Updated on: Jul 10, 2023 | 2:07 PM
ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾದ ಪ್ರಿವ್ಯೂ ಇಂದು (ಜುಲೈ 10) ರಿಲೀಸ್ ಆಗಿದೆ. ಈ ವಿಡಿಯೋ ಸದ್ಯ ಸಾಕಷ್ಟು ಸದ್ದು ಮಾಡುತ್ತಿದೆ.
ಶಾರುಖ್ ಖಾನ್ ಅವರು ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪ್ರಿವ್ಯೂ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಶಾರುಖ್ ಅವರು ಮಾಸ್ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ.
‘ಜವಾನ್’ ಚಿತ್ರಕ್ಕೆ ನಯನತಾರಾ ಅವರು ನಾಯಕಿ. ಅವರ ಪಾತ್ರ ಹೇಗಿರಲಿದೆ ಎನ್ನುವ ಝಲಕ್ ಈ ಪ್ರಿವ್ಯೂನಲ್ಲಿ ಲಭ್ಯವಾಗಿದೆ.
ದೀಪಿಕಾ ಪಡುಕೋಣೆ-ಶಾರುಖ್ ಖಾನ್ ಅವರದ್ದು ಹಿಟ್ ಕಾಂಬಿನೇಷನ್. ‘ಜವಾನ್’ ಚಿತ್ರದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದಾರೆ.
ವಿಜಯ್ ಸೇತುಪತಿ ಅವರು ‘ಜವಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ಪಾತ್ರದ ಝಲಕ್ ‘ಜವಾನ್’ ಪ್ರಿವ್ಯೂದಲ್ಲಿ ಲಭ್ಯವಾಗಿದೆ.
‘ದಂಗಲ್’ ಖ್ಯಾತಿಯ ಸಾನ್ಯಾ ಮಲ್ಹೋತ್ರ ಕೂಡ ‘ಜವಾನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಪಾತ್ರ ಗಮನ ಸೆಳೆದಿದೆ.
ಶಾರುಖ್ ಖಾನ್ ಅವರು ಹಲವು ಗೆಟಪ್ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಅವರು ವಿಲನ್ ಆಗಿ ಕಾಣಿಸಿಕೊಳ್ತಾರಾ ಅಥವಾ ಹೀರೋ ಆಗಿ ಮಿಂಚುತ್ತಾರಾ ಎನ್ನುವ ಕುತೂಹಲ ಮೂಡಿದೆ.
‘ಜವಾನ್’ ಸಿನಿಮಾ ಸೆಪ್ಟೆಂಬರ್ 7ರಂದು ರಿಲೀಸ್ ಆಗಲಿದೆ. ಅಭಿಮಾನಿಗಳಿಗೆ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ.