Kannada News Photo gallery Kannada Rajyotsava 2022: Here is the Karnataka Unification and Formation agitators details to remember in on Kannada Rajyotsava
Kannada Rajyotsava 2022: ಕರ್ನಾಟಕದ ಏಕೀಕರಣದ ಹೋರಾಟಗಾರರ ಕುರಿತ ಒಂದಿಷ್ಟು ಮಾಹಿತಿ
ಹರಿದು ಹಂಚಿ ಹೋದ ಕನ್ನಡ ಸಂಸ್ಕೃತಿಯನ್ನು ಹೊಂದಿದ್ದ ಭೂಭಾಗಗಳು, ಕನ್ನಡ ಮಾತನಾಡುವ ಜನರನ್ನ ಒಂದೇ ಆಳ್ವಿಕೆಯಡಿಯಲ್ಲಿ ಅಂದರೆ ಕನ್ನಡ ಧ್ವಜದ ಪರಿಕಲ್ಪನೆಯ ಅಡಿಯಲ್ಲಿ ಒಗ್ಗೂಡಿಸುವ ಸಲುವಾಗಿ ಪ್ರಾರಂಭಗೊಂಡ ಹೋರಾಟವೇ ಕರ್ನಾಟಕ ಏಕೀಕರಣದ ಹೋರಾಟ.
ಕನ್ನಡವು ಶಿಕ್ಷಣ ಮಾಧ್ಯಮವಾಗಿ ಕನ್ನಡಿಗರಲ್ಲಿ ಜಾಗೃತಿ ಮೂಡಲು ಕಾರಣವಾದುದು ಒಂದೆಡೆಯಾದರೆ, ಇನ್ನೊಂದೆಡೆ, ಕರ್ನಾಟಕದ ಇತಿಹಾಸ, ಸಾಹಿತ್ಯ, ಸಂಸ್ಕೃತಿಯನ್ನು ಕನ್ನಡಿಗರಲ್ಲಿ ಅಭಿಮಾನ ಹೆಚ್ಚಿಸುವ ಸಲುವಾಗಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಯಾಯಿತು. ಈ ಸಂಘ ಸ್ಥಾಪನೆಯಾಗಲು ಕಾರಣೀಕರ್ತರಾದವರೆಂದರೆ ರಾಮಚಂದ್ರ ಹಣವಂತ ದೇಶಪಾಂಡೆಯವರು. ಇವರು ಮುಂಬಯಿನ ವಿ.ವಿ.ಯಲ್ಲಿ 1884ರಲ್ಲಿ ಕನ್ನಡ ಎಂ.ಎ. ಪದವಿ ಪಡೆದು, ಮುಖ್ಯೋಪಾಧ್ಯಾಯರಾಗಿ, ನಂತರ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣಾಧಿಕಾರಿ ಸೇವೆ ಸಲ್ಲಿಸಿದವರು.
3 / 9
ಕರ್ನಾಟಕ ಸಾಹಿತ್ಯ ಪರಿಷತ್ತು:
ಬೆಂಗಳೂರಿನಲ್ಲಿ 1915ರಲ್ಲಿ ಸ್ಥಾಪನೆಯಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ಹಾಗು ಸರ್ ಎಂ ವಿಶ್ವೇಶ್ವರಯ್ಯರವರ ಮುಂದಾಳತ್ವದಲ್ಲಿ ಸ್ಥಾಪಿಸಲಾಯಿತು. ಇದರ ಮೊದಲ ಅಧ್ಯಕ್ಷ ಸ್ಥಾನವನ್ನು ಹೆಚ್ ವಿ ನಂಜುಡಯ್ಯನವರು. ಇದು ಕರ್ನಾಟಕವನ್ನು ಏಕೀಕರಣಗೊಳಿಸುವ ಮುಖ್ಯ ಉದ್ದೇಶವನ್ನು ಹೊಂದಿತ್ತು.
