AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರೈಡನ್ ಕಾರ್ಸ್ ಮಿಂಚಿಂಗ್… ಕಾವ್ಯ ಮಾರನ್​ ಫುಲ್​ ಖುಷ್..!

IPL 2025: ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ 29 ವರ್ಷದ ಬ್ರೈಡನ್ ಕಾರ್ಸ್ ಅವರನ್ನು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಬರೋಬ್ಬರಿ 1 ಕೋಟಿ ರೂ. ನೀಡಿ ಖರೀದಿಸಿತ್ತು. ಕೇವಲ 4 ಪಂದ್ಯವಾಡಿದ್ದ ಇಂಗ್ಲೆಂಡ್ ಆಟಗಾರನನ್ನು ಕೋಟಿ ನೀಡಿ ಖರೀದಿಸಿದ ಕಾವ್ಯ ಮಾರನ್ ಅವರ ನಿರ್ಧಾರವು ಅಚ್ಚರಿಗೆ ಕಾರಣವಾಗಿತ್ತು. ಆದರೀಗ ಬ್ರೈಡನ್ ಕಾರ್ಸ್ ಸ್ಪಿನ್ ಸ್ನೇಹಿ ಪಿಚ್​ನಲ್ಲೇ ತಾನೆಂತಹ ಆಟಗಾರ ಎಂಬುದನ್ನು ನಿರೂಪಿಸಿದ್ದಾರೆ. ಅಲ್ಲದೆ ಕಾವ್ಯ ಮಾರನ್ ಅವರ ನಿರ್ಧಾರ ಸರಿಯಾಗಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ.

ಝಾಹಿರ್ ಯೂಸುಫ್
|

Updated on: Jan 26, 2025 | 2:23 PM

Share
ಟೀಮ್ ಇಂಡಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಸೋಲನುಭವಿಸಿದೆ. ಈ ಸೋಲಿನ ನಡುವೆ ಇಂಗ್ಲೆಂಡ್ ಪಾಲಿನ ಸಕಾರಾತ್ಮಕ ವಿಷಯ ಎಂದರೆ ಬ್ರೈಡನ್ ಕಾರ್ಸ್ ​ಪ್ರದರ್ಶನ. ಮೊದಲ ಪಂದ್ಯದಲ್ಲಿ ಬೆಂಚ್ ಕಾದಿದ್ದ ಕಾರ್ಸ್ ಅವರನ್ನು ಈ ಬಾರಿ ಗಸ್ ಗಸ್ ಅಟ್ಕಿನ್ಸನ್ ಅವರ ಬದಲಿಯಾಗಿ ಕಣಕ್ಕಿಳಿಸಲಾಗಿತ್ತು.

1 / 5
ಅದರಂತೆ ಭಾರತದಲ್ಲಿ ಚೊಚ್ಚಲ ಪಂದ್ಯವಾಡಿದ ಬ್ರೈಡನ್ ಕಾರ್ಸ್ ಆಲ್​ರೌಂಡರ್ ಆಟದೊಂದಿಗೆ ಮಿಂಚಿದ್ದಾರೆ. ಇಂಗ್ಲೆಂಡ್ ಪರ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಾರ್ಸ್ 17 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 1 ಫೋರ್​ಗಳೊಂದಿಗೆ 31 ರನ್ ಸಿಡಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಆದರೆ ದುರಾದೃಷ್ಟವಶಾತ್ ಜೋಫ್ರಾ ಆರ್ಚರ್ ಮಾಡಿದ ತಪ್ಪಿನಿಂದಾಗಿ ಕಾರ್ಸ್​ ರನೌಟ್​ಗೆ ಬಲಿಯಾದರು.

2 / 5
ಇತ್ತ ಬ್ಯಾಟಿಂಗ್​ನಲ್ಲಿ ಮಿಂಚಿ ಬೌಲಿಂಗ್​ಗೆ ಬಂದ ಬ್ರೈಡನ್ ಕಾರ್ಸ್ ಬೌನ್ಸರ್ ಎಸೆತಗಳ ಮೂಲಕ ಗಮನ ಸೆಳೆದರು. ಅದರಲ್ಲೂ ತಮ್ಮ ಮೊದಲ ಓವರ್​ನಲ್ಲೇ ಡೇಂಜರಸ್ ಸಂಜು ಸ್ಯಾಮ್ಸನ್ (5) ವಿಕೆಟ್ ಕಬಳಿಸಿದರು. ಇನ್ನು ಸ್ಪೋಟಕ ದಾಂಡಿಗ ಸೂರ್ಯಕುಮಾರ್ ಯಾದವ್ (5) ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಆ ಬಳಿಕ ವಾಷಿಂಗ್ಟನ್ ಸುಂದರ್​ (26) ಅವರನ್ನು ಬೌಲ್ಡ್ ಮಾಡಿ ಪೆವಿಲಿಯನ್​ಗೆ ಕಳುಹಿಸಿದರು.

3 / 5
ಹೀಗೆ ಬ್ಯಾಟಿಂಗ್​​ನಲ್ಲಿ 17 ಎಸೆತಗಳಲ್ಲಿ ಸ್ಪೋಟಕ 31 ರನ್ ಹಾಗೂ ಬೌಲಿಂಗ್​ನಲ್ಲಿ 4 ಓವರ್​ಗಳಲ್ಲಿ 29 ರನ್ ನೀಡಿ 3 ವಿಕೆಟ್ ಕಬಳಿಸಿ ಬ್ರೈಡನ್ ಕಾರ್ಸ್ ಮಿಂಚಿದ್ದಾರೆ. ಇತ್ತ ಕಾರ್ಸ್ ಅವರ ಈ ಭರ್ಜರಿ ಪ್ರದರ್ಶನದಿಂದಾಗಿ ಸನ್​ರೈಸರ್ಸ್ ಹೈದರಾಬಾದ್ ಓನರ್ ಕಾವ್ಯ ಮಾರನ್ ಫುಲ್ ಖುಷಿಯಾಗಿದ್ದಾರೆ.

4 / 5
ಏಕೆಂದರೆ ಮುಂಬರುವ ಐಪಿಎಲ್​ನಲ್ಲಿ ಬ್ರೈಡನ್ ಕಾರ್ಸ್ ಸನ್​ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿಯಲಿದ್ದಾರೆ. ಈ ಬಾರಿಯ ಐಪಿಎಲ್ ಮೆಗಾ ಹರಾಜಿನ ಮೂಲಕ ಎಸ್​ಆರ್​ಹೆಚ್ ಫ್ರಾಂಚೈಸಿ ಬ್ರೈಡನ್ ಕಾರ್ಸ್ ಅವರನ್ನು 1 ಕೋಟಿ ರೂ.ಗೆ ಖರೀದಿಸಿದೆ. ಇದೀಗ ಭಾರತೀಯ ಪಿಚ್​ನಲ್ಲಿ ಅದ್ಭುತ ಆಲ್​ರೌಂಡರ್ ಪ್ರದರ್ಶನ ನೀಡುವ ಮೂಲಕ ಬ್ರೈಡನ್ ಕಾರ್ಸ್ ಸನ್​ರೈಸರ್ಸ್ ಹೈದರಾಬಾದ್ ಪರ ಕೂಡ ಸಂಚಲನ ಸೃಷ್ಟಿಸುವ ಸೂಚನೆ ನೀಡಿದ್ದಾರೆ.

5 / 5
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ

ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್

ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ

ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ

ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ

ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ

ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ

ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ

ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ

ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