ಕಾರುಗಳ ಸೈಲೆನ್ಸರ್, ಬಾಡಿ, ಬಣ್ಣ, ಇಂಜಿನ್ಗಳನ್ನು ಮಾರ್ಪಡಿಸಿ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ಕಶ ಶಬ್ದ ಮಾಡುತ್ತಾ ಕಾರ್ ರೇಸ್ ಮಾಡುತ್ತಿದ್ದ ಯುವಕರ ತಂಡ ಮತ್ತು 7 ಕಾರುಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ಕಶ ಶಬ್ದ ಮಾಡುತ್ತಾ ಕಾರ್ ರೇಸ್ ಜೊತೆಗೆ ಜಾಲಿ ರೈಡ್ ಮಾಡುತ್ತಿದ್ದವರನ್ನು ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು ತಡೆದು ಪ್ರಕರಣ ದಾಖಲಿಸಿದ್ದಾರೆ.
ವಿವಿಧ ಕಂಪನಿಗಳ 7 ರೀತಿಯ ಕಾರುಗಳನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೆದ್ದಾರಿಯಲ್ಲಿ ಸಾಗುವ ಇನ್ನಿತರ ವಾಹನಗಳಿಗೆ ಸೈಡ್ ಬಿಡದೆ ಮನಸ್ಸೊ ಇಚ್ಚೆ ಜಾಲಿ ರೈಡ್ ಮಾಡುತ್ತಾ ಸಿನೀಮಿಯ ಶೈಲಿಯಲ್ಲಿ ಚಾಲನೆ ಮಾಡುತ್ತಿದ್ದರು. ಕೊಡಲೇ ಎಚ್ಚೆತ್ತ ಪೊಲೀಸರು ಕಾರುಗಳನ್ನು ವಶಕ್ಕೆ ಪಡೆದು ಚಾಲಕರನ್ನು ವಿಚಾರಣೆ ಮಾಡಿದ್ದಾರೆ.
ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಕೂಡ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆಗೆ ದೂರು ನೀಡಿದ್ದರು. ಹಾಗಾಗಿ ಪೊಲೀಸರು ಇಂದು ಉಪಾಯದಿಂದ ಕಾರ್ ರೇಸ್ನಲ್ಲಿ ತೊಡಗಿದ್ದ 7 ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರ ಪರಿಶೀಲನೆ ವೇಳೆ ಕಾರುಗಳ ಬಣ್ಣ, ಸೈಲೆನ್ಸರ್, ಬಾಡಿ, ಇಂಜಿನ್ಗಳನ್ನು ಮಾರ್ಪಡಿಸಿದ್ದು ಬಯಲಾಗಿದೆ. ಸದ್ಯ ಕಾರುಗಳನ್ನು ಸೀಜ್ ಮಾಡುವ ಮೂಲಕ ಪೊಲೀಸರು ಮಾಲೀಕರಿಗೆ ಬುದ್ಧಿ ಕಲಿಸಿದ್ದಾರೆ.
Published On - 6:51 pm, Sun, 26 January 25