ನಿಮಗೆ ಗೊತ್ತಾ? ಕನ್ನಡ ಚಿತ್ರರಂಗದ ಈ ಇಬ್ಬರ ಹೆಸರಲ್ಲಿ ಮಾತ್ರ ಬಂದಿದೆ ಅಂಚೆ ಚೀಟಿ

Updated on: Mar 31, 2025 | 12:48 PM

ಭಾರತೀಯ ಅಂಚೆ ಇಲಾಖೆಯು ಆಗಾಗ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರ ಹೆಸರಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡುತ್ತದೆ. ಈ ಸಾಲಿನಲ್ಲಿ ಕನ್ನಡ ಚಿತ್ರರಂಗದ ಕೆಲವೇ ಕೆಲವು ಸೆಲೆಬ್ರಿಟಿಗಳು ಇದ್ದಾರೆ. ಅದು ಬೇರೆ ಯಾರೂ ಅಲ್ಲ ರಾಜ್​ಕುಮಾರ್ ಹಾಗೂ ವಿಷ್ಣುವರ್ಧನ್. ಆ ಅಂಚೆ ಚೀಟಿಗಳನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ.

1 / 5
ಸ್ವಾತಂತ್ರ್ಯಾ ನಂತರ ಅಂಚೆ ಇಲಾಖೆ ಸಾವಿರಾರು ಅಂಚೆ ಚೀಟಿಗಳು ಹೊರ ತಂದಿದೆ. ಈ ಪೈಕಿ ಕನ್ನಡ ಚಿತ್ರರಂಗದದಿಂದ ಇಬ್ಬರಿಗೆ ಮಾತ್ರ ಈ ಗೌರವ ಸಿಕ್ಕಿದೆ. ಕನ್ನಡದ ಇಬ್ಬರು ಸ್ಟಾರ್ ಹೀರೋಗಳ ಹೆಸರಲ್ಲಿ ಮಾತ್ರ ಅಂಚೆ ಚೀಟಿ ಬಂದಿದೆ.

ಸ್ವಾತಂತ್ರ್ಯಾ ನಂತರ ಅಂಚೆ ಇಲಾಖೆ ಸಾವಿರಾರು ಅಂಚೆ ಚೀಟಿಗಳು ಹೊರ ತಂದಿದೆ. ಈ ಪೈಕಿ ಕನ್ನಡ ಚಿತ್ರರಂಗದದಿಂದ ಇಬ್ಬರಿಗೆ ಮಾತ್ರ ಈ ಗೌರವ ಸಿಕ್ಕಿದೆ. ಕನ್ನಡದ ಇಬ್ಬರು ಸ್ಟಾರ್ ಹೀರೋಗಳ ಹೆಸರಲ್ಲಿ ಮಾತ್ರ ಅಂಚೆ ಚೀಟಿ ಬಂದಿದೆ.

2 / 5

ರಾಜ್​ಕುಮಾರ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಹೀರೋಗಳಲ್ಲಿ ಒಬ್ಬರು. 2009ರಲ್ಲಿ ರಾಜ್​ಕುಮಾರ್ ಹೆಸರಲ್ಲಿ ಅಂಚೆ ಚೀಟಿಯನ್ನು ಹೊರತರಲಾಯಿತು. ಇದು ಭಾರತೀಯ ಅಂಚೆ ವಿಭಾಗವು ರಾಜ್​ಕುಮಾರ್ ಅವರಿಗೆ ನೀಡಿದ ಗೌರವ ಇದಾಗಿದೆ.

3 / 5

ರಾಜ್​ಕುಮಾರ್ ಅಲ್ಲದೆ, ವಿಷ್ಣುವರ್ಧನ್ ಹೆಸರಲ್ಲೂ ಅಂಚೆ ಚೀಟಿಯನ್ನು ಹೊರತಲಾಗಿದೆ. 2013ರಲ್ಲಿ ವಿಷ್ಣುವರ್ಧನ್ ಹೆಸರಿನಲ್ಲಿ ಅಂಚೆ ಚೀಟಿಯನ್ನು ಹೊರತರಲಾಗಿತ್ತು ಅನ್ನೋದು ವಿಶೇಷ. ಆ ಸಂದರ್ಭದ ಅಂಚೆ ಚೀಟಿ ಇಲ್ಲಿದೆ.

4 / 5

ಇನ್ನು, ಪುನೀತ್ ರಾಜ್​ಕುಮಾರ್ 50ನೇ ಜನ್ಮದಿನದ ಪ್ರಯುಕ್ತ ಇತ್ತೀಚೆಗೆ ಪುನೀತ್ ರಾಜ್​ಕುಮಾರ್ ಹೆಸರಿನಲ್ಲಿ ಪೋಸ್ಟ್ ಕಾರ್ಡ್​ಗಳನ್ನು ಬಿಡುಗಡೆ ಮಾಡಲಾಯಿತು. ಬೆಂಗಳೂರು ಕೇಂದ್ರ ಅಂಚೆ ಮಹಾಕಾರ್ಯಾಲಯದಲ್ಲಿ ಪುನೀತ್ ಅವರ ಸ್ಮರಣಾರ್ಥ ವಿಶೇಷ ಪಿಚ್ಚರ್ ಪೋಸ್ಟ್ ಕಾರ್ಡ್ ಬಿಡುಗಡೆ ಮಾಡಲಾಗಿದೆ.

5 / 5

ಡಾಲಿ ಧನಂಜಯ ಕೈ ಬರಹದಲ್ಲಿ ಆಮಂತ್ರಣ ಪತ್ರ ಬರೆದು ಅದನ್ನು ಮುದ್ರಿಸಿ ಎಲ್ಲ ಕಡೆಗಳಲ್ಲಿ ಹಂಚಿದ್ದರು. ಈ ಆಮಂತ್ರಣ ಪತ್ರಕ್ಕೆ ಖುಷಿಯಾದ ಮೈಸೂರು ಅಂಚೆ ಇಲಾಖೆ, ಶುಭ ವಿವಾಹ ಎಂಬ ಸಾಲಿನೊಂದಿಗೆ ವಿಶೇಷವಾಗಿರುವ 12 ಸ್ಟ್ಯಾಂಪ್ ಗಳನ್ನ ಉಡುಗೊರೆಯಾಗಿ ನೀಡಿತ್ತು. ಇದರಲ್ಲಿ ಡಾಲಿ ಹಾಗೂ ಧನ್ಯತಾ ಫೋಟೋಗಳು ಇದ್ದವು. ಇದು ಕೇವಲ ಉಡುಗೊರೆ ಆಗಿತ್ತು ಅಷ್ಟೇ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us