ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ಬರೆದ ಬಾಬರ್ ಆಝಂ
Babar Azam: ಟೆಸ್ಟ್ ಕ್ರಿಕೆಟ್ನಲ್ಲಿ ಬಾಬರ್ ಆಝಂ ತಮ್ಮ ಕಳಪೆ ಫಾರ್ಮ್ ಮುಂದುವರೆಸಿದ್ದಾರೆ, ಅದರಲ್ಲೂ ಕಳೆದ 61 ಇನಿಂಗ್ಸ್ಗಳಿಂದ ಒಂದೇ ಒಂದು ಸೆಂಚುರಿ ಸಿಡಿಸಲು ಬಾಬರ್ ಆಝಂಗೆ ಸಾಧ್ಯವಾಗಿಲ್ಲ. ಈ ಹೀನಾಯ ಪ್ರದರ್ಶನದೊಂದಿಗೆ ಬಾಬರ್ ಆಝಂ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ಕಳಪೆ ದಾಖಲೆಯೊಂದನ್ನು ಬರೆದಿದ್ದಾರೆ.
Updated on: Jan 27, 2025 | 8:30 AM

ಪಾಕಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಆಝಂ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ಬರೆದಿದ್ದಾರೆ. ಅದು ಕೂಡ ಕಳೆದ ಎರಡು ವರ್ಷಗಳಲ್ಲಿ ಒಂದೇ ಒಂದು ಶತಕ ಬಾರಿಸದೇ ಎಂಬುದೇ ಅಚ್ಚರಿ. ಅಂದರೆ ಬಾಬರ್ ಆಝಂ ಟೆಸ್ಟ್ನಲ್ಲಿ ಸೆಂಚುರಿ ಸಿಡಿಸಿ ವರ್ಷಗಳೇ ಕಳೆದಿವೆ.

2022 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಶತಕ ಸಿಡಿಸಿದ್ದ ಬಾಬರ್ ಆಝಂ ಆ ಬಳಿಕ ಮೂರಂಕಿ ಮೊತ್ತವನ್ನು ಮುಟ್ಟಿಲ್ಲ. ಹೀಗೆ ಶತಕ ಬಾರಿಸದೇ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಇನಿಂಗ್ಸ್ ಆಡಿದ ಟಾಪ್ ಆರ್ಡರ್ ಬ್ಯಾಟ್ಸ್ಮನ್ ಎಂಬ ಹೀನಾಯ ದಾಖಲೆಯೊಂದು ಬಾಬರ್ ಆಝಂ ಹೆಸರಿಗೆ ಸೇರ್ಪಡೆಯಾಗಿದೆ.

ಪ್ರಸ್ತುತ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಬಾಬರ್ ಆಝಂ 1 ರನ್ಗಳಿಸಿದರೆ, ದ್ವಿತೀಯ ಇನಿಂಗ್ಸ್ನಲ್ಲಿ 31 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ಇದರೊಂದಿಗೆ ಟೆಸ್ಟ್ನಲ್ಲಿ ಸೆಂಚುರಿ ಸಿಡಿಸದೇ ಅತ್ಯಧಿಕ ಇನಿಂಗ್ಸ್ ಆಡಿದ ಅಗ್ರ ಕ್ರಮಾಂಕದ ಬ್ಯಾಟರ್ ಎಂಬ ಕುಖ್ಯಾತಿ ಬಾಬರ್ ಪಾಲಾಗಿದೆ.

ಬಾಬರ್ ಆಝಂ ಕಳೆದ ಎರಡು ವರ್ಷಗಳಿಂದ 61 ಟೆಸ್ಟ್ ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಒಮ್ಮೆಯೂ ಶತಕ ಸಿಡಿಸಿಲ್ಲ. ಅಲ್ಲದೆ ಟೆಸ್ಟ್ ಇತಿಹಾಸದಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್ ಒಬ್ಬರು 60+ ಇನಿಂಗ್ಸ್ ಆಡಿದರೂ ಶತಕ ಬಾರಿಲು ವಿಫಲರಾಗಿರುವುದು ಇದೇ ಮೊದಲು. ಹೀಗಾಗಿಯೇ ಇದೀಗ ಬಾಬರ್ ಅವರ ಪ್ರದರ್ಶನದ ಬಗ್ಗೆ ಪ್ರಶ್ನೆಗಳೆದ್ದಿವೆ.

ಟೆಸ್ಟ್ ಕ್ರಿಕೆಟ್ನಲ್ಲಿ 106 ಇನಿಂಗ್ಸ್ ಆಡಿರುವ ಬಾಬರ್ ಆಝಂ ಈವರೆಗೆ 4203 ರನ್ ಕಲೆಹಾಕಿದ್ದಾರೆ. ಈ ವೇಳೆ ಕೇವಲ 9 ಶತಕಗಳನ್ನು ಬಾರಿಸಲಷ್ಟೇ ಶಕ್ತರಾಗಿದ್ದಾರೆ. ಅದರಲ್ಲೂ ಕಳೆದ 61 ಇನಿಂಗ್ಸ್ಗಳಲ್ಲಿ ಒಂದೇ ಒಂದು ಸೆಂಚುರಿ ಸಿಡಿಸದೇ ಟೆಸ್ಟ್ ಕ್ರಿಕೆಟ್ ಇತಿಹಾಸದ ಅತ್ಯಂತ ಕಳಪೆ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.



















