
ಕಾಜಲ್ ಅಗರ್ವಾಲ್ ಅವರ ಕುಟುಂಬದಲ್ಲಿ ಸಂತಸ ಹೆಚ್ಚಾಗಿದೆ. ಅವರಿಗೆ ಗಂಡು ಮಗು ಜನಿಸಿದ್ದು, ಆತನಿಗೆ ನೀಲ್ ಎಂದು ಹೆಸರು ಇಡಲಾಗಿದೆ. ಈಗ ಅವರು ಒಂದು ಹೊಸ ಫೋಟೋ ಹಂಚಿಕೊಂಡಿದ್ದು ಸಾಕಷ್ಟು ವೈರಲ್ ಆಗುತ್ತಿದೆ.

‘ಬಾಹುಬಲಿ’ ಚಿತ್ರದ ಅನೇಕ ದೃಶ್ಯಗಳು ಐಕಾನಿಕ್ ಆಗಿವೆ. ಪ್ರತಿ ದೃಶ್ಯಗಳಲ್ಲೂ ಅದ್ದೂರಿತನ ಇತ್ತು. ಈಗ ಈ ಸಿನಿಮಾದ ಒಂದು ದೃಶ್ಯವನ್ನು ಕಾಜಲ್ ಅಗರ್ವಾಲ್ ಮರು ಸೃಷ್ಟಿ ಮಾಡಿದ್ದಾರೆ.

‘ಬಾಬಹುಬಲಿ’ ಚಿತ್ರದಲ್ಲಿ ಕಟ್ಟಪ್ಪನ ತಲೆಯಮೇಲೆ ಮಗು ಕಾಲು ಇಡುವ ದೃಶ್ಯ ಇದೆ. ಅದನ್ನು ಕಾಜಲ್ ಅಗರ್ವಾಲ್ ಅವರು ಮರು ಸೃಷ್ಟಿ ಮಾಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ.

ನಟಿ ಕಾಜಲ್ ಅಗರ್ವಾಲ್ ಅವರು ನಟನೆಯಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಕುಟುಂಬದ ಆರೈಕೆಯಲ್ಲಿ ಅವರು ಬ್ಯುಸಿ ಆಗಿದ್ದಾರೆ.

ಕಾಜಲ್ ಅಗರ್ವಾಲ್