಅವರು ಹಲವು ಚಿತ್ರಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ‘ಧಡಕ್’ ಅವರ ನಟನೆಯ ಮೊದಲ ಸಿನಿಮಾ. ಈ ಚಿತ್ರ ಸಾಧಾರಣ ಹಿಟ್ ಎನಿಸಿಕೊಂಡಿತು. ಆದರೆ, ದೊಡ್ಡ ಯಶಸ್ಸು ಅವರಿಗೆ ಸಿಕ್ಕಿಲ್ಲ.
6 / 7
ಜಾನ್ವಿ ಕಪೂರ್ ನಟನೆ ಬಗ್ಗೆ ಅನೇಕರು ಟೀಕೆ ಮಾಡಿದ್ದಿದೆ. ಶ್ರೀದೇವಿ ಅದ್ಭುತ ನಟಿ ಎನಿಸಿಕೊಂಡಿದ್ದರು. ನಟನೆಯಲ್ಲಿ ತಾಯಿಗೆ ಸರಿಸಮನಾಗಿ ನಿಲ್ಲಲು ಜಾನ್ವಿ ಕಪೂರ್ ಬಳಿ ಸಾಧ್ಯವೇ ಇಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಿದೆ. ಆದರೆ, ಜಾನ್ವಿ ಇದಕ್ಕೆಲ್ಲ ತಲೆಕೆಡಿಸಿಕೊಂಡಿಲ್ಲ.
7 / 7
ಜಾನ್ವಿ ಕಪೂರ್ ಅವರು ‘ದೇವರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಅವರು ಟಾಲಿವುಡ್ಗೆ ಕಾಲಿಡುತ್ತಿದ್ದಾರೆ. ಈ ಚಿತ್ರಕ್ಕೆ ಜೂನಿಯರ್ ಎನ್ಟಿಆರ್ ಹೀರೋ. ಕೊರಟಾಲ ಶಿವ ಅವರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 2024ಕ್ಕೆ ಚಿತ್ರ ರಿಲೀಸ್ ಆಗಲಿದೆ.