Kabzaa Movie: ‘ಕಬ್ಜ’ ಆಡಿಯೋ ಬಿಡುಗಡೆ ಮಾಡಿದ ಗಣ್ಯರು; ಮಸ್ತ್​ ಮನರಂಜನೆ ನೀಡಿದ ಶಿವಣ್ಣ, ಉಪ್ಪಿ

Updated on: Feb 26, 2023 | 9:56 PM

Upendra | Shivarajkumar: ರವಿ ಬಸ್ರೂರು ಸಂಗೀತ ನೀಡಿರುವ ‘ಕಬ್ಜ’ ಸಿನಿಮಾದ ಹಾಡುಗಳು ಧೂಳೆಬ್ಬಿಸುತ್ತಿವೆ. ಶಿಡ್ಲಘಟ್ಟದಲ್ಲಿ ಅದ್ದೂರಿಯಾಗಿ ಆಡಿಯೋ ರಿಲೀಸ್​ ಮಾಡಲಾಗಿದೆ.

1 / 5
ಆರ್​. ಚಂದ್ರು ನಿರ್ದೇಶನ ಮಾಡಿರುವ ‘ಕಬ್ಜ’ ಸಿನಿಮಾ ಸಖತ್​ ಹೈಪ್​ ಸೃಷ್ಟಿ ಮಾಡಿದೆ. ಶಿಡ್ಲಘಟ್ಟದಲ್ಲಿ ಈ ಚಿತ್ರದ ಹೊಸ ಹಾಡು ಬಿಡುಗಡೆ ಆಗಿದ್ದು, ಸಚಿವ ಡಾ. ಕೆ. ಸುಧಾಕರ್​, ಶಿವರಾಜ್​ಕುಮಾರ್​ ಸೇರಿದಂತೆ ಅನೇಕ ಗಣ್ಯರು ಹಾಜರಿ ಹಾಕಿದ್ದಾರೆ.

ಆರ್​. ಚಂದ್ರು ನಿರ್ದೇಶನ ಮಾಡಿರುವ ‘ಕಬ್ಜ’ ಸಿನಿಮಾ ಸಖತ್​ ಹೈಪ್​ ಸೃಷ್ಟಿ ಮಾಡಿದೆ. ಶಿಡ್ಲಘಟ್ಟದಲ್ಲಿ ಈ ಚಿತ್ರದ ಹೊಸ ಹಾಡು ಬಿಡುಗಡೆ ಆಗಿದ್ದು, ಸಚಿವ ಡಾ. ಕೆ. ಸುಧಾಕರ್​, ಶಿವರಾಜ್​ಕುಮಾರ್​ ಸೇರಿದಂತೆ ಅನೇಕ ಗಣ್ಯರು ಹಾಜರಿ ಹಾಕಿದ್ದಾರೆ.

2 / 5

ಶಿವರಾಜ್​ಕುಮಾರ್​ ಮತ್ತು ಉಪೇಂದ್ರ ಅವರ ಸ್ನೇಹ ಹಲವು ವರ್ಷಗಳದ್ದು. ಉಪ್ಪಿ ನಟನೆಯ ‘ಕಬ್ಜ’ ಚಿತ್ರದ ಹಾಡನ್ನು ಬಿಡುಗಡೆ ಮಾಡಿದ ಬಳಿಕ ಶಿವಣ್ಣ ಇಡೀ ತಂಡಕ್ಕೆ ಶುಭ ಹಾರೈಸಿದರು. ಉಪೇಂದ್ರ ಮತ್ತು ಆರ್​. ಚಂದ್ರು ಜೊತೆ ತಮಗೆ ಇರುವ ಸ್ನೇಹದ ಬಗ್ಗೆ ಶಿವಣ್ಣ ಮಾತನಾಡಿದರು.

3 / 5

ವೇದಿಕೆಯಲ್ಲಿ ಹಾಡಿ ಕುಣಿಯುವ ಮೂಲಕ ಶಿವರಾಜ್​ಕುಮಾರ್​ ಅವರು ಶಿಡ್ಲಘಟ್ಟ ಜನತೆಗೆ ಮಸ್ತ್​ ಮನರಂಜನೆ ನೀಡಿದರು. ಆರ್​. ಚಂದ್ರು ಅವರನ್ನೇ ಹೀರೋಯಿನ್​ ಜಾಗದಲ್ಲಿ ನಿಲ್ಲಿಸಿ, ‘ಓಂ’ ಸಿನಿಮಾದ ಫೇಮಸ್​ ಡೈಲಾಗ್​ ಹೇಳುವ ಮೂಲಕ ಶಿವಣ್ಣ ಎಲ್ಲರ ಚಪ್ಪಾಳೆ ಗಿಟ್ಟಿಸಿದರು.

4 / 5

ಶಿವರಾಜ್​ಕುಮಾರ್​ ಇದ್ದಲ್ಲಿ ಎನರ್ಜಿ ಇರುತ್ತದೆ. ಅವರು ಕಾರ್ಯಕ್ರಮಕ್ಕೆ ಬಂದರೆ ವೇದಿಕೆಗೆ ಹೊಸ ಕಳೆ ಬರುತ್ತದೆ. ‘ಕಬ್ಜ’ ತಂಡಕ್ಕೆ ಅವರು ಮನಸಾರೆ ಹಾರೈಸಿದ್ದಾರೆ. ಆರ್​. ಚಂದ್ರು ಅವರು ಪರಿಶ್ರಮದ ಬಗ್ಗೆ ಶಿವಣ್ಣ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.

5 / 5

ಶ್ರೀಯಾ ಶರಣ್​ ಅವರು ‘ಕಬ್ಜ’ ಚಿತ್ರದಲ್ಲಿ ಹೀರೋಯಿನ್​ ಆಗಿ ನಟಿಸಿದ್ದಾರೆ. ಅವರು ಕಾಣಿಸಿಕೊಂಡಿರುವ ‘ನಮಾಮಿ..’ ಹಾಡು ಈಗಾಗಲೇ ಸೂಪರ್​ ಹಿಟ್​ ಆಗಿದೆ. ಈಗ ಬಿಡುಗಡೆ ಆಗಿರುವ ‘ಚುಂ ಚುಂ ಚಳಿ..’ ಹಾಡಿನಲ್ಲಿ ತಾನ್ಯಾ ಹೋಪ್​ ಹೆಜ್ಜೆ ಹಾಕಿದ್ದಾರೆ.

Published On - 9:56 pm, Sun, 26 February 23

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us