4 / 9
ಕರ್ನಾಟಕ ಏಕೀಕರಣದಲ್ಲಿ ಪ್ರಭಾವ ಬೀರಿದ ಪ್ರಮುಖ ಕನ್ನಡ ಗೀತೆಗಳು
ಗೋವಿಂದ ಪೈಯವರ ತಾಯಿ ಬಾರೇ ಮೊಗವ ತೋರೇ.
ಕುವೆಂಪುರವರ ಜಯ ಭಾರತ ಜನನಿಯ ತನು ಜಾತೆ.
ಬಿ ಎಂ ಶೀ ಕಂಠಯ್ಯನವರ ಏರಿಸು ಹಾರಿಸು ಬಾವುಟ.
ಹುಯಿಲಗೋಳ ನಾರಾಯಣನವರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು.
5 / 9
1924ರಲ್ಲಿ ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನದಲ್ಲಿ ಕರ್ನಾಟಕ ಏಕೀಕರಣ ಸಮಿತಿಯನ್ನು ರಚಿಸಲಾಗುತ್ತದೆ ಜೊತೆಗೆ ಕರ್ನಾಟಕ ಏಕೀಕರಣದ ಮೊದಲ ಅಧ್ಯಕ್ಷರಾಗಿ ಸಿದ್ದಪ್ಪ ಕಂಬಳಿಯವರನ್ನ ನೇಮಕ ಮಾಡಲಾಗುತ್ತದೆ. ಇದು ಕರ್ನಾಟಕ ಏಕೀಕರಣದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
6 / 9
ದೇವರಾಜ್ ಅರಸು
ಮೈಸೂರು ರಾಜ್ಯದ ಹೆಸರನ್ನು 1 ನವೆಂಬರ್ 1973 ರಂದು "ಕರ್ನಾಟಕ" ಎಂದು ಬದಲಾಯಿಸಲಾಯಿತು. ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಾಗ ದೇವರಾಜ್ ಅರಸು ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
7 / 9
ಎಸ್. ಆರ್. ಬೊಮ್ಮಾಯಿರವರು ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾಲೇಜು ದಿನಗಳಿಂದಲೇ ಕ್ರಾಂತಿಕಾರಕ, ವಿನೂತನ ರಾಜಕೀಯ ಸಿದ್ಧಾಂತ ಹೊಂದಿದವರಾಗಿದ್ದರು.ಹಲವು ಭಾಗಗಳಾಗಿ ಹಂಚಿಹೋಗಿದ್ದ ಮೈಸೂರು ಸಂಸ್ಥಾನವನ್ನು ಕರ್ನಾಟಕವಾಗಿ ಒಗ್ಗೂಡಿಸುವಲ್ಲಿ ಇವರ ಪಾತ್ರ ಅಪಾರವಾದುದು. ಇವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರೂ ಹಾಗು ಹಲವು ಬಾರಿ ಹುಬ್ಬಳ್ಳಿ ಗ್ರಾಮಾಂತರ ಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆಯಾಗಿದ್ದರು.
8 / 9
ಎಸ್ ನಿಜಲಿಂಗಪ್ಪ ಇವರಿಗೆ ನವಕರ್ನಾಟಕದ ನಿರ್ಮಾತೃ ಎಂಬ ಬಿರುದು ಇದೆ. ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ನಿಜಲಿಂಗಪ್ಪ ನವರು ಏಕೀಕೃತ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯೂಗಿ ಸೇವೆ ಸಲ್ಲಿಸಿದ್ದಾರೆ. ಶರಾವತಿ ಜಲವಿದ್ಯುತ್ ಯೋಜನೆ ಮತ್ತು ಕಾಳಿ ವಿದ್ಯುತ್ ಯೋಜನೆಯ ಪ್ರಮುಖ ರೂವಾರಿ ಇವರು ಎಂಬುದು ಹೆಮ್ಮೆಯ ವಿಷಯ.