- Kannada News Photo gallery Jhulan Goswami has been on a record-breaking spree in the ongoing ICC Womens World Cup 2022
Women’s World Cup: ಜೂಲಾನ್ ದ್ವಿಶತಕದ ಪಂದ್ಯ: ಮಹಿಳಾ ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಬರೆದ ಗೋಸ್ವಾಮಿ
Jhulan Goswami Record: ಇದು ಜೂಲನ್ ಗೋಸ್ವಾಮಿ ಅವರಿಗೆ 200ನೇ ಏಕದಿನ ಪಂದ್ಯ. ಈ ಮೂಲಕ 200 ಏಕದಿನ ಪಂದ್ಯವಾಡಿದ ವಿಶ್ವದ ಕೇವಲ 2ನೇ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ.
Updated on:Mar 19, 2022 | 8:31 AM

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ 18ನೇ ಪಂದ್ಯದಲ್ಲಿ ಇಂದು ಭಾರತ ಮಹಿಳಾ ತಂಡ ಹಾಗೂ ಆಸ್ಟ್ರೇಲಿಯಾ ಮಹಿಳಾ ತಂಡ ಮುಖಾಮುಖಿ ಆಗುತ್ತಿದೆ. ಈಗಾಗಲೇ ಟಾಸ್ ಸೋತು ಬ್ಯಾಟಿಂಗ್ ಮಾಡುತ್ತಿರುವ ಭಾರತ ತಂಡ ಆರಂಭಿಕ ಆಘಾತದಿಂದ ಪಾರಾಗಿದ್ದು ಭರ್ಜರಿ ಬ್ಯಾಟಿಂಗ್ ನಡೆಸುತ್ತಿದೆ. ಇದರ ನಡುವೆ ಈ ಪಂದ್ಯದಲ್ಲಿ ಜೂಲನ್ ಗೋಸ್ವಾಮಿ ವಿಶೇಷ ದಾಖಲೆ ಬರೆದಿದ್ದಾರೆ.

ಇದು ಜೂಲನ್ ಗೋಸ್ವಾಮಿ ಅವರಿಗೆ 200ನೇ ಏಕದಿನ ಪಂದ್ಯ. ಈ ಮೂಲಕ 200 ಏಕದಿನ ಪಂದ್ಯವಾಡಿದ ವಿಶ್ವದ ಕೇವಲ 2ನೇ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ.

ಇದರ ಜೊತೆಗೆ 200 ODI ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಮಹಿಳಾ ಬೌಲರ್ ಆಗಿದ್ದಾರೆ. ಇದಕ್ಕೂ ಮುನ್ನ ಇವರು ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಮಾಡಿದ್ದರು. ಇವರು ಇಲ್ಲಿಯವರೆಗೆ 41 ವಿಕೆಟ್ಗಳನ್ನು ಪಡೆದಿದ್ದಾರೆ. ಇದರೊಂದಿಗೆ ಈ ಬಾರಿಯ ವಿಶ್ವಕಪ್ನಲ್ಲಿ 250 ಏಕದಿನ ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ್ದಾರೆ.

ಮಹಿಳಾ ಕ್ರಿಕೆಟಿಗರ ಪೈಕಿ ಭಾರತ ತಂಡದ ನಾಯಕಿ ಮಿಥಾಲಿ ರಾಜ್ 229 ಪಂದ್ಯಗಳನ್ನಾಡಿ ಅಗ್ರಸ್ಥಾನಿಯಾಗಿದ್ದಾರೆ.
Published On - 7:37 am, Sat, 19 March 22
