‘ಕನ್ನಡತಿ’ ಧಾರಾವಾಹಿ ಮೂಲಕ ಫೇಮಸ್ ಆದವರು ನಟಿ ರಂಜನಿ ರಾಘವನ್. ಅವರು ಸಿನಿಮಾ ಕೆಲಸಗಳ ಮೂಲಕವೂ ಫೇಮಸ್ ಆಗಿದ್ದಾರೆ.
ರಂಜನಿ ರಾಘವನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗೋಸ್ಕರ ಅವರು ವಿಶೇಷ ಫೋಟೋ ಹಂಚಿಕೊಳ್ಳುತ್ತಾರೆ.
ಈಗ ರಂಜನಿ ಅವರು ನೀಲಿ ಬಣ್ಣದ ಸೀರೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ‘ನೀಲಿ ನೀಲಿ ನಿನ್ನ ಕಣ್ಣಲಿ ಹುಡುಕುವೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಈ ಫೋಟೋನ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.
‘ಕನ್ನಡತಿ’ ಧಾರಾವಾಹಿ ಕೊನೇ ಹಂತದಲ್ಲಿದೆ. ಕೆಲವೇ ದಿನಗಳಲ್ಲಿ ಈ ಧಾರಾವಾಹಿ ಪೂರ್ಣಗೊಳ್ಳಲಿದೆ. ಈ ಧಾರಾವಾಹಿಯಲ್ಲಿ ರಂಜನಿ ಅವರು ಭುವಿ ಆಗಿ ನಟಿಸುತ್ತಿದ್ದಾರೆ.
ರಂಜನಿ ಅವರು ಹಿರಿತೆರೆಯಲ್ಲೂ ಬ್ಯುಸಿ ಆಗಿದ್ದಾರೆ. ‘ಕನ್ನಡತಿ’ ಧಾರಾವಾಹಿ ಪೂರ್ಣಗೊಂಡ ನಂತರ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಆಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.