ಕ್ರೌರ್ಯತೆಯ ಪರಮಾವಧಿ ತೋರಿಸಿದ ‘ಕಂಗುವಾ’ ಟೀಸರ್; ಇಲ್ಲಿದೆ ಸೂರ್ಯ, ಬಾಬಿ ವಿವಿಧ ಗೆಟಪ್

Updated on: Mar 20, 2024 | 8:42 AM

ಇತ್ತೀಚೆಗೆ ‘ಕಂಗುವ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಸಾಕಷ್ಟು ಗಮನ ಸೆಳೆದಿದೆ. ಹೆಣಗಳ ರಾಶಿ, ಫೈಟ್ ಹೀಗೆ ಹಲವು ವಿಚಾರಗಳು ಗಮನ ಸೆಳೆದಿವೆ. ಸಖತ್ ಖಡಕ್ ಆಗಿ ಟೀಸರ್ ಮೂಡಿ ಬಂದಿದೆ.

1 / 7
ತಮಿಳಿನಲ್ಲಿ ಸಿದ್ಧವಾಗುತ್ತಿರುವ ‘ಕಂಗುವ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಸೂರ್ಯ ಅವರು ವಿವಿಧ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಬಾಬಿ ಡಿಯೋಲ್ ಕೂಡ ನಟಿಸಿದ್ದಾರೆ.

ತಮಿಳಿನಲ್ಲಿ ಸಿದ್ಧವಾಗುತ್ತಿರುವ ‘ಕಂಗುವ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಸೂರ್ಯ ಅವರು ವಿವಿಧ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಬಾಬಿ ಡಿಯೋಲ್ ಕೂಡ ನಟಿಸಿದ್ದಾರೆ.

2 / 7

ಇತ್ತೀಚೆಗೆ ‘ಕಂಗುವ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಸಾಕಷ್ಟು ಗಮನ ಸೆಳೆದಿದೆ. ಹೆಣಗಳ ರಾಶಿ, ಫೈಟ್ ಹೀಗೆ ಹಲವು ವಿಚಾರಗಳು ಗಮನ ಸೆಳೆದಿವೆ. ಸಖತ್ ಖಡಕ್ ಆಗಿ ಟೀಸರ್ ಮೂಡಿ ಬಂದಿದೆ.

3 / 7

‘ಕಂಗುವ’ ಸಿನಿಮಾ ಬಗ್ಗೆ ನೀರೀಕ್ಷೆ ಮೂಡಲು ಹಲವು ಕಾರಣಗಳು ಇದ್ದವು. ಈಗ ಟೀಸರ್ ರಿಲೀಸ್ ಆದ ಬಳಿಕ ಈ ನಿರೀಕ್ಷೆ ಹೆಚ್ಚಿದೆ. ‘ಕಂಗುವ’ ಚಿತ್ರಕ್ಕೆ ಶಿವ ಅವರು ನಿರ್ದೇಶನ ಮಾಡಿದ್ದಾರೆ.

4 / 7

ಬಾಬಿ ಡಿಯೋಲ್​ ಕೂಡ ‘ಕಂಗುವ’ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಅವರು ನಟಿಸಿರುವ ಮೊದಲ ದಕ್ಷಿಣ ಭಾರತದ ಚಿತ್ರ ಅನ್ನೋದು ವಿಶೇಷ. ಈ ಚಿತ್ರಕ್ಕೆ ದೇವಿಶ್ರೀ ಪ್ರಸಾದ್​ ಅವರು ಸಂಗೀತ ನೀಡುತ್ತಿದ್ದಾರೆ.

5 / 7

‘ಅನಿಮಲ್​’ ಸಿನಿಮಾದಲ್ಲಿ ಬಾಬಿ ಡಿಯೋಲ್​ ಅಬ್ಬರಿಸಿದ್ದರು. ಇದಾದ ಬಳಿಕ ಅವರಿಗೆ ಹಲವು ಆಫರ್ ಬಂದಿದ್ದವು. ಅವರು ‘ಕಂಗುವ’ ಚಿತ್ರದಲ್ಲಿಯೂ ಕ್ರೂರವಾದ ಅವತಾರ ತಾಳುತ್ತಿದ್ದಾರೆ.

6 / 7

ಟೀಸರ್ ಸಖತ್ ಅದ್ದೂರಿಯಾಗಿ ಮೂಡಿ ಬಂದಿದೆ. ಈ ಮೂಲಕ ಸಿನಿಮಾ ಹೇಗೆ ಇರಲಿದೆ ಎನ್ನುವ ಸೂಚನೆ ಸಿಕ್ಕಿದೆ. ಸೂರ್ಯ ಅವರ ಲುಕ್ ಗಮನ ಸೆಳೆಯುತ್ತಿದೆ.

7 / 7

‘ಕಂಗುವ’ ಚಿತ್ರದ ಸೆಟ್, ಎಲ್ಲರೂ ಹಾಕಿರುವ ಕಾಸ್ಟ್ಯೂಮ್ ಗಮನ ಸೆಳೆಯುತ್ತಿದೆ. ಈ ಚಿತ್ರದ ರಿಲೀಸ್ ಡೇಟ್ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us