ಬ್ರೈಡನ್ ಕಾರ್ಸ್ ಮಿಂಚಿಂಗ್… ಕಾವ್ಯ ಮಾರನ್ ಫುಲ್ ಖುಷ್..!
IPL 2025: ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ 29 ವರ್ಷದ ಬ್ರೈಡನ್ ಕಾರ್ಸ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಬರೋಬ್ಬರಿ 1 ಕೋಟಿ ರೂ. ನೀಡಿ ಖರೀದಿಸಿತ್ತು. ಕೇವಲ 4 ಪಂದ್ಯವಾಡಿದ್ದ ಇಂಗ್ಲೆಂಡ್ ಆಟಗಾರನನ್ನು ಕೋಟಿ ನೀಡಿ ಖರೀದಿಸಿದ ಕಾವ್ಯ ಮಾರನ್ ಅವರ ನಿರ್ಧಾರವು ಅಚ್ಚರಿಗೆ ಕಾರಣವಾಗಿತ್ತು. ಆದರೀಗ ಬ್ರೈಡನ್ ಕಾರ್ಸ್ ಸ್ಪಿನ್ ಸ್ನೇಹಿ ಪಿಚ್ನಲ್ಲೇ ತಾನೆಂತಹ ಆಟಗಾರ ಎಂಬುದನ್ನು ನಿರೂಪಿಸಿದ್ದಾರೆ. ಅಲ್ಲದೆ ಕಾವ್ಯ ಮಾರನ್ ಅವರ ನಿರ್ಧಾರ ಸರಿಯಾಗಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ.
Updated on: Jan 26, 2025 | 2:23 PM

ಟೀಮ್ ಇಂಡಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಸೋಲನುಭವಿಸಿದೆ. ಈ ಸೋಲಿನ ನಡುವೆ ಇಂಗ್ಲೆಂಡ್ ಪಾಲಿನ ಸಕಾರಾತ್ಮಕ ವಿಷಯ ಎಂದರೆ ಬ್ರೈಡನ್ ಕಾರ್ಸ್ ಪ್ರದರ್ಶನ. ಮೊದಲ ಪಂದ್ಯದಲ್ಲಿ ಬೆಂಚ್ ಕಾದಿದ್ದ ಕಾರ್ಸ್ ಅವರನ್ನು ಈ ಬಾರಿ ಗಸ್ ಗಸ್ ಅಟ್ಕಿನ್ಸನ್ ಅವರ ಬದಲಿಯಾಗಿ ಕಣಕ್ಕಿಳಿಸಲಾಗಿತ್ತು.

ಅದರಂತೆ ಭಾರತದಲ್ಲಿ ಚೊಚ್ಚಲ ಪಂದ್ಯವಾಡಿದ ಬ್ರೈಡನ್ ಕಾರ್ಸ್ ಆಲ್ರೌಂಡರ್ ಆಟದೊಂದಿಗೆ ಮಿಂಚಿದ್ದಾರೆ. ಇಂಗ್ಲೆಂಡ್ ಪರ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಾರ್ಸ್ 17 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 1 ಫೋರ್ಗಳೊಂದಿಗೆ 31 ರನ್ ಸಿಡಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಆದರೆ ದುರಾದೃಷ್ಟವಶಾತ್ ಜೋಫ್ರಾ ಆರ್ಚರ್ ಮಾಡಿದ ತಪ್ಪಿನಿಂದಾಗಿ ಕಾರ್ಸ್ ರನೌಟ್ಗೆ ಬಲಿಯಾದರು.

ಇತ್ತ ಬ್ಯಾಟಿಂಗ್ನಲ್ಲಿ ಮಿಂಚಿ ಬೌಲಿಂಗ್ಗೆ ಬಂದ ಬ್ರೈಡನ್ ಕಾರ್ಸ್ ಬೌನ್ಸರ್ ಎಸೆತಗಳ ಮೂಲಕ ಗಮನ ಸೆಳೆದರು. ಅದರಲ್ಲೂ ತಮ್ಮ ಮೊದಲ ಓವರ್ನಲ್ಲೇ ಡೇಂಜರಸ್ ಸಂಜು ಸ್ಯಾಮ್ಸನ್ (5) ವಿಕೆಟ್ ಕಬಳಿಸಿದರು. ಇನ್ನು ಸ್ಪೋಟಕ ದಾಂಡಿಗ ಸೂರ್ಯಕುಮಾರ್ ಯಾದವ್ (5) ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಆ ಬಳಿಕ ವಾಷಿಂಗ್ಟನ್ ಸುಂದರ್ (26) ಅವರನ್ನು ಬೌಲ್ಡ್ ಮಾಡಿ ಪೆವಿಲಿಯನ್ಗೆ ಕಳುಹಿಸಿದರು.

ಹೀಗೆ ಬ್ಯಾಟಿಂಗ್ನಲ್ಲಿ 17 ಎಸೆತಗಳಲ್ಲಿ ಸ್ಪೋಟಕ 31 ರನ್ ಹಾಗೂ ಬೌಲಿಂಗ್ನಲ್ಲಿ 4 ಓವರ್ಗಳಲ್ಲಿ 29 ರನ್ ನೀಡಿ 3 ವಿಕೆಟ್ ಕಬಳಿಸಿ ಬ್ರೈಡನ್ ಕಾರ್ಸ್ ಮಿಂಚಿದ್ದಾರೆ. ಇತ್ತ ಕಾರ್ಸ್ ಅವರ ಈ ಭರ್ಜರಿ ಪ್ರದರ್ಶನದಿಂದಾಗಿ ಸನ್ರೈಸರ್ಸ್ ಹೈದರಾಬಾದ್ ಓನರ್ ಕಾವ್ಯ ಮಾರನ್ ಫುಲ್ ಖುಷಿಯಾಗಿದ್ದಾರೆ.

ಏಕೆಂದರೆ ಮುಂಬರುವ ಐಪಿಎಲ್ನಲ್ಲಿ ಬ್ರೈಡನ್ ಕಾರ್ಸ್ ಸನ್ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿಯಲಿದ್ದಾರೆ. ಈ ಬಾರಿಯ ಐಪಿಎಲ್ ಮೆಗಾ ಹರಾಜಿನ ಮೂಲಕ ಎಸ್ಆರ್ಹೆಚ್ ಫ್ರಾಂಚೈಸಿ ಬ್ರೈಡನ್ ಕಾರ್ಸ್ ಅವರನ್ನು 1 ಕೋಟಿ ರೂ.ಗೆ ಖರೀದಿಸಿದೆ. ಇದೀಗ ಭಾರತೀಯ ಪಿಚ್ನಲ್ಲಿ ಅದ್ಭುತ ಆಲ್ರೌಂಡರ್ ಪ್ರದರ್ಶನ ನೀಡುವ ಮೂಲಕ ಬ್ರೈಡನ್ ಕಾರ್ಸ್ ಸನ್ರೈಸರ್ಸ್ ಹೈದರಾಬಾದ್ ಪರ ಕೂಡ ಸಂಚಲನ ಸೃಷ್ಟಿಸುವ ಸೂಚನೆ ನೀಡಿದ್ದಾರೆ.



















