Tanya Hope: ಸುಡು ಬೇಸಿಗೆಯಲ್ಲೂ ‘ಕಬ್ಜ’ ಚಿತ್ರದ ‘ಚುಂ ಚುಂ ಚಳಿ..’ ಹಾಡಿಗೆ ಉಪೇಂದ್ರ ಅಭಿಮಾನಿಗಳು ಫಿದಾ

|

Updated on: Feb 27, 2023 | 9:59 PM

Kabzaa Movie Songs: ‘ಕಬ್ಜ’ ಸಿನಿಮಾದ ಹಾಡುಗಳು ಸೂಪರ್​ ಹಿಟ್​ ಆಗಿವೆ. ರವಿ ಬಸ್ರೂರು ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಗೀತೆಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ.

1 / 5
ಆರ್​. ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾ ಸಖತ್​ ಹೈಪ್​ ಸೃಷ್ಟಿ ಮಾಡಿದೆ. ಈ ಸಿನಿಮಾದ ಹಾಡುಗಳು ಧೂಳೆಬ್ಬಿಸುತ್ತಿವೆ. ಫೆಬ್ರವರಿ 26ರಂದು ಶಿಡ್ಲಘಟ್ಟದಲ್ಲಿ ‘ಚುಂ ಚುಂ ಚಳಿ ಚಳಿ..’ ಹಾಡು ಬಿಡುಗಡೆ ಮಾಡಲಾಯಿತು.

2 / 5
‘ಚುಂ ಚುಂ ಚಳಿ ಚಳಿ..’ ಹಾಡಿನಲ್ಲಿ ಉಪೇಂದ್ರ ಮತ್ತು ತಾನ್ಯಾ ಹೋಪ್​ ಅವರು ಹೆಜ್ಜೆ ಹಾಕಿದ್ದಾರೆ. ಇದರ ಲಿರಿಕಲ್​ ವಿಡಿಯೋಗೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಒಂದು ದಿನದಲ್ಲಿ ಈ ಹಾಡು 16 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

3 / 5
‘ಕಬ್ಜ’ ಚಿತ್ರಕ್ಕೆ ರವಿ ಬಸ್ರೂರು ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿದ್ದ ಶೀರ್ಷಿಕೆ ಗೀತೆ ಮತ್ತು ‘ನಮಾಮಿ..’ ಹಾಡುಗಳು ಸೂಪರ್​ ಹಿಟ್​ ಆಗಿವೆ. ಅದೇ ಹಾದಿಯಲ್ಲಿ ‘ಚುಂ ಚುಂ ಚಳಿ ಚಳಿ..’ ಸಾಂಗ್​ ಕೂಡ ಸಾಗುತ್ತಿದೆ.

4 / 5
ಈ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿರುವ ತಾನ್ಯಾ ಹೋಪ್​ ಅವರು ಬಿಂದಾಸ್​ ಆಗಿ ಕುಣಿದಿದ್ದಾರೆ. ಜಾನಿ ಮಾಸ್ಟರ್​ ಅವರು ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ದೊಡ್ಡ ಪರದೆಯಲ್ಲಿ ‘ಚುಂ ಚುಂ ಚಳಿ ಚಳಿ..’ ಸಾಂಗ್​ ನೋಡಲು ಫ್ಯಾನ್ಸ್​ ಕಾದಿದ್ದಾರೆ.

5 / 5
‘ಚುಂ ಚುಂ ಚಳಿ ಚಳಿ..’ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಐರಾ ಉಡುಪಿ, ಮನಿಶಾ ದಿನಕರ್​, ಸಂತೋಷ್​ ವೆಂಕಿ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಮಾರ್ಚ್​ 17ರಂದು ‘ಕಬ್ಜ’ ರಿಲೀಸ್​ ಆಗಲಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಲು ಸಕಲ ತಯಾರಿ ನಡೆದಿದೆ.