- Kannada News Photo gallery A KSRTC employee prostitution With thailand Girls In Mysuru Case Book News In kannada
ಮೈಸೂರಿನಲ್ಲಿ ಥೈಲ್ಯಾಂಡ್ ಬ್ಯೂಟಿ ಇಟ್ಕೊಂಡು ಹೈಟೆಕ್ ವೇಶ್ಯಾವಾಟಿಕೆ ದಂಧೆ
ಮೈಸೂರಿನಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ರೆಡ್ ಆಗಿದೆ. ಪೊಲೀಸ್ರು ದಾಳಿ ಮಾಡಿದಾಗ ಸಿಕ್ಕಬಿದ್ದಿದ್ದು ಥೈಲ್ಯಾಂಡ್ ಬೆಡಗಿ. ಥೈಲ್ಯಾಂಡ್ ಬ್ಯೂಟಿಯನ್ನ ಕರೆತಂದು ಇಂಟರ್ನ್ಯಾಷನಲ್ ಹೈಟೆಕ್ ವೇಶ್ಯವಾಟಿಕೆ ನಡೆಸ್ತಿದ್ದಿದ್ದು ಬಟಾ ಬಯಲಾಗಿದೆ. ರೂಮ್ ನಲ್ಲಿ ಸಿಕ್ಕ ಲೇಡಿ ನೋಡಿ ಪೊಲೀಸ್ರು ಹಾಗೂ ಒಡನಾಡಿ ಸಂಸ್ಥೆಯೇ ಶಾಕ್ ಆಗಿದೆ. ರತನ್ ಎನ್ನುವಾತ ಕೆ.ಎಸ್.ಆರ್.ಟಿಯಲ್ಲಿ ಉದ್ಯೋಗಿಯಾಗಿದ್ದ. ಆದ್ರೆ ಉದ್ಯೋಗ ಬಿಟ್ಟು ವೇಶ್ಯವಾಟಿಕೆಗೆ ದಂಧೆಗೆ ಇಳಿದಿದ್ದ ಎನ್ನಲಾಗಿದೆ.
Updated on:Jan 26, 2025 | 5:39 PM

ಮೈಸೂರು ನಗರದಲ್ಲಿ ಥೈಲ್ಯಾಂಡ್ ಬ್ಯೂಟಿ ಇಟ್ಟುಕೊಂಡು ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಸರ್ಕಾರಿ ನೌಕರಿಯಲ್ಲಿದ್ದ ವ್ಯಕ್ತಿಯೇ ಥೈಲ್ಯಾಂಡ್ ಯುವತಿಯನ್ನ ಕರೆತಂದು ವೇಶ್ಯೆವಾಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಮೈಸೂರಿನ ಬೋಗಾದಿ ರಿಂಗ್ ರಸ್ತೆಯ ಈಗಲ್ ಪ್ಯಾಂಟಸಿ ಮೇಲೆ ಒಡನಾಡಿ ಸೇವಾ ಸಂಸ್ಥೆ, ಸರಸ್ಪತಿಪುರಂ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ ಹೈಟೆಕ್ ವೇಶ್ಯವಾಟಿಕೆಯನ್ನ ದಂಧೆಯನ್ನ ಭೇದಿಸಿದ್ದಾರೆ

ರತನ್ ಎನ್ನುವಾತ ಕೆ.ಎಸ್.ಆರ್.ಟಿಯಲ್ಲಿ ಉದ್ಯೋಗ ಪಡೆದಿದ್ದ ಅನ್ನೋ ಮಾಹಿತಿ ಲಭ್ಯವಾಗಿದೆ. ಆದ್ರೆ ಉದ್ಯೋಗ ಬಿಟ್ಟು ವೇಶ್ಯವಾಟಿಕೆಗೆ ದಂಧೆಗೆ ರತನ್ ಇಳಿದಿದ್ದ ಎನ್ನಲಾಗಿದೆ. ಸುಲಭ ರೀತಿಯಲ್ಲಿ ಹಣ ಮಾಡೋಕೆ ಇಳಿದ ದಂಧೆ ಕೋರರು ಥೈಲ್ಯಾಂಡ್ ನಿಂದ ವೇಶ್ಯಾವಾಟಿಕೆಗೆ ಸುಂದರ ಯುವತಿಯನ್ನ ಕರೆದಂತು ವೇಶ್ಯಾವಾಟಿಕೆಗೆ ದೂಡಿರೋ ವಿಚಾರ ಬೆಳಕಿಗೆ ಬಂದಿದೆ.

