Kannada News Photo gallery Kalarava of Ganesha idols in Bangalore, Full demand for Ganesha who accompanies Sri Rama, Kannada news
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗಣೇಶ ಮೂರ್ತಿಗಳ ಕಲರವ; ಶ್ರೀರಾಮನ ಜೊತೆಯಿರೋ ಗಣೇಶನಿಗೆ ಫುಲ್ ಡಿಮ್ಯಾಂಡ್
ಗಣೇಶ ಚತುರ್ಥಿಗೆ ಕೌಂಟ್ ಡೌನ್ ಆರಂಭವಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಕೂಡ ಹಬ್ಬದ ವಾತಾವರಣ ಜೋರಾಗಿದೆ. ಅದರಂತೆ ನಗರದ ಪ್ರಮುಖ ರಸ್ತೆಗಳಲ್ಲಿಯೂ ಗಣೇಶ ಮೂರ್ತಿಗಳು ಕಂಗೋಳಿಸುತ್ತಿದ್ದು, ಒಂದಕ್ಕಿಂತ ಒಂದು ಚೆನ್ನಾಗಿ ಮೂಡಿಬಂದಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
1 / 6
ರಾಜ್ಯ ರಾಜಾಧಾನಿ ಬೆಂಗಳೂರಿನಲ್ಲಿ ಗೌರಿ ಗಣೇಶ ಹಬ್ಬಕ್ಕೆ ಕೌಂಟ್ ಡೌನ್ ಆರಂಭವಾಗಿದ್ದು, ಹಬ್ಬವನ್ನ ಅದ್ದೂರಿಯಿಂದ ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿ ಮಂದಿ ಸಜ್ಜಾಗುತ್ತಿದ್ದಾರೆ. ಹೀಗಾಗಿ ಹಬ್ಬಕ್ಕೆಂದೆ ಬಗೆ-ಬಗೆಯ ಗಣೇಶ ಮೂರ್ತಿಗಳು ಬಂದಿದ್ದು, ಕಂಗೊಳಿಸುತ್ತಿವೆ.
2 / 6
ಹೌದು, ಈ ಬಾರಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಹೆಚ್ಚು ಡಿಮ್ಯಾಂಡ್ ಶುರುವಾಗಿದ್ದು, ಮಣ್ಣಿನಲ್ಲಿ ಮಾಡಿರುವ ಆಕರ್ಷಕ ಗಣೇಶ ಮೂರ್ತಿಗಳು ನೋಡುಗರನ್ನ ಮನಸೆಳೆಯುತ್ತಿವೆ. ಅದರಲ್ಲೂ ಅಯೋಧ್ಯೆಯ ಶ್ರೀರಾಮನ ಜೊತೆಗೆ ಗಣೇಶ ಇರುವಂತಹ ಮೂರ್ತಿಗಳಿಗೆ ಫುಲ್ ಡಿಮ್ಯಾಂಡ್ ಶುರುವಾಗಿದೆ.
3 / 6
ಸಧ್ಯ ಬೆಂಗಳೂರಿನಲ್ಲಿ 3 ಅಡಿಯಿಂದ 5 ಅಡಿಯವರೆಗೂ ಗಣೇಶ ಮೂರ್ತಿಗಳು ಬಂದಿದ್ದು, ಈಗಾಗಲೇ ಮೂರ್ತಿಗಳನ್ನು ಕೊಂಡುಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಇನ್ನು ಈ ಬಾರಿ ಗೌರಿ ಮೂರ್ತಿಗಳು ಕೂಡ ಆಕರ್ಷಕವಾಗಿದ್ದು, ಮಹಿಳೆಯರು ಬಗೆ ಬಗೆಯ ಗೌರಿ ಮೂರ್ತಿಯನ್ನ ತಮ್ಮ ಮನೆಗೆ ಕೊಂಡೊಯ್ಯುತ್ತಿದ್ದಾರೆ.
4 / 6
ಇನ್ನು ಸಣ್ಣ ಗಣೇಶ ಮೂರ್ತಿಗಳಿಂದ ದೊಡ್ಡ ಗಣೇಶ ಮೂರ್ತಿಗಳು ಇದ್ದು, 5 ಸಾವಿರದಿಂದ 50 ಸಾವಿರದವರೆಗೂ ಹಣ ನಿಗಧಿಯಾಗಿದೆ. ಈ ಕುರಿತು ಶೇಖರ್ ಎಂಬುವವರು ಮಾತನಾಡಿ, ‘ಮೂರ್ತಿಗಳ ಭೇಡಿಕೆ ಹೆಚ್ಚಾಗಿದೆ. ಜನರು ಮುಗಿಬಿದ್ದು ಕೊಂಡೊಯ್ಯುತ್ತಿದ್ದಾರಂತೆ.
5 / 6
ಗ್ರಾಹಕರೊಬ್ಬರು ಮಾತನಾಡಿ, ‘ಈ ಬಾರಿ ಗಣೇಶ ಮೂರ್ತಿಗಳ ಬೆಲೆ ಜಾಸ್ತಿಯಾಗಿದೆ. ಆದ್ರೆ, ಮಣ್ಣಿನ ಗಣೇಶ ಮೂರ್ತಿಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಜೊತೆಗೆ ಮಣ್ಣಿನ ಗಣೇಶ ಮೂರ್ತಿಗಳಿಗೆ ಅಲಂಕಾರವು ಚೆನ್ನಾಗಿ ಮಾಡಿದ್ದಾರೆ. ಜೊತೆಗೆ ಅಯೋಧ್ಯೆ ಗಣೇಶ ಮೂರ್ತಿಗಳು ಬಂದಿದ್ದು, ನೋಡೊಕೆ ತುಂಬ ಖುಷಿಯಾಗುತ್ತಿವೆ ಎನ್ನುತ್ತಿದ್ದಾರೆ.
6 / 6
ಒಟ್ಟಿನಲ್ಲಿ ಈ ಬಾರಿ ಅದ್ದೂರಿಯಾಗಿ ಗಣೇಶ ಹಬ್ಬ ಮಾಡುವುದಕ್ಕೆ ಬೆಂಗಳೂರು ಮಂದಿ ಸಜ್ಜಾಗಿದ್ದು, ಸಿಲಿಕಾನ್ ಸಿಟಿ ಜನರ ಅಭಿರುಚಿಗೆ ತಕ್ಕಂತೆ ಗಣೇಶ ಮೂರ್ತಿಗಳು ಬಂದಿದ್ದು, ನೋಡುಗರನ್ನ ಸೆಳೆಯುತ್ತಿವೆ.
Published On - 9:58 pm, Wed, 28 August 24