ಕಾರ್ಯಚರಣೆ ವೇಳೆ ಥೈಲ್ಯಾಂಡ್ ನಿಂದ ಯುವತಿಯನ್ನ ಕರೆತಂದು ವೇಶ್ಯವಾಟಿಕೆಗೆ ನಡೆಸುತ್ತಿದ್ದ ವಿಚಾರ ಬೆಳಕಿಗೆ ಬಂದಿದ್ದು, ಥೈಲ್ಯಾಂಡ್ ಯುವತಿ ಜೊತೆ ಇದ್ದ ಸ್ಥಳಿಯ ಮತ್ತೊಂದು ಯುವತಿಯನ್ನೂ ಕೂಡ ರಕ್ಷಣೆ ಮಾಡಿದ್ದಾರೆ.

ವೇಶ್ಯವಾಟಿಕೆಯಲ್ಲಿ ರಕ್ಷಣೆಗೆ ಒಳಗಾದ ಥೈಲ್ಯಾಂಡ್ ಯುವತಿ ತಾನು ಬ್ಯುಸಿನೆಸ್ ಗೆ ಬಂದಿರೋದಾಗಿ ಹೇಳಿಕೊಂಡಿದ್ದಾಳೆ. ಥೈಲ್ಯಾಂಡ್ ಯುವತಿ ಜೊತೆ ಇದ್ದ ಸ್ಥಳಿಯ ಮತ್ತೊಂದು ಯುವತಿಯನ್ನೂ ಕೂಡ ರಕ್ಷಣೆ ಮಾಡಿದ್ದು, ರೂಮ್ ನಲ್ಲಿ ಸಿಕ್ಕ ಲೇಡಿ ನೋಡಿ ಪೊಲೀಸ್ರು, ಒಡನಾಡಿ ಸಂಸ್ಥೆಯೇ ಶಾಕ್ ಆಗಿದೆ.

ರತನ್ ಥೈಲ್ಯಾಂಡ್ ಬ್ಯೂಟಿ ಇಟ್ಕೊಂಡು ದಂಧೆ ಮಾಡ್ತಿದ್ದ. ಆರೋಪಿ ರತನ್ ಜೊತೆ ರೇವಣ್ಣ ಎಂಬಾತನೂ ಸಾಥ್ ಕೊಟ್ಟಿದ್ದ. ಥೈಲ್ಯಾಂಡ್ ಬ್ಯೂಟಿ ಬಳಸಿ ಓರ್ವ ಗಿರಾಕಿಯಿಂದ 8 ರಿಂದ 10,000 ರೂ. ವಸೂಲಿ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೋಗಾದಿ ಬಳಿ ಇರುವ ಹೋಟೆಲ್‌ನಲ್ಲಿ ವಾಸವಿದ್ದ ಥೈಲ್ಯಾಂಡ್ ಯುವತಿ ಜೊತೆ ಮತ್ತೊಬ್ಬ ಯುವತಿಯೂ ವೇಶ್ಯೆವಾಟಿಕೆಯಲ್ಲಿ ತೊಡಗಿದ್ದಳು. ವೇಶ್ಯಾವಾಟಿಕೆ ನೆಡೆಯುತಿದ್ದ ಸ್ಥಳಕ್ಕೆ ಒಡನಾಡಿ ಸೇವಾ ಸಂಸ್ಥೆ, ಪೊಲೀಸರು ದಾಳಿ ಮಾಡಿ ಇಬ್ಬರು ಯುವತಿಯರ ರಕ್ಷಣೆ ಮಾಡಿದ್ದಾರೆ. ಜೊತೆಗೆ ಪೊಲೀಸರು 7 ಜನರನ್ನ ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಕೇಳಿದ್ದಕ್ಕೆ ಬ್ಯುಸಿನೆಸ್ ಪರ್ಪಸ್‌ಗೆ ಬಂದಿದ್ದೇನೆ ಎಂದ ಥೈಲ್ಯಾಂಡ್ ಯುವತಿ. 1 ದಿನದ ಹಿಂದಷ್ಟೇ ಮೈಸೂರಿಗೆ ಬಂದಿದ್ದೆ ಎಂಬ ಮಾಹಿತಿ ನೀಡಿದ್ದಾಳೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 5:33 pm, Sun, 26 January 25
























